Breaking News

ಅಪರಿಚಿತ ವ್ಯಕ್ತಿಯ ಶವದ ವಾರಸುದಾರರ ಪತ್ತೆಗೆ ಮನವಿ

Appeal to find heirs of unidentified body

ಜಾಹೀರಾತು

ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಹೊಂಬಳ-ಗದಗ ರೈಲ್ವೇ ನಿಲ್ದಾಣಗಳ ಮದ್ಯ 2025ರ ಆಗಸ್ಟ್ 21 ರಂದು ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿ ಯಾವುದೋ ರೈಲುಗಾಡಿಯ ಮುಂದೆ ಬಿದ್ದು ಮೃತಪಟ್ಟಿದ್ದು, ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ. ಈ ಬಗ್ಗೆ ಗದಗ ರೈಲ್ವೇ ಪೊಲೀಸ್ ಠಾಣೆಯ ಯುಡಿಆರ್ ನಂ: 36/2025 ಕಲಂ: 194 ಬಿ.ಎನ್.ಎಸ್.ಎಸ್. ಅಡಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ ಚಹರೆ:
ಮೃತ ವ್ಯಕ್ತಿಯು ಅಗಲವಾದ ಮುಖ, ಅಗಲವಾದ ಮೂಗು ಮತ್ತು ಹಣೆ, ಗೋಧಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 5.3 ಅಡಿ ಎತ್ತರ, ತಲೆಯಲ್ಲಿ ಸುಮಾರು 1 ಇಂಚು ಕಪ್ಪು ಕೂದಲುಗಳಿದ್ದು, ಸುಮಾರು 1/2 ಇಂಚು ಕಪ್ಪು ಕುರಚಲು ದಾಡಿ-ಮೀಸೆ ಇರುತ್ತವೆ. ಮೃತನ ಮೈಮೇಲೆ ಒಂದು ನೀಲಿ ಕಲರಿನ ಆಫ್ ಟಿ-ಶರ್ಟ್, ಒಂದು ಕೆಂಪು ಕಲರಿನ ಫುಲ್ ಶರ್ಟ್, ಒಂದು ಬೂದು ಕಲರಿನ ಬರ್ಮುಡಾ ಧರಿಸಿರುತ್ತಾರೆ.
ಮೇಲ್ಕಂಡ ಚಹರೆ ಪಟ್ಟಿಗೆ ಹೋಲಿಕೆಯಾಗುವಂತಹ ವ್ಯಕ್ತಿ ಕಾಣೆಯಾಗಿದ್ದಲ್ಲಿ, ಸಂಬAಧಿಕರು ಹಾಗೂ ವಾರಸುದಾರರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಗದಗ ರೈಲ್ವೇ ಪೊಲೀಸ್ ಠಾಣೆ ದೂ.ಸಂ: 08372-278744, ಮೊ.ಸಂ: 9480802128, ಇ-ಮೇಲ್:  gadagrly@ksp.gov.in     ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ: 080-22871291 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗದಗ ರೈಲ್ವೇ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.