Let the seventy-seven Malays become religious centers: Suthuru Sris

ವರದಿ : ಬಂಗಾರಪ್ಪ .ಸಿ
ಹನೂರು : ಮಲೆ ಮಹದೇಶ್ವರರು ನೆಲೆಸಿರುವ ಪವಿತ್ರ ಸ್ಥಳಗಳಾದ ೭೭ ಮಲೆಗಳಲ್ಲಿ ಮಾದಪ್ಪನ ದೇವಾಲಯದ ಬೆಟ್ಟಕ್ಕೆ ಸಮೀಪದ ಅಂದಿನ ಶ್ರೀ ಪೊನ್ನುಮಲೆಯಾದ ಇಂದಿನ ಪೊನ್ನಾಚಿ ಪಕ್ಕದ ದೇವಾಲೆ ಬೇಟ್ಟದಲ್ಲಿ ಪೊನ್ನುಮಲೆ , ಹಾಗೂ ದೇವಾಲೆ ಮಲೆಗಳಿಗೆ ಜಗದ್ಗುರುಗಳ ಸಮ್ಮುಖದಲ್ಲಿ ದೇವರಿಗೆ ಪೂಜೆಯನ್ನು ನೆರವೇರಿಸಲಾಯಿತು ಇದೇ ರೀತಿಯಲ್ಲಿ ಮುಂದಿನ ಮಲೆಗಳಿಗೂ ಬೇಟಿ ನೀಡಿ ಅದರ ಮಹತ್ವವನ್ನು ಜಗಕ್ಕೆ ಪಸರಿಸುವಂತೆ ತಪಸ್ವಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಪೊನ್ನಾಚಿ ಮಹದೇವಸ್ವಾಮಿ ತಿಳಿಸಿದರು .
ಹನೂರು ತಾಲ್ಲೂಕಿನ ಪೊನ್ನಾಚಿ ಸೇರಿದಂತೆ ಅಸ್ತೂರು . ಮರೂರು ಗ್ರಾಮಗಳಿಗೆ ರಾಜ್ಯದ ಹಲವಾರು ಶ್ರೀ ಗಳವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡು ಪಾದ ಪೂಜೆಯನ್ನು ಮಾಡುವ ಮೂಲಕ ಗುರುಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು,
ಜಗದ್ಗುರುಗಳಾದ
ಸುತ್ತುರು ಶ್ರೀ ಗಳು ಮಾತನಾಡಿ ಇಲ್ಲಿನ ಗ್ರಾಮಗಳ ಜನರ ಗುರುಭಕ್ತಿಯು ಬೇರೆ ಗ್ರಾಮಗಳಿಗೆ ಮಾದರಿಯಾಗಿದೆ ,ಪೊನ್ನುಮಲೆಯ ದೇವಾಲೆ ಬೆಟ್ಟದಲ್ಲಿ ಇಂದು ಪೂಜೆ ಸಲ್ಲಿಸಿದ್ದೇವೆ ಸುಂದರತಾಣದಲ್ಲಿ ವಾಸಿಸುವ ಜನರೆ ಪುಣ್ಯವಂತರು ನೀವುಗಳು ಜೀವಿಸುವ ಜೊತೆಯಲ್ಲಿ ಕಾಡಿನ ಸಂಪತ್ತನ್ನು ರಕ್ಷಣೆ ಮಾಡುವ ಜವಬ್ದಾರಿಯನ್ನು ಸಹ ಮಾಡಬೇಕು ಮುಂದಿನ ದಿನಗಳಲ್ಲಿ ಸಾದ್ಯವಾದರೆ ಮಾದಪ್ಪನ ಇನ್ನೂಳಿದ ಮಲೆಗಳಿಗೂ ಬೇಟಿ ನೀಡೊಣವೆಂದರು .
ಸಿದ್ದಗಂಗಾ ಶ್ರೀ ಗಳು ಮಾತನಾಡಿ ಮುಂದಿನ ದಿನಗಳಲ್ಲಿ ಮಾದಪ್ಪನ ನೆಲೆಗಳಾದ ಎಪ್ಪತ್ತೇಳು ಮಲೆಗಳು ಸಹ ಧಾರ್ಮಿಕ ಕ್ಷೇತ್ರಗಳಾಗಲಿ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಸೇರುವಂತಾಗಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರ ಮತ್ತು ಇಲ್ಲಿನ ನಿವಾಸಿಗಳಿಂದಾಗಲಿ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಶ್ರೀ ಶ್ರೀ ಡಾಕ್ಟರ್ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು , ಶ್ರೀ ಶ್ರೀ ಡಾಕ್ಟರ್ ಶರಶ್ಚಂದ್ರ ಸ್ವಾಮೀಜಿಗಳು , ಸೇರಿದಂತೆ ಅನೇಕ ಮಠಾದೀಶರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು , ಹಾಗೂ ಬಿಜೆಪಿಯ ಮುಖಂಡರಾದ ನಿಶಾಂತ್ ಮಹಾಮನೆ , ಗ್ರಾಮಸ್ಥರುಗಳಾದ ಬಿ, ಮಾದಪ್ಪ,ಕೇಶವಮೂರ್ತಿ , ಸಿದ್ದಪ್ಪ , ಕಾಳಪ್ಪ ,ಪಿಕೆ ಬಸವರಾಜು , ಗೌ ,ಶಿವಣ್ಣ , ಚಿಕ್ಕರಂಗೆಗೌಡ , ರವಿಕುಮಾರ್ , ಶಿವಣ್ಣ , ಬಂಗಿದಾಸಪ್ಪ , ರಾಜ. ಇನ್ನಿತರರು ಹಾಜರಿದ್ದರು.