Free notebook distribution to high school children

ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ರೈಸ್ ಬೌಲ್ ಗಂಗಾವತಿ ಹಾಗೂ ಸ್ಪೂರ್ತಿ ಸಲೆ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) & ಸದ್ವಿಚಾರ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ) ಹಣವಾಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರೌಢಶಾಲಾ ಮಕ್ಕಳಿಗೆ ಸುಮಾರು 200 ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ದಿವ್ಯ ಸಾನಿಧ್ಯ ವಹಿಸಿರುವ ಪರಮ ಪೂಜ್ಯಶ್ರೀ ಶರಣಬಸವ ಮಹಾಸ್ವಾಮಿಗಳು, ದೇಶಿಕೇಂದ್ರ ಶಿವೋಗಿ ಮಂದಿರ ಆಡಳಿತ ಅಧಿಕಾರಿಗಳು ಹಾಗೂ ಸಂಸ್ಥೆಯ ಸಂಸ್ಥಾಪಕರು. ಇಂದು ನಮ್ಮ ಗ್ರಾಮೀಣವಾಗದ ಬಡ ವಿದ್ಯಾರ್ಥಿಗಳಿಗೆ ಇವತ್ತು ಕೊಡ ಮಾಡುವ ಮಕ್ಕಳಿಗೆ ನೋಟು ಬುಕ್ ವಿತರಣೆಯನ್ನು ಮಾಡಿದೆವು ಇವತ್ತಿನ ಮಕ್ಕಳು ನಾಳಿನ ಪ್ರಜೆಗಳು ಆಗಬೇಕಾಗಿದೆ ಇದರಿಂದ ಮಕ್ಕಳು ಒಳ್ಳೆ ಶಿಕ್ಷಣವನ್ನು ಪಡೆಯಬೇಕು ಒಳ್ಳೆಯ ಅಂಕವನ್ನು ಪಡೆಯಬೇಕು ಇವತ್ತು ನಮ್ಮ ಸಂಸ್ಥೆಗಳಿಂದ ಸರ್ಕಾರಿ ಶಾಲೆಗಳನ್ನ ಉಳಿಸಬೇಕಾಗಿದೆ ಆದ್ದರಿಂದ ಇವತ್ತು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಬೇಕಾಗಿದೆ ಪ್ರತಿಯೊಬ್ಬರ ಮಕ್ಕಳು ಶಿಕ್ಷಣವಂತರಾಗಬೇಕು ಶಾಲೆಗಳಿಗೆ ಮತ್ತು ತಂದೆ ತಾಯಿಗೆ ಒಳ್ಳೆಯ ಒಬ್ಬ ವಿದ್ಯಾರ್ಥಿಯಾಗಿ ಬೆಳೆಯಬೇಕಾಗಿದೆ ಈ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸಿ ಮುಂದಿನ ಅವರ ಶಿಕ್ಷಣವನ್ನು ಉಜ್ವಲವಾಗಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ರೈಸ್ ಬೌಲ್ ಗಂಗಾವತಿ ಅಧ್ಯಕ್ಷರಾದ ಶ್ರೀಮತಿ ಗೀತಾ ಚೌದರಿ ಮಾತನಾಡಿ . ನಮ್ಮ ರೋಟರಿ ಕ್ಲಬ್ ವತಿಯಿಂದ ಇದು ಎರಡನೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಇವತ್ತು ಬಡ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಇದರ ಲಾಭವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಹಸ್ಲಾಂ ಖಾನ್. ರೋಟರಿ ಕ್ಲಬ್ ನಿನ ಕಾರ್ಯದರ್ಶಿಯಾದ ಶ್ರೀದೇವಿ. ಖಜಾಂಚಿಯಾದ ಬಸಮ್ಮಹಣವಾಳ . ಸಂಸ್ಥೆಗಳ ಕಾರ್ಯದರ್ಶಿಗಳಾದ ಮಂಜುನಾಥ ಹೊಸಕೇರಾ. ರೋಟರಿ ಕ್ಲಬ್ ರೈಸ್ ಬೌಲ್ ಮಹಿಳಾ ಸದಸ್ಯರಾದ . ದ್ರಾಕ್ಷಾಯಿಣಿ. ಸೋಫಿಯಾ ರಾಣಿ. ಶಶಿಕಲಾ. ವನಜಾಕ್ಷಿ. ಸಂಸ್ಥೆಗಳ ಸದಸ್ಯರುಗಳಾದ ಪ್ರಕಾಶ .ವಿರುಪಾಕ್ಷಪ್ಪ ಗಾದಿಲಿಂಗಪ್ಪ .ವೀರೇಶ.ಶರಣಪ್ಪ. ಶರಣಬಸವ.ಅಶೋಕ. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕಿಯಾದ ಚೈತ್ರ ಇವರು ಹೊಂದಿಸಿದರು ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಿದರು