Breaking News

ಆಂಜನೇಯಸ್ವಾಮಿ ದೇವಸ್ಥಾನದ ಕಳಶರೋಹಣ ಕಾರ್ಯಕ್ರಮ

Anjaneyaswamy temple Kalasarohana program
Screenshot 2025 08 24 19 08 02 81 56514063904998099a7290fdb861fa955509498770233604191 1024x733

    ಗಂಗಾವತಿ:ನಗರದ ಅಮರ್ ಭಗತ್‌ಸಿಂಗ್ ನಗರದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ನೂತನ ಕಳಶರೋಹಣ ಹಾಗೂ ಗರುಡಗಂಬ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಗುರುವಾರ ನಡೆಸಲಾಯಿತು. ನೂತನ ಕಳಶರೋಹಣ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಆಂಜನೇಯಸ್ವಾಮಿ ದೇವರ ಮೂರ್ತಿಗೆ ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಪೂಜೆಗಳು ಜರುಗಿದವು. ನಂತರ ದೇವಸ್ಥಾನದ ಮುಂದುಗಡೆ ನವಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಗರುಡಗಂಬ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹೋಮ ಹವನ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ನೂತನ ಕಳಶಗಳ ಮೆರವಣಿಗೆಯನ್ನು ಮಾಡುವ ಮೂಲಕ ದೇವಸ್ಥಾನದ ಗೋಪುರದ ಮೇಲೆ ಪ್ರತಿಷ್ಠಾಪನೆ ಮಾಡಲಾಯಿತು. ಪ್ರಮುಖರಾದ ನಾಗಲಿಂಗಪ್ಪ ಪತ್ತಾರ, ಈ.ರಾಮಕೃಷ್ಣ, ನೀಲಕಂಠ ಕಟ್ಟಿಮನಿ, ಅಶೋಕಗೌಡ, ಶಿವಣ್ಣ, ಮಡಿವಾಳಪ್ಪ, ಮಲ್ಲಪ್ಪ, ಮುದಿಯಪ್ಪ ಕುರಿ, ಜಂಗ್ಲಿ ಬೀಮಣ್ಣ, ಶಾಂತಪ್ಪ ಇಟಗಿ, ಧರ್ಮಣ್ಣ, ಶರಣಪ್ಪ, ಕುಮಾರ, ಶಿವಕುಮಾರ, ಪರಶುರಾಮ ಇಟಗಿ, ತ್ಯಾವರಪ್ಪ, ಬಸವರಾಜ ಹಾಗೂ ಇತರರಿದ್ದರು.

ಜಾಹೀರಾತು

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.