Inauguration of Taluk units of Karnataka Media Journalists Association across Chamarajanagar district

ವರದಿ : ಬಂಗಾರಪ್ಪ .ಸಿ .
ಹನೂರು : ರಾಜ್ಯಾದ್ಯಂತ ಪತ್ರಕರ್ತರ ಸಂಘಟನೆಯನ್ನು ಹೊಂದಿರುವ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಅಧ್ಯಕ್ಷರಾದಿಯಾಗಿ ಇಂದು ರಾಜ್ಯ ಸಮಿತಿಯ ಪದಾಧಿಕಾರಿಗಳು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಛೇರಿಯನ್ನು ಉದ್ಘಾಟನೆ ಮಾಡಿ ನಂತರ ಪಧಾದಿಕಾರಿಗಳನ್ನು ಸಹ ನೇಮಕಮಾಡಲಾಯಿತು ನಂತರ ಹನೂರು ತಾಲ್ಲೂಕು ಘಟಕವನ್ನು ಉದ್ಘಾಟನೆಯನ್ನು ರಾಜ್ಯಾದ್ಯಕ್ಷರ ಜೊತೆಯಲ್ಲಿ ಮಾಡಿದ್ದು ,ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಗಳಲ್ಲಿ ಘಟಕಗಳನ್ನು ವಿಸ್ತಾರವಾಗಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲೆದೆ ಎಂದು ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರು ಹಾಗೂ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಂಗಾರಪ್ಪ . ಸಿ . ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನೂತನವಾಗಿ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘವು ಉದ್ಗಾಟನೆಯಾಯ್ತು.
ಹನೂರು ತಾಲ್ಲೂಕು ಘಟಕದ ನೂತನ ಕಚೇರಿಯನ್ನು
ಉದ್ಘಾಟಿಸಿ ನಂತರ ಮಾತನಾಡಿದ ರಾಜ್ಯಾಧ್ಯಕ್ಷರಾದ ಜಿ.ಎಂ.ರಾಜಶೇಖರ್ ರವರು, ಪ್ರತಿಯೊಬ್ಬ ಪತ್ರಕರ್ತರು ಸಾಮಾಜಿಕ ಕಳಕಳಿ ಇಟ್ಟುಕೊಂಡು ಭದ್ದತೆ ಹಾಗೂ ನಿಷ್ಪಕ್ಷಪಾತವಾದ ಸುದ್ದಿ ಜೊತೆಗೆ ನಿರ್ಭಯದಿಂದ ಸುದ್ದಿ ಮಾಡಿ ಎಂದು ಕಿವಿ ಮಾತು ಹೇಳಿದರು. ಸಂಘವು ಗ್ರಾಮೀಣ ಪತ್ರಕರ್ತರ ಭದ್ರತೆಗಾಗಿ ಸರ್ಕಾರದೊಂದಿಗೆ ಸಮಾಲೋಚಿಸಿ ಅನುಕೂಲ ಮಾಡಿಕೊಡಲಾಗುವುದು ಎಂದರು. ಗ್ರಾಮೀಣ ಪತ್ರಕರ್ತರು ಉಚಿತ ಬಸ್ ಬಸ್ ಪಡೆಯಲು ಸರ್ಕಾರ ಮಾಡಿರುವ ಕಠಿಣ ನಿಯಮವನ್ನು ಸಡಿಲಗೊಳಿಸಬೇಕು ಈ ವೇಳೆ ಸರ್ಕಾರವನ್ನು ಒತ್ತಾಯ ಮಾಡಲಾಗುವುದು ಎಂದರು .
ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ರಾ.ಬಾಬು, ರಾಜ್ಯ ಸಂಘದ ಉಪಾಧ್ಯಕ್ಷರಾದ ಕೃಷ್ಣಪ್ಪ,ರಾಜ್ಯಸಂಘದ ಕಾರ್ಯದರ್ಶಿಗಳಾದ ರೂಪೇಶ್ ಕುಮಾರ್ ,ವಸಂತ್ ಕುಮಾರ್,ಸಂಪಾದಕರಾದ ಪುರುಷೋತ್ತಮ್, ಹನೂರು ತಾಲ್ಲೂಕು ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜು ,ಖಜಾಂಚಿ ಚೇತನ್ ಕುಮಾರ್, ನಿರ್ದೇಶಕರುಗಳಾದ ಪ್ರಸನ್ನ ಕುಮಾರ್ , ಶಾರುಖ್ ಖಾನ್ ,ಅಜಿತ್ ,ಶಾಖಾ ವ್ಯವಸ್ಥಾಪಕ ನಿರ್ದೇಶಕರಾದ ಯುವ ಪತ್ರಕರ್ತರಾದ ಕಾರ್ತಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.