Tiptur-Thimma Roaddi's arrest is welcome - JDS leader KT Shanthakumar.

ತಿಪಟೂರು: ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ತಹಾಗೂ ಧರ್ಮಾಧಿಕಾರಿಗಳ ವಿರುದ್ದ ಅಪಪ್ರಚಾರದ ಹಿಂದೆ ಧರ್ಮವಿರೋದಿ ಶಕ್ತಿಗಳ ಕೈವಾಡವಿದೆ.ಧರ್ಮಸ್ಥಳ ಕರ್ನಾಟಕದ ಜನರ ಧಾರ್ಮಿಕ ಶ್ರದ್ದೆ ಕೇಂದ್ರ.ಶ್ರೀಕ್ಷೇತ್ರ ಹಲವಾರು ಸಮಾಜ ಸೇವಾ ಕಾರ್ಯಗಳ ಮೂಲಕ ಧರ್ಮಪರಂಪರೆ ರಕ್ಷಣೆ ಮಾಡುತ್ತಾ ಬಂದಿದ್ದು,ಅಪಪ್ರಚಾರದಿಂದ ಕ್ಷೇತ್ರದ ಭಕ್ತರು ದೃತಿಗೆಡಬಾರದು.ಸರ್ಕಾರ ಷಡ್ಯಂತ್ರದ ಹಿಂದೆ ಇರುವಂತಹ ಎಲ್ಲಾ ಶಕ್ತಿಗಳನ್ನ ಪತ್ತೆಹಚ್ಚಿ ಶಿಕ್ಷೆ ಕೊಡಿಸಬೇಕು
ಅನಾಮುಧೇಯ ಮುಸಕುಧಾರಿ ವ್ಯಕ್ತಿ ತಂದಿರುವ, ತಲೆಬುರುಡೆ ಎಲ್ಲಿಂದ ಬಂತು.ಸರ್ಕಾರ ಮೊದಲು ಅನಾಮಿಕ ಯಾರು ಅವನ ಹಿಂದೆಯಾವ ಶಕ್ತಿಗಳು ಕೆಲಸ ಮಾಡುತ್ತಿವೆ ಎನ್ನುವುದನ್ನ ತನಿಖೆ ಮಾಡಬೇಕು.ಧರ್ಮಸ್ಥಳ ಧರ್ಮಾಧಿಕಾರಿಗಳು ಭಾರತದ ಸಂಸ್ಕೃತಿ ಹಾಗೂ ಸಂಸ್ಕಾರಗಳ,ರಕ್ಷಣೆ ಧಾರ್ಮಿಕ ಪರಂಪರೆ ಉಳಿಸಲು ಕೆಲಸ ಮಾಡುತ್ತಿದ್ದಾರೆ,ನಿತ್ಯ ಅನ್ನದಾಸೋಹದ ಮೂಲಕ ಸಾವಿರಾರು ಜನರಿಗೆ ಅನ್ನದಾನ ಮಾಡಿ ಮಂಜುನಾಥಸ್ವಾಮಿ ಸೇವೆ ಮಾಡುತ್ತಿದ್ದಾರೆ.ತಿರುಪತಿ,ಶನಿಸಿಂಗಾಪುರ,ಶಬರಿಮಲೈ ಸೇರಿದಂತೆ ಹಿಂದೂಧಾರ್ಮಿಕ ಶ್ರಾದ್ದಾಕೇಂದ್ರಗಳ ಮೇಲೆ ನಿರಂತರ ಅಪಪ್ರಚಾರ ನಡೆಯುತ್ತಿದೆ.ನಿರಂತರವಾಗಿ ಹಿಂದೂವಿರೋದಿಗಳು ಕೆಲಸ ಮಾಡುತ್ತಿದ್ದಾರೆ.ಧಾರ್ಮಿಕ ಕೇಂದ್ರಗಳ ವಿರುದ್ದ ಅಪಪ್ರಚಾರ ಹಾಗೂ ಧರ್ಮವಿರೋದಿ ಕುಕೃತ್ಯ ಕೈ ಬಿಡದಿದ್ದರೆ ತಕ್ಕಪಾಠಕಲಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಷ್ಟೇ ಅಲ್ಲದೆ ಧರ್ಮಸ್ಥಳದ ಬಗ್ಗೆ ಅಪ ಪ್ರಚಾರ ಸುತ್ತಿರುವ ತಿಮ ರೆಡ್ಡಿಯನ್ನು ಸರ್ಕಾರವು ಬಂಧಿಸಿರುವುದು ಶ್ಲಾಘನೀಯ ಎಂದರು.
ತಿಪಟೂರು ನಗರದಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಯಾವುದೇ ಕಾರಣಕ್ಕೂ ತಿಪಟೂರು ಕೆರೆ ಏರಿ ಹೊಡೆಯದೆ ಮಳೆಗಾಲದಲ್ಲಿ ನೀರು ತುಂಬಿ ನಂತರ ಡಿಸೆಂಬರ್ ನಲ್ಲಿ ಕೆರೆ ರಿಪೇರಿ ಮಾಡಲಿ.ತಿಪಟೂರು ಶಾಸಕರ ಆತುರದ ನಿರ್ಧಾರದಿಂದ ನಗರದ ಜನ ಕುಡಿಯುವ ನೀರಿನ ಬವಣೆ ಎದುರಿಸ ಬೇಕಾಗುತ್ತದೆ.ನಗರಸಭೆ ಹಾಗೂ ಶಾಸಕರು ಯುಜಿಡಿ ನೀರು ಈಚನೂರು ಕೆರೆಗೆ ಹೋಗದಂತೆ ಕ್ರಮವಹಿಸಲಾಗಿದೆ.ನಗರದ ಜನರಿಗೆ ಶುದ್ದ ಕುಡಿಯುವ ನೀರು ಕೊಡುವುದ್ದಾಗಿ ಮಾತುಕೊಟ್ಟು ಲಕ್ಷಾಂತರ ರೂಪಾಯಿ ಖರ್ಚುಮಾಡಿ ಚೇಂಬರ್ ರಿಪೇರಿ ಮಾಡಿದ್ದಾರೆ .ಆದರೆ ನಗರದಲ್ಲಿ ಸುರಿದ ಸಮಾನ್ಯ ಮಳೆಗೆ ಯುಜಿಡಿ ಚೇಂಬರ್ ಗಳು ಹುಕ್ಕಿಹರಿದು ಈಚನೂರು ಕೆರೆ ಸೇರಿ ಕೆರೆ ನೀರು ಕಲೂಷಿತವಾಗುತ್ತಿದೆ. ನಗರಸಭೆ ತುರ್ತು ಕ್ರಮಕೈಗೊಳ್ಳದಿದ್ದರೆ, ಉಗ್ರಹೋರಾಟ ಮಾಡಲಾಗುವುದು.ನಗರಸಭೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಗರಸಭಾ ವೃತ್ತದಲ್ಲಿ ಹೈ ಮಾಸ್ಕ್ ಲೈಟ್ ತೆಗೆದು ಗಡಿಯಾರ ಅಳವಡಿಸಲಾಗಿದ್ದು. ಈ ಗಡಿಯಾರ ಯಾರ ಪುರುಷಾರ್ಥಕ್ಕೆ ಎಂದುಗೊತ್ತಾಗುತ್ತಿಲ್ಲ,ನಗರದ ಜನರ ಲಕ್ಷಾಂತರ ರೂಪಾಯಿ ತೆರಿಗೆ ಹಣ ವ್ಯಾಯಮಾಡಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ತಾಲ್ಲೋಕು ಆಡಳಿತ ವೈಪಲ್ಯದ ವಿರುದ್ದ ಶೀಘ್ರವಾಗಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಕಾರ್ಯಧ್ಯಕ್ಷ ರಾಜ್ಯಸರ್ಕಾರ ಪರಿಶಿಷ್ಟ ಜಾತಿ ವರ್ಗಗಳ ಮೀಸಲು ಹಣದುರುಪಯೋಗ ಮಾಡಿದ್ದು. ಬಡವರ ಹಣವನ್ನ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ.ಸರ್ಕಾರ ಹಣಕಾಸಿನ ಮುಗ್ಗಟಿಗೆ ಒಳಗಾಗಿದೆ ಎಂದು ತಿಳಿಸಿದರು.
ಪತ್ರಿಕಾಘೋಷ್ಠಿಯಲ್ಲಿ ಮುಖಂಡರಾದ ಗುರುಗದಹಳ್ಳಿ ನಟರಾಜು .ಗೊರಗೊಂಡನಹಳ್ಳಿ ರಾಜಶೇಖರ್.ಬಜಗೂರು ಲೋಕೇಶ್.ನೊಣವಿನಕೆರೆ ಶ್ರೀನಿವಾಸ್ ಮಾದಿಹಳ್ಳಿ ರಾಜಶೇಖರ್. ಹಾಲ್ಕುರಿಕೆ ರಾಮೇಶ್ .ಉದಯ್ ಮೊದಲಾದವರು ಹಾಜರಿದ್ದರು