Breaking News

ಅಕ್ಟೋಬರ್‌ನಲ್ಲಿ ಅಂಬೇಡ್ಕರ್ ಹೆಸರಲ್ಲಿ ರಾಷ್ಟ್ರ ಮಟ್ಟದ ಕಾರ್ಯಕ್ರಮ

National level program in the name of Ambedkar in October
Screenshot 2025 08 20 14 14 35 07 E307a3f9df9f380ebaf106e1dc980bb6195324496281712527 730x1024

ಕೊಪ್ಪಳ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ರಾಜ್ಯದಲ್ಲೇ ಯುವಜನರ ಧ್ವನಿಯಾಗಿದ್ದು, ಸರ್ಕಾರ ಹಾಗೂ ಯುವ ಸಂಘಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು, ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಲ್ಲಿ ಅಕ್ಟೋಬರ್‌ನಲ್ಲಿ ಕೊಪ್ಪಳದಲ್ಲಿ ಅಂಬೇಡ್ಕರ್ ಹೆಸರಲ್ಲಿ ರಾಷ್ಟçಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಮತ್ತು ಕಲಬುರಗಿ ವಿಭಾಗೀಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಜಂಟಿ ಹೇಳಿಕೆ ನೀಡಿದ್ದಾರೆ.
ಒಕ್ಕೂಟ ಸುಮಾರು ೧೩ ವರ್ಷಗಳಿಂದ ರಾಜ್ಯಗಳಲ್ಲಿ ಹೊಸ ಯುವಕ ಸಂಘಗಳ ಸ್ಥಾಪನೆ, ಯುವ ಸಂಪರ್ಕ ಸಭೆಗಳು, ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮಗಳು, ಜನಪದ ಕಲಾ ತರಬೇತಿ ಶಿಬಿರಗಳು, ಯುವಜನ ಮೇಳಗಳನ್ನು ನಡೆಸುತ್ತಾ ಬಂದಿದೆ. ಅದರ ಜೊತೆಗೆ ರಾಜ್ಯದ ಯುವಜನರ ಶಕ್ತಿಯನ್ನು ಇಮ್ಮಡಿಗೊಳಿಸಲು ಸೇವೆ ಗುರುತಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೧೨ ವರ್ಷಗಳಿಂದ ೩೧ ಜಿಲ್ಲೆಯ ಯುವ ಜನರಿಗೆ ರಾಜ್ಯ ಯುವ ಪ್ರಶಸ್ತಿ, ಹಾಗೂ ಸಾಂಘಿಕ ಪ್ರಶಸ್ತಿಗಳನ್ನು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಹಾಗೂ ರಾಷ್ಟಿçÃಯ ಸದ್ಭಾವನ ಪ್ರಶಸ್ತಿಯನ್ನು ಹೊರ ರಾಜ್ಯ ಹಾಗೂ ನಮ್ಮ ರಾಜ್ಯದ ೫೦ ಜನ ಯುವ ಜನರಿಗೆ ಮೂರು ಸಾಂಘಿಕ ರಾಜ್ಯ ಪ್ರಶಸ್ತಿಗಳನ್ನು ಪ್ರಧಾನ ಮಾಡುತ್ತಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ೩೧ ಜಿಲ್ಲೆಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ, ಎರಡು ಸಾಂಘಿಕ ಪ್ರಶಸ್ತಿ ನೀಡುತ್ತಾ ಬಂದಿದೆ.
ಈಗ ಕೊಪ್ಪಳದಲ್ಲಿ ರಾಷ್ಟçಮಟ್ಟದ ಕಾರ್ಯಕ್ರಮ ಮಾಡಿ, ಅಂಬೇಡ್ಕರ್ ತತ್ವ ಪ್ರಸಾರ, ಸಂವಿಧಾನ ಸಂರಕ್ಷಣೆಯ ಅಗತ್ಯ ಹಾಗೂ ಶೋಷಿತರ ಹಿರಕ್ಷಣೆ ಕುರಿತು ವಿಶಿಷ್ಟ ಕಾರ್ಯಕ್ರಮ ಮಾಡುತ್ತಿದ್ದು, ಅದರಲ್ಲಿ ಪ್ರಸಕ್ತ ಸಾಲಿನಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರಾಜ್ಯ ಹಾಗೂ ರಾಷ್ಟç ಯುವ ಪ್ರಶಸ್ತಿಗಳನ್ನು ೩೧ ಜಿಲ್ಲೆಯ ಜನರಿಗೆ ಹಾಗೂ ಎರಡು ಸಾಂಘಿಕ ಪ್ರಶಸ್ತಿಗಳನ್ನು ಜೊತೆಗೆ ಕೆಲವು ವಿಶೇಷ ಪ್ರಶಸ್ತಿ ನೀಡಲು ಒಕ್ಕೂಟ ತೀರ್ಮಾನಿಸಿದೆ.
ಸರ್ಕಾರ ಯುವಜನ ಮೇಳಗಳನ್ನು ನಿಲ್ಲಿಸಿದ್ದನ್ನು ಪುನಃಟಾರಂಭಿಸಬೇಕು, ತಾಲೂಕು, ಜಿಲ್ಲೆ, ವಿಭಾಗ, ರಾಜ್ಯ ಯುವಜನ ಮೇಳಗಳನ್ನು ಮತ್ತೆ ಸ್ಥಾಪಿಸಬೇಕು, ರಾಜ್ಯದಲ್ಲಿ ಯುವ ನೀತಿ ಅನುಷ್ಠಾನವಾಗಬೇಕು, ಕ್ರೀಡೆಗೆ ನೀಡುತ್ತಿರುವ ಸವಲತ್ತು ಯುವ ಸಬಲೀಕರಣಕ್ಕೂ ನೀಡಬೇಕು ಎಂಬುದು ಒಕ್ಕೂಟದ ಆಶಯವಾಗಿದೆ. ರಾಜ್ಯದಲ್ಲಿ ದಶಕಗಳಿಂದ ಮಾಡುತ್ತಿರುವ ಕಾರ್ಯಕ್ರಮಗಳಿಗೆ ಸರಕಾರ ಅನುದಾನ ನೀಡಬೇಕು. ಯುವಜನರು ಸಹ ಉತ್ತಮವಾಗಿ ಮೇಲೆ ಬರಲು ಅವಕಾಶ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ. ರಾಷ್ಟçಮಟ್ಡದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಮೊಮ್ಮಕ್ಕಳು ಪಾಲ್ಗೊಳ್ಳುವರು, ಸ್ವಾಮೀಜಿಯವರು, ಸಚಿವರು ಭಾಗವಹಿಸುವರು ಎಂದು ತಿಳಿಸಿದ್ದಾರೆ.

ಜಾಹೀರಾತು

About Mallikarjun

Check Also

screenshot 2025 10 09 17 51 12 32 6012fa4d4ddec268fc5c7112cbb265e7.jpg

ಗುರುವಂದನಾ ಕಾರ್ಯಕ್ರಮ ಹಳೆಯ ವಿದ್ಯಾರ್ಥಿಗಳ ಕಲಿತವರೆಲ್ಲರೂ ಸಂಭ್ರಮ

Guru Vandana program, alumni, and all the students were happy ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.