Taluka Guarantee Committee members visit Annabhagya ration rice warehouse

ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿರುವ ಗೋದಾಮೊಂದರಲ್ಲಿ ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮವಾಗಿ ಲೋಡ್ ಆಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಗಂಗಾವತಿ ತಾಲೂಕ ಗ್ಯಾರಂಟಿ ಸಮಿತಿ ಸದಸ್ಯರು ಪರಿಶೀಲಿಸಲು ತೆರಳಿದಾಗ ಈ ಘಟನೆ ಬಯಲಾಗಿದೆ. ಅಧಿಕಾರಿಗಳಿಗೆ ಕೇಳಿ ಮಾಹಿತಿ ಪಡೆಯುವಾಗ ಎರಡು ವರ್ಷದ ಹಿಂದೆ ಮಿಲ್ ಒಂದರಲ್ಲಿ ಸೀಜ್ ಮಾಡಲಾದ 168.40 ಕ್ವಿಂಟಾಲ್ ಅಕ್ಕಿಯನ್ನು ಕೋರ್ಟ್ ಆದೇಶದ ಮೇರೆಗೆ ಹಿಂದುರಿಗಿಸಲಾಗುತ್ತಿದೆ ಎಂದಿದ್ದರು.

ಆದರೆ ಲಾರಿಯಲ್ಲಿ ಸುಮಾರು 500ಕ್ಕೂ ಅಧಿಕ ಸುಮಾರು 50 ಕೆಜಿ ಚೀಲಗಳು (ಅಂದಾಜು 275 ಕ್ವಿಂಟಲ್) ಲೋಡ್ ಮಾಡಲಾಗಿ ಇನ್ನುಳಿದ ಸುಮಾರು 500 ಚೀಲ ಗೋಡಾನ್ ನಲ್ಲಿ ಪ್ಲಾಸ್ಟಿಕ್ ಚೀಲಕ್ಕೆ ಬದಲಾಯಿಸುತಿದ್ದದನ್ನು ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ. ತಹಶೀಲ್ದಾರ್ ನೇತೃತ್ವದಲ್ಲಿ ಲಾರಿಯನ್ನು ಅಕ್ಕಿಯ ಸಮೇತ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಕಾನೂನು ರೀತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಗ್ಯಾರಂಟಿ ಯೋಜನಾ ಅನುಷ್ಟಾನ ಸಮಿತಿ ಗಂಗಾವತಿ ತಾಲೂಕ ಅಧ್ಯಕ್ಷ ಡಾ. ವೆಂಕಟೇಶ ಬಾಬು ತಿಳಿಸಿದ್ದಾರೆ.