21st Commemoration of His Holiness Rudramuni Mahaswamy

ಶ್ರೀ/ಮ/ನಿ/ಪ್ರ/ರುದ್ರಮುನಿ ಮಹಾಸ್ವಾಮಿಗಳ ೨೧ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಲೇಖನ
ಲೇಖನ ಸಂಗ್ರಹ ಸೋಮಶೇಖರಯ್ಯ ಸ್ವಾಮಿ ಹಿರೇಮಠ ಕನಕಗಿರಿ
ಭರತ ಖಂಡವು ಹಲವು ಧರ್ಮದ ನೆಲಬೀಡು ಜೊತಗೆ ಜ್ಞಾನದ ಬೀಡು ಕರುಣೆಯ ನಾಡು ಇದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಹೆಸರು ಮಾಡಿದ ಸುವರ್ಣಯುಗ.
ವಿಜಯ ನಗರದ ಹೊನ್ನಾಡು ಅಂದಿನ ರಾಜರಸುಗಳ ಬಲಗೈ ಭಂಟರಾಗಿ ಆಳಿದ ವೀರ ಸಾಮಂತರ ಬೀಡು ಸುವರ್ಣಗಿರಿ ಇದು ಶ್ರೀ ಅಲ್ಲಮಪ್ರಭುವಿನ ಕೃಪಾಸ್ಥಾನ. ಶ್ರೀ ರುದ್ರಶಿವಯೋಗಿಗಳ ತಪೋತಾಣ ಶ್ರೀ ಕನಕಾಚಲಪತಿಸ್ವಾಮಿಯ ಶ್ರದ್ಧಾ ಭಕ್ತಿಯ ಬೀಡು ಶ್ರೀ ಚಿದಾನಂದವಧೂತರ ಲೀನವಾದ ಐಕ್ಯಸ್ಥಳ ಶ್ರೀ ಕನಕ-ಪುರಂದರು ನಡೆದಾಡಿದ ನೆಲ ಕಲ್ಯಾಣ ಕರ್ನಾಟಕದ ಐತಿಹಾಸಿಕ ಚಾರಿತ್ರಿಕ ಆಧ್ಯಾತ್ಮಿಕವಾಗಿ ಪ್ರಸಿದ್ಧಿ ಪಡೆದ ಪುಣ್ಯಭೂಮಿ ಕನಕಗಿರಿ
ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠ ಕನಕಗಿರಿ ಶ್ರೀ ಮಠವು ೧೨ನೇ ಶತಮಾನದಲ್ಲಿ ವೈರಾಗ್ಯ ನಿಧಿ ಶ್ರೀ ಅಲ್ಲಮಪ್ರಭುವು ಕಲ್ಯಾಣದಿಂದ ಹೊರಟು ಲೋಕ ಸಂಚಾರ ಕೈಗೊಂಡು ಚಿತ್ತರಗಿಯಲ್ಲಿ ವಟುವನ್ನು ಪಟ್ಟಗೈದು ಮುಂದೆ ಸಾಗುತ್ತಾ ಕನಕಗಿರಿಯಲ್ಲಿ ತಂಗಿದ್ದು ನಂತರ ಅಲ್ಲಿಂದ ಹೊರಡುವ ವೇಳೆಯಲ್ಲಿ ಶ್ರೀ ಮಠವನ್ನು ಸ್ಥಾಪಿಸಿ ಶ್ರೀರುದ್ರದೇವ {ಶಿವಯೋಗಿಗಳು} ಎಂದು ನಾಮಕರಣಮಾಡಿ ಅದಿಕಾರವನ್ನು ವಹಿಸಿಕಟ್ಟಿರವರು ಎಂದು ಪ್ರತಿತಿ. ಮಠ ಮತ್ತು ಪುರ ರಚನಾ ಕಾರ್ಯದಲ್ಲಿ ಶ್ರಮಿಸಿದ ಭಕ್ತ ಸಮೂಹಕ್ಕೆ ಶ್ರೀಗುರು ರುದ್ರ ಶಿವಯೋಗಿಗಳು ಗಿರಿ ತೋರಿಸಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಗಿರಿಯಲ್ಲಿದೆ ತೆಗೆದುಕೊಳ್ಳಿ ಎಂದು ಹೇಳಿದಾಗ ಶ್ರೀಗಳ ಅಪ್ಪಣೆಯಂತೆ ಭಕ್ತ ಸಮೂಹ ಅಲ್ಲಿಗೆ ತೆರಳಿ ಗಿರಿಯನ್ನು ಅಗೆದಾಗ ಚಿನ್ನ ಸಿಕ್ಕಾಗ ಭಕ್ತ ಸಮೂಹ ಆಶ್ಚರ್ಯಚಿಕಿತರಾಗಿ ಕಲ್ಲು ಮಣ್ಣಿನಿಂದ ಕೂಡಿದ ಗುಡ್ಡದಲ್ಲಿ ಬಂಗಾರವನ್ನು ಸೃಷ್ಠಿಸಿದ ಮಹಾಮಹಿಮ ರುದ್ರಯೋಗಿಯನ್ನು ಕೊಂಡಾಡುತ್ತಾರೆ.ಈ ಗುರು ಲೀಲೆಯಿಂದ ಸಿರಿ ಗುಡ್ಡ ಬಂಗಾರದ ಗಿರಿ ಲಕ್ಷಿö್ಮ ಗುಡ್ಡ ಕನಕಗಿರಿಯಾಯಿತೆಂದು ಜನರು ತಮ್ಮ ಜಾನಪದದಲ್ಲಿ ಹಾಡುತ್ತಾರೆ. ಕನಕಗಿರಿ ಮಾಡಿದ ಶ್ರೀ ರುದ್ರ ಶಿಯೋಗಿ ಕನಕ ಗುರು ಕನಕಮುನಿ ಈತ ಕಟ್ಟಿಸಿದ ಪುರ ಕನಕಗಿರಿ ಈತನಾರೋಹಿಸಿದ ಕನಕಗಿರಿ ಶೂನ್ಯ ಪೀಠ ಸುವರ್ಣಗಿರಿ ಸಂಸ್ಥಾನ ಪೀಠ ಎಂದು ಸೂಜ್ಞರು ಸುಚಿಸುತ್ತಾರೆ.ಇದಕ್ಕೂ ಪೂರ್ವದಲ್ಲಿ ಕನಕಗಿರಿಗೆ ಸುವರ್ಣಗಿರಿ ಎಂದು ಕರಯಲಾಗುತ್ತತ್ತು ಎಂಬುದು ಇತಿಹಾಸ ಶ್ರೀಮಠವು ಸನಾತನ ಚರಪೀಠವಾಗಿದೆ ನೂರಾರು ಶಾಖಾ ಮಠಗಳನ್ನೋಳಗೊಂಡ ಪ್ರಭಾವಿ ಪೀಠವನ್ನು ಅಲಂಕರಿಸಿದ ಪರಮಪೂಜ್ಯರ ಸಮಾಧಿ ಗದ್ದುಗೆ ಗುಡಿ ೪೦ಕ್ಕೂ ಅಧಿಕ ಪೀಠ ಹಾಗೂ ಅನೇಕ ಶಾಖಾ ಮಠಗಳಲ್ಲಿವೆ. ಶ್ರೀ ಮಠವು ೨೮ ತೆಲೆಮಾರುಗಳ ಪರಮ ಪೂಜ್ಯರ ಪರಂಪರೆಯನ್ನು ಹೋದಿದೆ.
೧೫ನೇ ಶತಮಾನದ ಪ್ರೌಢ ದೇವರಾಯನ ಕಾಲದಲ್ಲಿದ್ದ ೧೦೧ ವಿರಕ್ತರಲ್ಲಿ ಕಲ್ಲು ಮಠದ ರುದ್ರದೇವ ಎಂಬುವವರು ಶ್ರೀಮಠದವರಾಗಿದ್ದಾರೆ.ಇದಕ್ಕೆ ಶಿವತತ್ವ ರತ್ನಾಕರವು ಪುರಾವೆಯನ್ನು ಒದಗಿಸುತ್ತದೆ ಇಷ್ಟಲ್ಲದೇ ಎಡೆಯೂರಿನ ಶ್ರೀ ಸಿದ್ದಲಿಂಗ ಯತಿಗಳ ಕಾಲದಲ್ಲಿ ೭೦೧ ವಿರಕ್ತರಲ್ಲಿ ಶ್ರೀ ಮಠದ ಪರಮ ಪೂಜ್ಯರು ಒಬ್ಬರು ಎಂಬುದು ಹೆಮ್ಮೆಯ ವಿಷಯವಾಗಿದೆ. ಶ್ರೀ ಸಿದ್ದಲಿಂಗ ಯತಿಗಳು ತಮ್ಮ ರಚನೆಯಲ್ಲಿ ಶ್ರೀ ಮಠದ ಪರಮ ಪೂಜ್ಯರನ್ನು ಕುರಿತು ಉಲ್ಲೇಖ ಮಾಡಿರುತ್ತಾರೆ.ಶ್ರೀ ಮಠವು ಅಂದಿನಿAದ ತನ್ನದೇಆದ ಧಾರ್ಮಿಕ ಸಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ ಶ್ರೀ ಮಠದ ಕಾಯ್ಗಳನ್ನು ಮೆಚ್ಚಿ ೨೫ನೇ ಪೀಠಾಧಿಪತಿಗಳ ಧಾರ್ಮಿಕ ವಿಚಾರಗಳಿಗೆ ಮನಸೋತ ಹೈದ್ರಾÀಬಾದನ ನಿಜಾಮ ಮಾಂಡಲೀಕ ಅರಸರಾದ ಕನಕಗಿರಿಯ ಗುಜ್ಜಲ ವಂಶದವರಿಗೂ ಶ್ರೀ ಮಠವು ಗುರು ಮಠವಾಗಿತ್ತು.ಅದಕ್ಕೆ ಸಾಕ್ಷಿಯಾಗಿ ಬೆಳ್ಳಿಯ ಬೆತ್ತ ಚಾಮರಗಳನ್ನು ಈಗಲೂ ಶ್ರೀ ಮಠದಲ್ಲಿ ನೋಡಬಹುದಾಗಿದೆ,ಮೂಲ ಮಠವು ಕೋಟೆಯ ಹೊರಗೆ ಇದ್ದು ಮಣಿಣನಿಂದಾದ ಮಠವು ಕಾಲ ಕ್ರಮೇಣ ಗತಿಸುತ್ತಿರುವಾಗ ೧೪-೧೫ ನೇ ಶತಮಾನದಲ್ಲಿ ಕನಕಗಿರಿಯ ಸಾಮಮತರು ಕೋಟೆಯ ಓಳಗಡೆ ಕಲ್ಲಿನ ಶ್ರೀ ಮಠವನ್ನು ನಿರ್ಮಿಸಿ ಕನಕಾಚಲ ರಥವು ಶ್ರೀ ಮಠದವರೆಗೂ ಬಂದು ಉತ್ತರ ಪೂಜೆಯನ್ನು ಸ್ವೀಕರಿಸಿ ತೆರಳುವಂತೆ ಮಾಡಿದರು.ಅಂದಿನಿAದ ಇಂದಿನವರೆಗೂ ಚಾಚು ತಪ್ಪದೇ ನಡೆಯುತ್ತದೆ.
೨೪ನೆ ಪೀಠಾಧಿಪತಿಗಳ ತರುವಾಯ ಲಿಂ/ಶ್ರಿ/ಮ/ನಿ/ಪ್ರ ಚನ್ನಮಲ್ಲ ಶಿಯೋಗಿಗಳು ಪಾಂಡಿತ್ಯವನ್ನು ಹೋದಿದವರಾಗಿದ್ದು ಹಲವಾರು ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದವರಾಗಿದ್ದು ಹ್ಯದರಬಾದ ನಿಜಾಮ ಅರಸರು ಶ್ರೀಗಳಿಂದ ಸಲಹೆ ಸೂಚನೆ ಆಶೀರ್ವಾದ ಪಡೆಯುತ್ತಿದ್ದರು ಎಂಬುದಕ್ಕೆ ಅರಸರು ಶ್ರೀಗಳಿಗೆ ನೀಡಿರುವ ದಾನದತ್ತಿಗಳೇ ಸಾಕ್ಷಿಯಾಗಿವೆ ಶ್ರೀಗಳು ಹಲವಾರು ಬಡ ಮಕ್ಕಳಿಗೆ ಧನ ಸಹಾಯ ಮಾಡುವ ಮುಲಕ ವಿದ್ಯಾವಂತರನ್ನಾಗಿಸಿ ಉನ್ನತ ಹುದ್ದೆಗಳಿಗೆರಲು ಆಶೀರ್ವದಿಸಿದ್ದಾರೆ ಅಲ್ಲದೇ ವಳ ಬಳ್ಳಾರಿಯ ಲಿಂ/ಶ್ರಿ ಚನ್ನ ಬಸವ ತಾತನವರನ್ನು ಬಾಲ್ಯದಲ್ಲಿಯೇ ಕರೆತಂದು ಶಾಸ್ತç ವೆದ ಮಂತ್ರಗಳನ್ನು ಆಚಾರ ವಿಚಾರಗಳನ್ನು ಕಲಿಸಿ ಶಿವಾನುಭವ ಸಂಪನ್ನಶಗಿಸಿ ಶ್ರೀ ಮಠದ ಶಾಖಾ ಮಠಗಳಾದ ವಳ ಬಳ್ಳಾರಿ ನದೀಚಾಗಿ ಪಾಮನ ಕೆಲ್ಲೂರು ಎದ್ದಲ ದೊಡ್ಡಿ ಗಿಣಿವಾರ ಅಯನುರು ಹಾಗೂ ಕೋಸಗಿ ಮಠಗಳಿಗೆ ಅವರನ್ನು ನೇಮಕ ಮಾಡಿ ಅಧಿಕಾರವಹಿಸಿಕೊಟ್ಟಿರುವುದು ಅವರು ಕೈಗೊಂಡ ಮಹತ್ವದ ಕಾರ್ಯಗಳಲ್ಲಿ ಒಂದಾಗಿದೆ. ಶ್ರೀಗಳು ಕಾರಣಿಕ ಯುಗ ಪುರುಷ ಹಾನಗಲ್ ಶ್ರೀ ಕುಮಾರ ಮಹಾಸ್ವಾಮಿಗಳೊಂದಿಗೆ ಆತ್ಮೀಯ ಒಡನಾಟವುಳ್ಲವರಾಗಿದ್ದರು. ಶಿವಯೋಗಿ ಮಂದಿರದಲ್ಲಿ ಹಲವು ವರ್ಷಗಳ ಕಾಲ ಪಾಠವನ್ನು ಮಾಡಿದ್ದಾರೆ.ಕೊನೆಗಾಲದಲ್ಲಿ ಶ್ರೀ ಮಠದ ಶಾಖಾ ಮಠವಾದ ಮೆದಕಿನಾಲ ಗ್ರಾಮದಲ್ಲಿ ಮಾರ್ಗಶಿರ ಬಹುಳ ಸಪ್ತಮಿಯಂದು ೧೯೫೪ ರಲ್ಲಿ ಲಿಂಗಕ್ಯೆರಾಗುತ್ತಾರೆ.ಅಂದಿನಿಂದ ಅವರ ಸ್ಮರಣೆಯನ್ನು ಜಾತ್ರಾ ಮಹೋತ್ಸವವಾಗಿ ಆಚರಿಸಲಾಗುತ್ತದೆ.
ಶ್ರೀ ಚನ್ನಮಲ್ಲ ಶಿವಯೋಗಿಗಳು ಲಿಂಗಕ್ಯೆರಾದ ನಂತರದಲ್ಲಿ ಶ್ರೀ ಮಠವು ಹೋಂದಿರುವ ಸಾವಿರಾರು ಎಕರೆ ಭೂಮಿ ನೂರಾರು ಶಾಖಾ ಮಠಗಳ ಆಸ್ತಿಯಿಂದಾಗಿ ಸರಕಾರವು ಶ್ರೀ ಮಠವನ್ನು ೧೫ ವರ್ಷಗಳ ಕಾಲ ತನ್ನ ಸುಪರ್ದಿಗೆ ತೆಗೆದುಕೊಂಡಿತು ನಂತರ ೧೯೭೧ ರಲ್ಲಿ ಲಿಂ/ಶ್ರೀ ಮ ನಿ ಪ್ರ ರುದ್ರಮುನಿ ಮಹಾಸ್ವಾಮಿಗಳನ್ನು ಶ್ರೀ ಮಠದ ಉತ್ತರಾಧಿಕಾರಿಗಳನ್ನಾಗಿ ನೆಮಿಸಲಾಯಿತು.
ಶ್ರೀ ರುದ್ರಮುನಿ ಮಹಾಸ್ವಾಮಿಗಳು ತೊನಸಿಹಾಳ ಗ್ರಾಮದಲ್ಲಿ ಹಿರೇಮಠದ ವಂಶಸ್ಥರಾದ ಶ್ರೀ ಬಸಯ್ಯ ಮತ್ತು ಶ್ರೀಮತಿ ಗುಂಡಮ್ಮನವರ ಪುಣ್ಯ ಉದರದಲ್ಲಿ ೦೨/೦೮/೧೯೪೫ ರಲ್ಲಿ ಜನಿಸುತ್ತಾರೆ ಇವರಿಗೆ ಮಹಾಂತಯ್ಯನೆಂದು ಹೆಸರಿಡಲಾಯಿತು ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುನುಗುಂದ ತಾಲೂಕಿನ ಇಲಾಳ ಗ್ರಾಮದ ಸೋದರ ಮಾವನವರಾದ ದಮ್ಮೂರು ಹಿರೇಮಠದ ವೀರಭದ್ರಯ್ಯ ಮತ್ತು ರಾಚಯ್ಯನವರ ಆಸ್ರಯದಲ್ಲಿ ೩ನೇ ತರಗತಿಯವರೆಗೆ ಅಧ್ಯಯನ ಮಾಡಿ ನಂತರ ೧೦ನೇ ವಯಸ್ಸಿನಲ್ಲಿ ಚಿತ್ತರಗಿ/ಇಳಕಲ್ಲಿನ ಅಂದಿನ ಪೀಠಾಧಿಪತಿಗಳಾದ ಲಿಂ/ಶ್ರೀ ಮ ನಿ ಪ್ರ ಕೊಪ್ಪದ ಮಹಾಂತ ಸ್ವಾಮಿಗಳ ಮಾರ್ಗಸೂಚಿಯಂತೆ ಶಿವಯೋಗಿ ಮಂದಿರಕ್ಕೆ ತೆರಳಿದರು. ಮಂದಿರದಲ್ಲಿ ಶ್ರೀ ಶಂಕರದೇವರೆಂಬ ಹೆಸರಿನಿಂದ ತಮ್ಮ ಅದ್ಯಯನವನ್ನು ಮುಂದುವರೆಸಿದರು ಶಿವಯೋಗಿ ಮಂದಿರದಲ್ಲಿ ಶಂಕರ ದೇವರು ಶ್ರೀಗುರು ಕುಮಾರೇಶನ ಸನ್ನಿಧಿಯಲ್ಲಿ ಸಂಸ್ಕೃತ ವೇದ ಉಪನಿಷತ್‌ಗಳ ಜ್ಷಾನವನ್ನು ಅಳವಡಿಸಿಕೊಂಡು ಯೋಗ ತಪ ಜಪಗಳಲ್ಲಿ ಸಾಧನೆಯನ್ನು ಮಾಡಿ ಅನುಷ್ಠಾನ ಮೂರ್ತಿಗಳಾದರು ನಂತರ ಅವರು ಅಲ್ಲಿಯೇ ಅವರು ಆರ್ಯುವೇದ ಶಾಸ್ತ್ರದಲ್ಲಿ ಪಾಂಡಿತ್ಯಹೊಂದಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಸುಕ್ಷೆತ್ರ ಕನಕಗಿರಿಯ ಭಕ್ತರ ಇಚ್ಛೆಯಮೇರೆಗೆ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಹಾಲಕೇರಿಯ ಅನ್ನದಾನೀಶ್ವರಿ ಮಠದ ಪೀಠಾಧಿಪತಿಗಳಾಗಿದ್ದ ಲಿಂ/ ಶ್ರೀ ಮ ನಿ ಪ್ರ ಅನ್ನದಾನ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಕೆಲವು ದಿನಗಳ ಕಾಲ ಸೇವೆಗೈದು ಶ್ರೀಶಕೆ ೧೮೯೨ನೇಯ ಸಾಧಾರಣನಾಮ ಸಂವತ್ಸರದ ಮಾಘ ಶುದ್ಧ ದಶಮಿ ದಿನಾಂಕ ೦೫/೦೨/೧೯೭೧ ಶುಕ್ರವಾರದಂದು ಹಾಲಕೇರಿಯ ಲಿಂ/ ಶ್ರೀ ಮ ನಿ ಪ್ರ ಅನ್ನದಾನ ಮಹಾಸ್ವಾಮಿಗಳಿಂದ ಕನಕಗಿರಿಯ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಶ್ರೀ ಮ ನಿ ಪ್ರ ರುದ್ರಮುನಿ ಮಹಾಸ್ವಾಮಿಗಳೆಂದು ವಿಧ್ಯುಕ್ತವಾಗಿ೨೭ನೇ ಪೀಠಧಿಪತಿಗಳಾಗಿ ಅಧಿಕಾರವನ್ನು ಪಡೆದು ಶ್ರೀ ಮಠದ ಏಳ್ಗೆಗಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು.
ಹೈದರಾಬಾದ್ ಕರ್ನಾಟಕವು ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಸವೆಂಬುದು ಎಲ್ಲರಿಗೂ ತಿಳಿದ ವಿಚಾರ ಅದರಲ್ಲಿಯೂ ಕನಕಗಿರಿ ಪ್ರದೇಶವು ಮಳೆ ಆಧಾರಿತ ವ್ಯವಸಾಯದಿಂದಾಗಿ ಈ ಭಾಗದ ಜನತೆಯಲ್ಲಿ ಜಾಗೃತಿ ಮೂಡಬೇಕಾದರೆ ಅದಕ್ಕೆ ಶಿಕ್ಷಣದ ಅವಶ್ಯಕವೆಂಬುದನ್ನು ಮನಗಂಡ ಪೂಜ್ಯರು ೧೯೮೭ ರಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು ಅದರ ಅಡಿಯಲ್ಲಿ ೧೯೮೮ ರಲ್ಲಿ ಶ್ರೀ ಶಿವಯೋಗಿ ಚನ್ನಮಲ್ಲ ಪ್ರಾಥಮಿಕ ಶಾಲೆಯನ್ನು ಮತ್ತು ೧೯೯೨ ರಲ್ಲಿ ಶ್ರೀ ರುದ್ರಸ್ವಾಮಿ ಪ್ರೌಢ ಶಾಲೆಯನ್ನು ಕನಕಗಿರಿಯಲ್ಲಿ ಸ್ಥಾಪಿಸಿದರು ಅವರು ಹಚ್ಚಿ ಹೋದ ಸಸಿಯು ಇಂದು ಚಿಗುರೊಡೆಯುತ್ತಿದೆ ಶಿಕ್ಷಣ ಪ್ರೀಮಿಗಳಾದ ಪರಮ ಪೂಜ್ಯರು ಅನೇಕ ಭಾಗಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಭೂಮಿಯನ್ನು ದಾನವಾಗಿ ನೀಡಿದ್ದಾರೆ. { ಬೇವೂರು,ಜಾಲಹಾಳ,ಮಮಗಳೂರು,ಮೆದಕಿನಾಳ,ಕನಕಗಿರಿ ಸೇರಿದಂತೆ ಹಲವಡೆ ಭೂಮಿಯನ್ನು ದಾನವಾಗಿ ಸರಕಾರಕ್ಕೆ ನೀಡಿರುವುದು} ಇದಲ್ಲದೇ ಅನೇಕ ಗ್ರಾಮಗಳಿಗೆ ಲಕ್ಷಾಂತರ ರೂಗಳನ್ನು ಧನ ಸಹಾಯ ಮಾಡಿರುವರು ಹೀಗೆ ಕೊಡಗೈ ಶ್ರೀಗಳಾಗಿ ಬೆಳಗಿದ ಪರಮ ಪೂಜ್ಯರು ಶ್ರೀಶಕೆ ೧೯೨೬ನೇ ತಾರಣನಾಮ ಸಂವತ್ಸರದ ಶ್ರಾವಣ ಮಾಸದ ಬಹುಳ ದಶಮಿಯಂದು ಲಿಂಗೈಕ್ಯರಾದರು.
ಇದೇ ದಿನಾಂಕ ೧೮/೦೮/೨೦೨೫ ಸೋಮವಾರದಂದು ಪರಮ ಪೂಜ್ಯರ ೨೧ನೇ ವರ್ಷದ ಪುಣ್ಯಸ್ಮರಣೋತ್ಸವ ಇರುತ್ತದೆ ಆ ದಿನ ಪೂಜ್ಯರ ಗದ್ದುಗೆಗೆ ರುದ್ರಾಭಿಷೇಕ ಸಹಸ್ರ ಪುಷ್ಪಾರ್ಚನೆ ನಂತರ ಪೂಜ್ಯರ ಸುಂದರ ಭವ್ಯ ಮೂರ್ತಿಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಜಾ ಭಜಂತ್ರಿಯೊAದಿಗೆ ಭವ್ಯ ಮೆರವಣಿಗೆ ಜರುಗಲಿದೆ ನಂತರ ಭೂರಿಗಣಾರಾದನೆ ನೆರವೆರಲಿದೆ ಆದಕಾರಣ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡು ಪೂಜ್ಯರ ಕೃಪೆಗೆ ಪಾತ್ರರಾಗೋಣ
