Transport and Excise Minister Ramalinga Reddy’s tour of Koppal district

—-
ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಸಾರಿಗೆ ಮತ್ತು ಮುಜರಾಯಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಆಗಸ್ಟ್ 26 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯವನ್ನು ಹಮ್ಮಿಕೊಂಡಿರುತ್ತಾರೆ.
ಸಚಿವರು ಆ. 26 ರಂದು ಮಧ್ಯಾಹ್ನ 12.30 ಗಂಟೆಗೆ ಬೆಂಗಳೂರಿನಿಂದ ನಿರ್ಗಮಿಸಿ ರಸ್ತೆಯ ಮೂಲಕ ಹೊರಟು ಸಂಜೆ 5.30 ಗಂಟೆಗೆ ಶ್ರೀ ಕ್ಷೇತ್ರ ಹುಲಗಿ ಆಗಮಿಸಿ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಹುಲಿಗೆಮ್ಮ ಕ್ಷೇತ್ರದಲ್ಲಿ ತುಂಗಭದ್ರಾ ಆರತಿ ಮಹೋತ್ಸವ ಮತ್ತು ಭಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ (ತುಂಗಭದ್ರಾ ನದಿತೀರ, ಶ್ರೀ ಕ್ಷೇತ್ರ ಹುಲಗಿ) ಭಾಗವಹಿಸುವರು. ಕಾರ್ಯಕ್ರಮದ ನಂತರ ಸಂಜೆ 7.30 ಗಂಟೆಗೆ ಹುಲಗಿಯಿಂದ ರಸ್ತೆಯ ಮೂಲಕ ಕೇಂದ್ರಸ್ಥಾನ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.