Navali Veerabhadreshwara Jayanthotsava celebrated with religious rituals

ನವಲಿ ಗ್ರಾಮದ ಇತಿಹಾಸ ಪ್ರಸಿದ್ದ ಹಾಗೂ ನಾಡಿನಾಧ್ಯಂತ ಭಕ್ತ ಸಮೂಹ ಹೊಂದಿರುವ ಕ್ಷೇತ್ರಾಧೀಶ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಾದ್ರಪ ಮಾಸದ ಮೊದಲ ಶುಭ ಮಂಗಳವಾರದಂದು ಶಿವ ಸಂತತಿಯ ವೀರಗೋತ್ರಾಧೀಶ ರೌದ್ರವತಾರಿ ಶ್ರೀ ವೀರಭದ್ರೆಶ್ವರನ ಜಯಂತೋತ್ಸವ ಆಚರಿಸಲಾಯಿತು.
ತ ನಿಮಿತ್ಯ ವೈದ್ದಿಕ ಪುರೋಹಿತರಾದ ಮಾರ್ಕಂಡಯ್ಯ ಸ್ವಾಮಿ ಇವರು ಮೂಲ ದೇವರಿಗೆ ರುದ್ರಾಭೀಷೇಕ, ಸಹಸ್ರ ಭೀಲ್ವಾರ್ಚನೆ, ಮಹಾ ಮಂಗಳಾರುತಿ, ಧಾರ್ಮಿಕ ವಿಧಿವಿಧಾನಗಳು ಜರುಗಿಸಿದರು, ನಂತರ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಉತ್ಸವ ಮೂರ್ತಿಗೆ ಶಿವ ಸಂಕಲ್ಪ ಹಾಗೂ ವೇದ ಪಠಣ ನಂತರ ಪ್ರಸಾದ ವಿತರಿಸಲಾಯಿತು. ಸಂದರ್ಬದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಈಶ್ವರಯ್ಯ ಸ್ವಾಮಿ, ಗುರುಶಾಂತವೀರಯ್ಯ ಸ್ವಾಮಿ, ಜಡಿಸಿದ್ದಯ್ಯ ಸ್ವಾಮಿ, ಶಿವಯ್ಯ ಸ್ವಾಮಿ, ಗ್ರಾಮದ ಪ್ರಮುಖರಾದ ನಾಗನಗೌಡ ಮಾಲಿ ಪಾಟೀಲ್, ಸಿದ್ದಲಿಂಗಯ್ಯ ಸ್ವಾಮಿ ಕಲ್ಮಠ, ಚೆನ್ನಬಸವನಗೌಡ ಪೋಲಿಸ್ ಪಾಟೀಲ್, ತಿಮ್ಮನಗೌಡ ಪೋ,ಪಾಟೀಲ್, ವೀರಭದ್ರಗೌಡ ಪಾಟೀಲ್, ಜನನಿ ಶಾಲೆಯ ಮುಖ್ಯಸ್ಥರಾದ ಸಿದ್ದಲಿಂಗಯ್ಯ ಹಿರೇಮಠ, ಅಮರೇಶ ಕ್ಯಾಡೆದ, ಸಿದ್ದನಗೌಡ ಖ್ಯಾಡೇದ, ಮಲ್ಲಪ್ಪ ಪಟ್ಟಣಶೆಟ್ಟಿ ವಿರೇಶ ಸ್ವಾಮಿ ಕುರಕುಂದಿ ಹಾಗೂ ಸದ್ಭಕ್ತರು, ಗ್ರಾಮಸ್ತರು ಉಪಸ್ಥಿತರಿದ್ದರು