19th Ward: Dangerous drains

ಮಲೇರಿಯಾ, ಡೆಂಗ್ಯೂ ರೋಗದ ಭೀತಿಯಲ್ಲಿ ನಿವಾಸಿಗಳ ವಾಸ,,
ಗಂಗಾವತಿ : ನಗರದ 19ನೇ ವಾರ್ಡ್ ಗುಂಡಮ್ಮ ಕ್ಯಾಂಪನಲ್ಲಿ ಸುಮಾರು ವರ್ಷಗಳಿಂದ ಚರಂಡಿಗಳು ಸ್ವಚ್ಚತೆ ಕಾಣದೇ ನೆನೆಗುದಿಗೆ ಬಿದ್ದಿದ್ದರಿಂದ ವಾರ್ಡಿನ ನಿವಾಸಿಗಳು, ಮಕ್ಕಳು, ಜೀವನ ನಡೆಸಲು ಭಯ ಭೀತರಾಗಿ ವಾಸಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಗಂಗಾವತಿ ನಗರದ ಗುಂಡಮ್ಮ ಕ್ಯಾಂಪ್ 19ನೇ ವಾರ್ಡ ನಲ್ಲಿ ಚರಂಡಿಗಳು ನಿರ್ವಹಣೆ ಕೊರತೆಯಿಂದಾಗಿ ತುಂಬಿ ತುಳುಕುತ್ತಾ ಅಪಾಯಕ್ಕೆ ಆಹ್ವಾನ ನೀಡುವುದಲ್ಲದೇ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟು ರೋಗ ರುಜಿನಗಳನ್ನು ಹರಡುವ ಆಸ್ಥಾನವಾಗಿ ಮಾರ್ಪಟ್ಟಿವೆ.
ಈ ರೀತಿಯಾಗಿ ಕಲುಷಿತ ಚರಂಡಿ ನೀರು ನಿಂತಲ್ಲೆ ನಿಂತು ಹರಿದು ಹೋಗಲು ಸುಗಮ ಮಾರ್ಗವಿಲ್ಲದೇ, ಮಳೆಯಾದರೆ ಚರಂಡಿಯ ನೀರು ಮನೆಯೊಳಗೆ ನುಗ್ಗುತ್ತಿರುವುದರಿಂದ ಅಲ್ಲಿನ ನಿವಾಸಿಗಳು ಪ್ರತಿನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಹೊರಗೆ ಹೋಗುವಾಗ ಚರಂಡಿ ದುರ್ನಾತ ಬಂದರೇ ಹೇಗೋ ಮೂಗು ಮುಚ್ಚಿಕೊಂಡು ಓಡಾಡಬಹುದು, ಆದರೆ ಚರಂಡಿಯೇ ಮನೆಯೊಳಗೆ ನುಗ್ಗಿದರೇ ಬದುಕುವುದು ಹೇಗೆ, ಸ್ವಾಮಿ ನೀವೇ ಹೇಳಿ ವಾರ್ಡಿನಲ್ಲಿ ಚಿಕ್ಕ ಪುಟ್ಟ ಕಂದಮ್ಮಗಳನ್ನು ಕಟ್ಟಿಕೊಂಡು ವಾಸಿಸುವ ಜನತೆ ಊಟ -ಉಪಚಾರವಾದರು ಹೇಗೆ ಮಾಡಬೇಕು,,?
ಒಂದೇಡೆ ಕಲುಷಿತ ನೀರು ಹಾಗೂ ಇನ್ನೊಂದೆಡೆ ದುರ್ವಾಸನೆ ಮದ್ಯೆ ಹೊಟ್ಟೆಗೆ ಆಹಾರವಾದರೂ ಹೇಗೆ ಇಳಿಯುತ್ತದೆ ಎನ್ನುವುದನ್ನು ಸರಕಾರಿ ಅಧಿಕಾರಿಗಳು ಜನ ಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಚರಂಡಿಯ ದುರಸ್ಥಿ ಸೇರಿದಂತೆ ಸ್ವಚ್ಚತೆ ಕುರಿತು ನಗರ ಸಭೆ ವಾರ್ಡ್ ನ ಸದಸ್ಯ ಅಜಯ್ ಕುಮಾರ ಬಿಚ್ಛಾಲಿ ಅವರಿಗೆ ಮೂರು ವರ್ಷದಿಂದ ಮನವಿ ಸಲ್ಲಿಸುತ್ತಾ ಬಂದಿದ್ದರು ಸದಸ್ಯರು ಕ್ಯಾರೆ ಎನ್ನುತ್ತಿಲ್ಲಾ ಎಂದು ವಾರ್ಡ್ ನ ನಿವಾಸಿಗಳು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಕುರಿತು ನಗರ ಸಭೆ ಸದಸ್ಯರನ್ನು ಮಾಧ್ಯಮ ಪ್ರಶ್ನಿಸಿದ ಸಂದರ್ಭದಲ್ಲಿ ಅಜಯ್ ಕುಮಾರ ಬಿಚ್ಚಾಲಿ ಮಾಧ್ಯಮದೊಂದಿಗೆ ಮಾತನಾಡಿ ಚರಂಡಿಗಳ ಮೇಲೆ ಅತಿಕ್ರಮಿಸಿ ಕೇಲವೊಂದಿಷ್ಟು ಮನೆಗಳು, ರೂಮ್ ಗಳು ನಿರ್ಮಾಣವಾಗಿದ್ದು ಅವುಗಳನ್ನು ತೆರವುಗೊಳಿಸಿ ಆದಷ್ಟು ಬೇಗನೆ ಚರಂಡಿ ದುರಸ್ಥಿ ಮಾಡಲಾಗುವುದು ಎಂದು ತಿಳಿಸಿದರು.
ಈ ಮೊದಲು ನಗರೋತ್ಥಾನದಡಿ ಚರಂಡಿ ದುರಸ್ಥಿಗೆ ಹಣ ಬಿಡುಗಡೆಯಾಗಿತ್ತು, ಕೇಲವೊಂದಿಷ್ಟು ವಿರೋಧದ ಮದ್ಯೆ ಅಲ್ಲಿನ ಚರಂಡಿ ಕಾಮಗಾರಿ ಕೈಕೊಳ್ಳಲಾಗಲಿಲ್ಲಾ, ಅದು ಚೆಂಜ್ ಆಫ್ ವರ್ಕ್ ಆಯಿತು. ಆದರೆ ಮತ್ತೆ ಪುನಃ ನಗರೋತ್ಥಾನ ಅಭಿವೃದ್ದಿ ಯೋಜನೆಯಲ್ಲಿ ಈ ಕಾಮಗಾರಿ ಕೈಗೊಂಡು, ಅತಿಕ್ರಮಣ ಮಾಡಿದ ಕಟ್ಟಡಗಳನ್ನು ತೆರವುಗೊಳಿಸಿ ಸ್ವಚ್ಚತೆಗೆ ಆದ್ಯತೆ ನೀಡಲಾಗುವುದು ಅದಕ್ಕೆ ಎಲ್ಲಾ ವಾರ್ಡ್ ನ ನಿವಾಸಿಗಳ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.