Bhadrapada Amavasya 27th Puja at Nagachowdeshwari Kshetra, Itag

ಶ್ರೀ ನಾಗದೇವರು ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ, ಇಟಗಿಯಲ್ಲಿ (ಕೂಕನೂರು) ತಾರೀಖು 23ನೇ ಆಗಸ್ಟ್ 2025ರ ಶನಿವಾರ ಬೆಳಿಗ್ಗೆ 11 ರಿಂದ 4 ರವರೆಗೆ ಪೂಜೆ ಮತ್ತು ಪ್ರಸಾದ ವಿನಿಯೋಗ, ಶ್ರೀ ವಿಶ್ವಾವಸು ನಾಮ ಸಂವತ್ಸರ, ಶ್ರಾವಣ ಮಾಸೆ ವರ್ಷ ಋತು, ದಕ್ಷಿಣಾಯಣ ಕೃಷ್ಣ ಪಕ್ಷದ “27ನೇ ಅಮಾವಾಸ್ಯೆ ಪೂಜೆ”ಗೆ, ತಾವೆಲ್ಲರು ಸಹ-ಕುಟುಂಬ ಸಮೇತ ಆಗಮಿಸಿ, ಶ್ರೀ ನಾಗಚೌಡೇಶ್ವರಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಪ್ರತಿ ತಿಂಗಳ ಅಮಾವಾಸ್ಯೆಯ ದಿನ ಮಾತ್ರ, ದೇವರ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಉಳಿದ ದಿನಗಳಲ್ಲಿ ಹೊರಗಿನಿಂದಲೇ ದರ್ಶನ ಮತ್ತು ಪೂಜೆ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಕಡ್ಡಾಯವಾಗಿ ಒಳಗಡೆ ಕಟ್ಟೆ ಹತ್ತಿ ಹೋಗಬಾರದೆಂದು ಮನವಿ ಮಾಡುತ್ತೇನೆ. (ಕೆಲವರು ಮಕ್ಕಳನ್ನು ಒಳಗೆ ಕಳುಹಿಸಿ ಪೂಜೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ದಯಮಾಡಿ ಹಾಗೆ ಮಾಡದೆ ಹೊರಗಿನಿಂದಲೇ ಪೂಜೆ ಮಾಡಿ ನಮಸ್ಕರಿಸಿ) ಅಮಾವಾಸ್ಯೆ ದಿನ ಮಾತ್ರ ವಿಶೇಷ ದರ್ಶನ ನೀಡುವ ಕ್ಷೇತ್ರ, ನಡೆದುಕೊಳ್ಳುವವರು ಸಂಕಲ್ಪ ಮಾಡಿ 5 ಅಮಾವಾಸ್ಯೆ ಪೂಜೆ ಪೂರೈಸಬೇಕು ಎಂದು ಕ್ಷೇತ್ರ ಉಸ್ತುವಾರಿ ರಮೇಶ ಸುರ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.