Breaking News

ಕವಲೂರು ಗ್ರಾಮದಲ್ಲಿ ದಾಲ್ ಮಿಲ್ ಘಟಕ ಉದ್ಘಾಟನೆ:ಸಂಜಿವಿನಿ ಸ್ವಸಹಾಯ ಸಂಘದ ಮಹಿಳೆಯರಿಂದ ಕಾರ್ಯನಿರ್ವಹಣೆ

Dal Mill Unit inaugurated in Kavalur village: Work is being carried out by women of Sanjeevini Self-Help Association

ಜಾಹೀರಾತು
ಕವಲೂರು ಗ್ರಾಮದಲ್ಲಿ ದಾಲ್ ಮಿಲ್ ಘಟಕ ಉದ್ಘಾಟನೆ (2)


ಕೊಪ್ಪಳ ಆಗಸ್ಟ್ 28 (ಕರ್ನಾಟಕ ವಾರ್ತೆ): ಸಂಜೀವಿನಿ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಬರುವ ಪ್ರಧಾನ ಮಂತ್ರಿ ವನಧನ ವಿಕಾಸ ಕೇಂದ್ರದಡಿ ಕವಲೂರು ಗ್ರಾಮದಲ್ಲಿ ಪ್ರಾರಂಭಿಸಿದ ದಾಲ್ ಮಿಲ್ ಘಟಕವನ್ನು ಮಂಗಳವಾರದಂದು ಕವಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಮ್ಮ ಬಿಸರಹಳ್ಳಿ ರಿಬ್ಬನ್ ಕಟ್ ಮಾಡುವ ಮೂಲಕ ವನಧನ ವಿಕಾಸ ಕೇಂದ್ರದ ದಾಲ್ ಮಿಲ್ ಘಟಕಕ್ಕೆ ಚಾಲನೆ ನೀಡಿದರು.

ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ (1)


 ಕೊಪ್ಪಳ ತಾಲೂಕ ಪಂಚಾಯಯ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಂಜೀವಿನಿ- ಎನ್‌ಆರ್‌ಎಲ್‌ಎಂ ಯೋಜನೆಯು ತುಂಬಾ ಸಹಕಾರಿಯಾಗಿದೆ. ಪ್ರಧಾನ ಮಂತ್ರಿ ವನಧನ ವಿಕಾಸ ಕೇಂದ್ರದಡಿ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಸ್ವಸಹಾಯ ಸಂಘದ ಮಹಿಳೆಯರಿಗಾಗಿ ದಾಲ್ ಮಿಲ್ ಘಟಕವನ್ನು ಪ್ರಾರಂಭಿಸಿದ್ದು, ಕೃಷಿ ಉತ್ಪನ್ನವನ್ನು ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡುವುದು ಯೋಜನೆಯ ಉದ್ದೇಶವಾಗಿದ್ದು ಇದನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋಗಿ, ಉತ್ತಮ ಗುಣಮಟ್ಟದ ತೊಗರಿ ಬೇಳೆ, ಹೆಸರು ಬೇಳೆ, ಕಡ್ಲೆ ಬೇಳೆ ತಯಾರು ಮಾಡಿ ಮಾರುಕಟ್ಟೆಗೆ ಪೂರೈಕೆ ಮಾಡುವಂತೆ ಕರೆ ನೀಡಿದರು. ಇದರಿಂದ ಸಂಘದ ಮಹಿಳೆಯರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಕಾರಿಯಾಗಿದೆ. ಈ ಯೋಜನೆಯನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕ ಸಬಲರಾಗುವಂತೆ ಕರೆ ನೀಡಿದರು.

ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ (2)


 ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನ್ನಪೂರ್ಣ ಪೂಜಾರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅನಿತಾ ಕಿಲ್ಲೇದ್, ಕಾರ್ಯದರ್ಶಿ ನೀಲಮ್ಮ, ಸಂಜೀವಿನಿ ಯೋಜನೆಯ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ್, ಯುವ ವೃತ್ತಿಪರ ಮಂಜುನಾಥ, ಶರಣಪ್ಪ, ಕಲ್ಪವೃಕ್ಷ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ರೇಣುಕಾ ಜೋಗಿನ್, ಉಪಾಧ್ಯಕ್ಷರಾದ ಗೀತಾ, ಕಾರ್ಯದರ್ಶಿ ಹುಸೇನ್ ಬೀ, ಒಕ್ಕೂಟದ ಸರ್ವ ಸದಸ್ಯರು, ಒಕ್ಕೂಟದ ಸಿಬ್ಬಂದಿಗಳು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.