Breaking News

ಒಳಮೀಸಲಾತಿ ವರದಿಗೆ ಸಚಿವ ಸಂಪುಟ ಒಪ್ಪಿಗೆ : ಶೇಕಡಾ 6 – 6 -5 ರ ಅನುಪಾತದಲ್ಲಿ ಮೀಸಲಾತಿ ಹಂಚಿಕೆಗೆ ನಿರ್ಧಾರ: ಸಂತಸ ವ್ಯಕ್ತಪಡಿಸಿದ ಸಮುದಾಯ

Cabinet approves internal reservation report: Decision to distribute reservation in the ratio of 6-6-5 percent: Community expresses happiness
Screenshot 2025 08 20 20 48 22 03 A71c66a550bc09ef2792e9ddf4b16f7a1338311361975350864 1024x576

ಬೆಂಗಳೂರು : ಪರಿಶಿಷ್ಟ ಜಾತಿ ಸಮುದಾಯವನ್ನು ಎಡಗೈ, ಬಲಗೈ ಮತ್ತು ಇತರೆ ಎಂಬ ಮೂರು ಗುಂಪುಗಳಾಗಿ ಮರುವರ್ಗೀಕರಣ ಮಾಡಲಾಗಿದ್ದು, ಕ್ರಮವಾಗಿ 6%, 6% ಮತ್ತು 5% ಒಳಮೀಸಲಾತಿ ನೀಡಲು ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಆಯೋಗ ವರದಿಯಂತೆ ಎಸ್ ಸಿ ಸಮುದಾಯವನ್ನು ಐದು ಗುಂಪುಗಳಾಗಿ ವರ್ಗೀಕರಣ ಮಾಡಿತ್ತು.

ಜಾಹೀರಾತು

ಗುಂಪು 1 ಅತೀ ಹಿಂದುಳಿದ ಜಾತಿಗಳು ಶೇ.1,ಗುಂಪು 2 ಎಡಗೈ ಜಾತಿಗಳು ಶೇ 6, ಗುಂಪು 3 ಬಲಗೈ ಜಾತಿಗಳು ಶೇ.5, ಗುಂಪು 4 ಬಂಜಾರ, ಬೋವಿ,ಕೊರಚ, ಕೊರಮ (ಅಸ್ಪೃಶ್ಯರಲ್ಲದ ಜಾತಿಗಳು) ಶೇ.4, ಗುಂಪು 5 ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿ ಶೇ.1 ಎಂದು ವರ್ಗೀಕರಣ ಮಾಡಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಡ, ಬಲ ಹಾಗೂ ಇತರೆ ಎಂದು ಮೂರು ವಿಂಗಡನೆ ಮಾಡಿ ಮರುವರ್ಗೀಕರಿಸಿ ಒಳಮೀಸಲಾತಿ ಮರುಹಂಚಿಕೆಗೆ ತೀರ್ಮಾನಿಸಲಾಗಿದೆ.

ಅದರಂತೆ ಪರಿಶಿಷ್ಟ ಜಾತಿ ಸಮುದಾಯದ ಎಡಗೈ ಗುಂಪಿಗೆ 6%,, ಬಲ ಗೈ ಗುಂಪಿಗೆ 6% ಮತ್ತು ಇತರೆ (ಸ್ಪರ್ಶೀಯರು,ಅಲೆಮಾರಿ ಗುಂಪು)ಗೆ 5% ಒಳಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಈ ಹೊಸ ವರ್ಗೀಕರಣದಂತೆ ನಾಗಮೋಹನ್ ದಾಸ್ ಆಯೋಗ ಶಿಫಾರಸು ಮಾಡಿದ್ದ ಗುಂಪು 5 ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಯನ್ನು ಬಲಗೈ ಗುಂಪಿಗೆ ಸೇರಿಸಲಾಗಿದೆ.ಆ ಮೂಲಕ ಬಲ ಗೈ ಗುಂಪಿಗೆ ಇದ್ದ 5% ಒಳ ಮೀಸಲಾತಿಯನ್ನು 6%ಗೆ ಏರಿಕೆ ಮಾಡಲಾಗಿದೆ.

ಇತ್ತ ಗುಂಪು 4 ಬಂಜಾರ, ಬೋವಿ, ಲಂಬಾಣಿ, ಕೊರಚ, ಕೊರಮ (ಅಸ್ಪೃಶ್ಯರಲ್ಲದ ಜಾತಿಗಳು) (ಶೇ.4)ನ್ನು ಇತರೆ ಗುಂಪು ಎಂದು ವರ್ಗೀಕರಿಸಿ 5% ಒಳ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಈ ಇತರೆ ಗುಂಪಿಗೆ ಅತಿ ಹಿಂದುಳಿದ ಜಾತಿ, ಅಲೆಮಾರಿ ಸಮುದಾಯವನ್ನು ಸೇರಿಸಲಾಗಿದೆ. ಆ ಮೂಲಕ ಪರಿಶಿಷ್ಡ ಜಾತಿ ಸನುದಾಯಗಳ ದಶಕಗಳ ಒಳಮೀಸಲಾತಿ ಕಾಯುವಿಕೆಗೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಯತ್ನಿಸಿದೆ.

ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿದ ವರದಿ ಪ್ರಕಾರ 101 ಪ.ಜಾತಿಗಳ ಕ್ರೋಢೀಕೃತ ವಿವರದಂತೆ ಪ್ರವರ್ಗ- Aಯಲ್ಲಿ 59 ಉಪ ಜಾತಿಗಳಿದ್ದು,5,22,099 ಒಟ್ಟು ಜನಸಂಖ್ಯೆ ಹೊಂದಿದೆ.‌ಪ್ರವರ್ಗ- B (ಎಡಗೈ) 18 ಉಪಜಾತಿಗಳಿದ್ದು, ಒಟ್ಟು 36,69,246 ಜನಸಂಖ್ಯೆ ಹೊಂದಿದೆ.ಪ್ರವರ್ಗ- C (ಬಲಗೈ) 17 ಉಪಜಾತಿಗಳಿದ್ದು, ಒಟ್ಟು ಜನಸಂಖ್ಯೆ 30,08,633 ಇದೆ.ಪ್ರವರ್ಗ- Dಯಲ್ಲಿ 4 ಉಪಜಾತಿಗಳಿದ್ದು, 28,34,939 ಜನಸಂಖ್ಯೆ ಹೊಂದಿದೆ. ಮತ್ತು ಪ್ರವರ್ಗ- E (ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ) 3 ಉಪಜಾತಿ ಇದ್ದು, 4,74,954 ಜನಸಂಖ್ಯೆ ಹೊಂದಿದೆ.‌

ಎಲ್ಲರಿಗೂ ತೃಪ್ತಿ ಕೊಡುವ ನಿರ್ಧಾರ

ಮೂರು ಗುಂಪುಗಳಾಗಿ ವರ್ಗೀಕರಣ ಮಾಡಲು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು. ಎಡ, ಬಲ ಹಾಗೂ ಇತರೆ ಎಂದು ಮೂರು ವರ್ಗೀಕರಣ ಮಾಡಿ ಕ್ರಮವಾಗಿ 6%, 6% ಮತ್ತು 5% ರಂತೆ ಒಳ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಎಲ್ಲರಿಗೂ ತೃಪ್ತಿಯಾಗುವ ನಿರ್ಧಾರ ಆಗಿದೆ. ಈ ತೀರ್ಮಾನ ಸಂತಸ ತಂದಿದೆ. ಅಲೆಮಾರಿ ಸಮುದಾಯವನ್ನು ಬಿಟ್ಟಂತೆ ಆಗಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಸಂಪುಟ ಸಭೆ ಎರಡೂವರೆ ಗಂಟೆ ನಡೆಯಿತು. ಎಲ್ಲಾ ಸಂತೋಷ ಸಮಾಧಾನದಿಂದ ಬಂದಿದ್ದೇವೆ. ಎಲ್ಲರಿಗೂ ಸಮಾಧನವಾಗಿದೆ. ಈ ತೀರ್ಮಾನದಿಂದ ಮುನಿಯಪ್ಪ, ಮಹದೇವಪ್ಪ, ಪರಮೇಶ್ವರ್, ಆರ್.ಬಿ.ತಿಮ್ಮಾಪುರ, ಶಿವರಾಜ್ ತಂಗಡಗಿ ಎಲ್ಲರೂ ಸಂತೋಷವಾಗಿ ದ್ದಾರೆ.ಈ ಬಗ್ಗೆ ನಾಳೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಲಿದ್ದಾರೆ ಎಂದರು.

ಎಚ್.ಆಂಜನೇಯ ಸಂತಸ

ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಪ್ರಮುಖ ನಾಯಕಾರದ ಮಾಜಿ ಸಚಿವ ಹೆಚ್.ಆಂಜನೇಯ ವಿಶೇಷ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಎಡಗೈ ಸಮುದಾಯಕ್ಕೆ 6% ಒಳ ಮೀಸಲಾತಿ ನೀಡಲಾಗಿದೆ. ನಮಗೆ 7% ಮೀಸಲಾತಿ ನೀಡಬೇಂಕೆಂಬ ಬೇಡಿಕೆ ಇತ್ತು. ಆದರೆ 6% ನೀಡಿರುವುದು ತೃಪ್ತಿ ತಂದಿದೆ. ಏನೂ ಮೀಸಲಾತಿ ಸಿಗದಂಥ ನಮ್ಮ ಸಮುದಾಯಕ್ಕೆ 6% ಒಳಮೀಸಲಾತಿ ಲಭಿಸಿರುವ ಬಗ್ಗೆ ಸಮಾಧಾನ ಇದೆ. ನಮ್ಮ ಸಮುದಾಯಕ ಬಹಳ ವರ್ಷಗಳಿಂದ ನೊಂದಿತ್ತು‌. ಸಮುದಾಯಕ್ಕೆ ಉದ್ಯೋಗ ಸವಲತ್ತು ಸಿಕ್ಕಿರಲಿಲ‌್ಲ. ಈಗ ಈ 6% ಒಳ ಮೀಸಲಾತಿಯಿಂದ ನಮಗೆ ಉದ್ಯೋಗ, ಸವಲತ್ತು ಸಿಗುವ ವಿಶ್ವಾಸ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ ಹೆಚ್.ಆಂಜನೇಯ ಮತ್ತು ಬೆಂಬಲಿಗರು ಒಳಮೀಸಲಾತಿ ನೀಡಿದ ಸಿಎಂ ಸಿದ್ದರಾಮಯ್ಯಗೆ ವಿಧಾನಸೌಧದಲ್ಲೇ ಮಾಲಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು.‌ ಸಿಎಂ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಎಡಗೈ ಸಮುದಾಯದವರು ಸಿಹಿ ತಿನ್ನಿಸಿ ಸಂಭ್ರಮಾಚರಿಸಿದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನ ಮಂಡಲದ ಅಧಿವೇಶನದಲ್ಲಿ ಘೋಷಣೆ ಮಾಡಲಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.