Maruti Eye Hospital 25th Anniversary. Free eye treatment camp.

ಗಂಗಾವತಿ. ಸಮೀಪದ ಸೊಳೆಕಲ್ ಗ್ರಾಮದ ಶ್ರೀ ರಾಜರಾಜೇಶ್ವರಿ ಬೃಹನ್ ಮಠದಲ್ಲಿ. ಪೂಜ್ಯರಾದ ಶ್ರೀ ಭುವನೇಶ್ವರ ತಾತನವರ ದಿವ್ಯ ಸಾನಿಧ್ಯದಲ್ಲಿ. ಮಾರುತಿ ಕಣ್ಣಿನ ಆಸ್ಪತ್ರೆಯ 25ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಔಷಧಿ ಮಾತ್ರೆಗಳ ವಿತರಣೆ ಕಾರ್ಯಕ್ರಮ ರವಿವಾರದಂದು ಜರುಗಿತು. ಈ ಸಂದರ್ಭದಲ್ಲಿ. ಶ್ರೀಮಠದ ಶರಣರಾದ ಪರಮಪೂಜ್ಯ ಶ್ರೀ ಭುವನೇಶ್ವರ ತಾತನವರು ಮಾತನಾಡಿ ಗಂಗಾವತಿಯಲ್ಲಿ ಕಳೆದ 25 ವರ್ಷದಿಂದ ಡಾಕ್ಟರ್ ಹನುಮಂತಪ್ಪ ಹಾಗೂ ಶ್ರೀಮತಿ ಪರಿಮಳ ಹನುಮಂತಪ್ಪ ಅವರು ಕಣ್ಣಿನ ಮತ್ತು ದಂತ ಚಿಕಿತ್ಸೆಯ ಆಸ್ಪತ್ರೆಯನ್ನು ಆರಂಭಿಸಿ ಇಂದಿಗೆ 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾಮದ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ನೇತ್ರ ಹಾಗೂ ಅಗತ್ಯ ಹೊಂದಿದ ಕಣ್ಣಿನ ರೋಗಿಗಳಿಗೆ ಉಚಿತವಾಗಿ ಕನ್ನಡಕವನ್ನು ಕೊಡುವುದರ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಇತರರಿಗೆ

ಮಾದರಿಯಾಗಿದೆ ಎಂದು ಆಶೀರ್ವದಿಸಿದರು.. ಡಾಕ್ಟರ್ ಹನುಮಂತಪ್ಪ ಮಾತನಾಡಿ. ಗಂಗಾವತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅತ್ಯಂತ ಪ್ರೀತಿ ವಿಶ್ವಾಸಗಳ ಮೂಲಕ ಆಗಮಿಸಿ ಚಿಕಿಸ್ಟಿಗೆ ಒಳಪಟ್ಟಿದ್ದಾರೆ. ಈಗ 25 ರ ವಸಂತಕ್ಕೆ ಕಾಲಿಟ್ಟಿರುವ ಆಸ್ಪತ್ರೆ ಸವಿನೆನಪಿಗಾಗಿ ಸಮಾಜದಲ್ಲಿನ ಬಡವರಿಗೆ ಈ ಒಂದು ಶಿಬಿರವನ್ನು ಉಚಿತವಾಗಿ ನಡೆಸುವುದರ ಮೂಲಕ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ 300ಕ್ಕೂ ಅಧಿಕ ರೋಗಿಗಳು ತಮ್ಮ ನೇತ್ರವನ್ನು ತಪಾಸನಿಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ಡಾಕ್ಟರ ಪರಿಮಳ ಹನುಮಂತಪ್ಪ. ಗ್ರಾಮ ಪಂಚಾಯತಿ ಅಧ್ಯಕ್ಷ ಕವಿತಾ ಕಲಿಕೇರಿ ಶಿವಾನಂದಪ್ಪ ಬೆಡಕಲ್ ಮಾಂತೇಶ್ ದಾಸ್ ದಾಳ್ ಗಂಗಣ್ಣ ಪಂಪಾಪತಿ ದೇಸಾಯಿ ವಿರೂಪಾಕ್ಷಪ್ಪ ಗೌಡ್ರು ಜಗದೀಶಪ್ಪ ಅಂಗಡಿಯ ನಾಗರಾಜ್ ಮೈನು ಸಾಬ್ ಶರಣೇಗೌಡ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ನೇತ್ರ ಪರಿವೀಕ್ಷಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು