186th World Photography Day,,

ಡಿಜೆಟಲ್ ಫೋಟೋಗಳಿಂದ ಛಾಯಾಗ್ರಾಹಕರ ಜೀವನ ಸಂಕಷ್ಟ,,! ರಮೇಶ ಹೊಸ್ಮನಿ ಅಭಿಮತ,,
ಗಂಗಾವತಿ : ಇಂದಿನ ತಂತ್ರಜ್ಞಾನ ಯುಗದಲ್ಲಿ ಡಿಜಟಲ್ ಫೋಟೋಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ಸರಳ ಯಾಂತ್ರಿಕೃತ ಫೋಟೋಗಳಿಂದ ಛಾಯಾ ಗ್ರಾಹಕರ ಜೀವನ ಸಂಕಷ್ಟದೊಂದಿಗೆ ಸಾಗಿದೆ ಎಂದು ನಗರದ ಶ್ರೀ ಹನುಮಾನ್ ಕಲರ್ಸ್ ಲ್ಯಾಬ್ ಮಾಲೀಕರಾದ ರಮೇಶ ಹೊಸ್ಮನಿ ಹೇಳಿದರು.
ಅವರು ಮಂಗಳವಾರದಂದು 186 ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಶ್ರೀ ಹನುಮಾನ್ ಕಲರ್ಸ್ ಲ್ಯಾಬ್ ಹಾಗೂ ಉಪ್ಪಿ ಫೋಟೋಸ್ ಗಂಗಾವತಿ ಅವರ ವತಿಯಿಂದ ನಗರದ ಲಯನ್ಸ್ ಬುದ್ದಿಮಾಂಧ್ಯ ವಿದ್ಯಾರ್ಥಿಗಳಿಗೆ ಅನ್ನ ಸಂತಪರ್ಣಣೆ ನೆರವೇರಿಸಿ ಬಳಿಕ ಮಾತನಾಡಿ ಮೊದಲು ಪ್ರತಿಯೊಂದು ಶುಭ ಸಮಾರಂಭ, ಸರಕಾರಿ ಕಚೇರಿಗಳಲ್ಲಿ ನಮ್ಮ ಫೋಟೋ ಗ್ರಾಫರ್ ಹೋಗಿ ಫೋಟೋ ಸೆರೆ ಹಿಡಿದು ತಂದು ಅವುಗಳನ್ನು ಪ್ರಿಂಟ್ ಹಾಕಿಸಿಕೊಡುತ್ತಿದ್ದರು. ಆದರೆ ಇಂದಿನ ತಂತ್ರಜ್ಞಾನ ಮುಂದೊರೆದಿದ್ದರಿಂದ ಗ್ರಾಹಕರೇ ಮೊಬೈಲ್ ಮೂಲಕ ಫೋಟೋಗ್ರಫಿ ಮಾಡುತ್ತಿರುವುದರಿಂದ ನಮಗೆ ತುಂಬಾ ಆರ್ಥಿಕ ನಷ್ಟವಾಗುತ್ತಿದೆ ಎಂದರು.
ಕೇವಲ ಫೋಟೋಗ್ರಫಿ ಎಂದರೇ ಸ್ಟೂಡಿಯೋ ನಡೆಸುವುದು ಒಂದೇ ಅಲ್ಲದೇ ವಿಷೇಶವಾಗಿ ನೈಸರ್ಗಿಕ ಫೋಟೋಗಳು, ಜಗತ್ತಿನ ಹಲವಾರು ವಿಷೇಶತೆಗಳ ಕುರಿತು ಅಧ್ಯಯನ ನಡೆಸುವ ಫೋಟೋಗಳು, ಪ್ರಾಣಿ, ಪಕ್ಷಿ, ಹಳ್ಳಿ ಜೀವನ ಸೊಗಡು ಹೀಗೆ ವಿಬಿನ್ನ ಮಾದರಿಯಲ್ಲಿ ಫೋಟೋಗ್ರಫಿ ಮಾಡುವುದು ಛಾಯಾಗ್ರಾಹಕ ಕೆಲಸವು ಆಗಿದೆ. ನಮ್ಮ ಛಾಯಾ ಗ್ರಾಹಕರ ವಿಷೇಶವಾಗಿ ಸೆರೆ ಹಿಡಿದ ಫೋಟೋಗಳು ರಾಜ್ಯ ಅಂತರ್ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು. ನಂತರದಲ್ಲಿ ಪ್ರತಿಯೊಬ್ಬರಿಗೂ ಛಾಯಾಗ್ರಾಹಕರ ದಿನದ ಶುಭಾಶಯಗಳನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಛಾಯಾ ಗ್ರಾಹಕರ ಸಂಘದ ಗೌರವಾಧ್ಯಕ್ಷ, ಉಪಾಧ್ಯಕ್ಷ
, ಕಾರ್ಯದರ್ಶಿ ಖಜಾಂಚಿ, ಸದಸ್ಯರಾದ ಇನ್ನಿತರರು ಇದ್ದರು.