Appeal for construction of Gangavathi-Daroji railway line.

ಗಂಗಾವತಿ: ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಮನವಿಯ ಮೇರೆಗೆ ಕರ್ನಾಟಕ ರಾಜ್ಯ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಮಹಾ ಮಂಡಳಿಯ ನಿಯೋಗ ಗುರುವಾರ ಸಾಯಂಕಾಲ ಗಂಗಾವತಿ-ದರೋಜಿ ನೂತನ ರೇಲ್ವೆ ಲೈನ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ರಾಜ್ಯ ರೇಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ದೆಹಲಿಯಲ್ಲಿ ಮನವಿ ಸಲ್ಲಿಸಿದೆ.
ಸದ್ರಿ ನಿಯೋಗದಲ್ಲಿ ಮಹಾ ಮಂಡಳಿಯ ಅಧ್ಯಕ್ಷ ಎಮ್.ಜಿ.ಬಾಲಕೃಷ್ಣ, ಕೊಪ್ಪಳ-ರಾಯಚೂರು-ಯಾದಗಿರಿ ಜಿಲ್ಲೆಗಳನ್ನು ಪ್ರತಿನಿಧಿಸುವ ನಿರ್ದೇಶಕ ತ್ರಿವಿಕ್ರಮ ಜೋಶಿ ಇತರ ಪದಾಧಿಕಾರಿಗಳಾದ ವಿ.ಜಿ.ಕಿರಣ ಕುಮಾರ್, ಬಾಲಾಜಿ,ನಂಜುಂಡ ಪ್ರಸಾದ್ ಮತ್ತು ಮಧುಸೂದನ್ ನಿಯೋಗದಲ್ಲಿದ್ದರು ಎಂದು ಅಶೋಕಸ್ವಾಮಿ ಹೇರೂರ ತಿಳಿಸಿದ್ದಾರೆ.