The work of Sri Dharmasthala Institute is commendable: Paranna Munavalli

ಗಂಗಾವತಿ: ಅನೇಕ ಮಹಿಳೆಯರಿಗೆ ಸ್ವಾವಲಂಬಿಗಳಾಗಲು ಸಾಲ ಸೌಲಭ್ಯ, ದೇವಸ್ಥಾನಗಳ ಕಟ್ಟಡಗಳಿಗೆ ಧನ ಸಹಾಯ, ಸರಕಾರಿ ಶಾಲಾ ಮಕ್ಕಳಿಗೆ ಸ್ಕಾಲರ್ ಶಿಪ್ ಸೇರಿದಂತೆ, ಆರೋಗ್ಯ ಸೇವೆ ಇತರೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಧರ್ಮಸ್ಥಳ ಶ್ರೀ ಕ್ಷೇತ್ರದ ಸೇವಾ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಗಂಗಾವತಿ ಸಹಯೋಗದಲ್ಲಿ ಸಮೀಪದ ವಡ್ಡರಹಟ್ಟಿ ಜಿ ವಿ ಎಸ್ ಗಾರ್ಡನ್‌ನಲ್ಲಿ ೧೯೭೧ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮದ್ಯ ಸೇವನೆ ಸಾಮಾಜಿಕ ಪಿಡುಗುಗಳಲ್ಲೊಂದು ಅನೇಕರು ವ್ಯಸನಿಗಳಾಗಿ ಕುಟುಂಬಕ್ಕೆ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಕುಟುಂಬಕ್ಕೆ ಶಕ್ತಿಯಾಗುವ ಯಜಮಾನನೇ ದಾಸನಾದಲ್ಲಿ ಆ ಕುಟುಂಬ ಬೀದಿಗೆ ಬೀಳಲಿದೆ. ಮನೆಯಲ್ಲಿ ಅನೇಕ ಸಮಸ್ಯೆಗಳು ತಲೆದೂರಲಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಇಂಥ ಅಮುಲ್ಯ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಗುಣಗಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನ ಮುದಿಗೌಡ ಮಾಲಿ ಪಾಟೀಲ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ *ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ ಆರ್ ಶ್ರೀನಾಥ್ ಮಾತನಾಡಿ, ಶ್ರೀ ಕ್ಷೇತ್ರಕ್ಕೆ ಅನೇಕರು ಅಪಚಾರ ತರುವ ಯತ್ನ ಮಾಡಿದರು ಆದರೆ ಮೋಡಸರಿದಂತೆ ಎಲ್ಲವು ದೂರವಾಗಿ ಕ್ಷೇತ್ರದಲ್ಲಿ ನಡೆಯುತ್ತಿದೆ ಎನ್ನವ ಕಳಂಕಗಳು ನಿಚ್ಛಳವಾಗಿ ಪ್ರಜ್ವಲಿಸದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವ ಪ್ರಮುಖರಾದ ನಟರಾಜ್ ಬಾದಾಮಿ, ನೀಲಕಂಠ ನಾಗಶೆಟ್ಟಿ, ಚನ್ನವೀರನಗೌಡ ಕೋರಿ, ಮಲ್ಲಿಕಾರ್ಜುನ್ ನೋಲ್ವಿ, ಭಾರತಿ ಕೃಷ್ಣ ಅಗಲೂರ್, ಗೋವರ್ಧನ್, ದೇವೇಂದ್ರಪ್ಪ, ನಾರಾಯಣಪ್ಪ, ನಾಗರತ್ನ, ಲಕ್ಷಿ÷್ಮ ಗಣೇಶ್, ನಿಮಿಷಾಂಬ ಹಾಗು ಲಕ್ಷ÷್ಮಮ್ಮ ಇತರರಿದ್ದರು.