Manohar Gowda warns government of major protest if slanderous propaganda about Dharmasthala is not stopped

ಗಂಗಾವತಿ : ಧರ್ಮಸ್ಥಳ ಪುಣ್ಯಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ, ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸುವಂತೆ ಆಗ್ರಹಿಸಿ ಬೇಕೆಂದು ಬಿಜೆಪಿ ಮುಖಂಡ ಮನೋಹರಗೌಡ ಹೇರೂರು ಒತ್ತಾಯಿಸಿದ್ದರು
ನಗರದ ದೈವಜ್ಞ ಬ್ರಾಹ್ಮಣ ಸಮಾಜ ಮತ್ತು ಸದ್ಭಾವನಾ ಸೇವಾ ಸಂಸ್ಥೆಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದ ಅವರು ಅಪಪ್ರಚಾರ ನಡೆಸುತ್ತಿರುವ ಹಿಂದೆ ಇರುವ ವ್ಯಕ್ತಿಗಳನ್ನು ಮೊದಲು ಸರಕಾರ ಪತ್ತೆ ಹಚ್ಚಬೇಕು. ನಮ್ಮ ಶಾಸಕರಾಗಿರುವ ಜನಾರ್ಧನರೆಡ್ಡಿ ಅವರು ಈ ವಿಷಯವನ್ನು ನೇರವಾಗಿ ಹೇಳಿದ್ದಾರೆ. ಧರ್ಮಸ್ಥಳ ಒಡೆಯುವುದು ಮತ್ತು ಹಿಂದುಗಳನ್ನು ಬೇರೆ ಮಾಡುವಂತಹ ಉನ್ನಾರ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿರುವ ಯೂಟ್ಯೂಬರ್, ಪೂರ್ವಾಪರ ಯೋಚನೆ ಮಾಡದೆ ಎಸ್‌ಐಟಿ ತನಿಖೆ ರಚನೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸದ್ಭಾವನಾ ಸಂಸ್ಥೆಯ ಪ್ರಮುಖರಾದ ಸುಬ್ರಮಣ್ಯ ಭಟ್ ರಾಯ್ಕರ್ ಮತ್ತು ಹಿಂದು ಜಾಗರಣಾ ವೇದಿಕೆ ಪ್ರಾಂತ ಪ್ರಮುಖ ನೀಲಕಂಠ ನಾಗಶೆಟ್ಟಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುವ ಕೆಲಸವನ್ನು ಸರ್ಕಾರಕ್ಕೂ ಮಾಡಲಿಕ್ಕೆ ಆಗುವುದಿಲ್ಲ. ಮಹಿಳೆಯರ ಸಬಲೀಕರಣಕ್ಕೆ ಸಾಲ, ಶಿಕ್ಷಣಕ್ಕೆ ಉತ್ತೇಜನ, ಆರೋಗ್ಯಕ್ಕೆ ವೈದ್ಯಕೀಯ ಸೇವೆ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ನೀಡಲು ಕಟಿಬದ್ಧವಾಗಿದೆ. ಇದನ್ನು ಸಹಿಸದ ಸರ್ಕಾರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದೆ. ಅಪಪ್ರಚಾರ ಮಾಡುವ ಮುಸುಕುದಾರಿ ವ್ಯಕ್ತಿ, ಮಟ್ಟೆಣ್ಣವರ, ಸಮೀರ್, ಸುಜಾತಾ ಭಟ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೆ, ಗೃಹ ಸಚಿವರೇ ನಿಮಗೇನಾದರೂ ವಿವೇಚನೆ ಇದ್ದರೆ ಪ್ರಕರಣವನ್ನು ಎಸ್ಐಟಿ ಬದಲಿಗೆ ಎನ್ಐಎ ತನಿಖೆಗೆ ಒಳಪಡಿಸಿ. ಅಪಪ್ರಚಾರ ಮಾಡುವ ಯೂಟ್ಯೂಬರ್‌ಗಳಿಗೆ ವಿದೇಶದಿಂದ ಅಕ್ರಮ ಹಣ ಬರುವ ಸಂಶಯವಿದ್ದು, ಇದನ್ನು ತನಿಖೆ ನಡೆಸಬೇಕು. ಎಲ್ಲರಿಗೂ ಮಂಪರು ಪರೀಕ್ಷೆ ಮಾಡಿಸಿ ಸತ್ಯಾಸತ್ಯತೆ ಹೊರಗೆಳೆಯಬೇಕು. ಧರ್ಮದ ಮೇಲೆ ನಂಬಿಕೆ ಇಟ್ಟಿರುವ ಧರ್ಮಸ್ಥಳ ಭಕ್ತರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ವಿಠಲ್ ನಾವಡೆ, ಶ್ರವಣಕುಮಾರ್ ರಾಯ್ಕರ್, ಸಿರಿಗೇರಿ ಕಾಶಿನಾಥ್, ಕೆ, ನಾಗೇಶ್, ಅಶೋಕ್ ಕುಮಾರ್ ರಾಯ್ಕರ್, ಬಾಲಾಜಿ ಪಾಲಂಕರ, ಚಂದ್ರಕಾಂತ್ ದರೋಜಿ ಮತ್ತಿತರು ಇದ್ದರು.