Congress holds march to save democracy, protect the constitution

ಗಂಗಾವತಿ: ಗಂಗಾವತಿ ನಗರ, ಗ್ರಾಮೀಣ, ಯುವ ಕಾಂಗ್ರೆಸ್ ಘಟಕಗಳಿಂದ ಕೊಪ್ಪಳ ರಸ್ತೆಯಲ್ಲಿ ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಎಂದು ಘೋಷಣೆ ಕೂಗುತ್ತಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಥಸಂಚಲನ ನೆಡೆಸಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿಶ್ವನಾಥ ಮಾಲಿಪಾಟೀಲ್ ಮಾತನಾಡಿ, ಬಿಜೆಪಿ ಅಡ್ಡದಾರಿಯಿಂದ ಅಧಿಕಾರ ಹಿಡಿದಿದೆ, ಜನತೆ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ, ಗ್ಯಾರಂಟಿ ಫಲಶೃತಿ ಮುಂದಿನ ಲೋಕಸಭೆಯಲ್ಲಿ ಕೈ ಹಿಡಿಯಲಿದ್ದು, ಕಾಂಗ್ರೆಸ್ ವರೀಷ್ಠ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದರು.
ಇದಕ್ಕು ಮುನ್ನಾ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿಯವರ ನಿವಾಸದ ಕಾಂಗ್ರೇಸ್ ಕಾರ್ಯಾಲಯ ಆವರಣದಲ್ಲಿ ೭೯ನೇ ಸ್ವಾತಂತ್ರೊ÷್ಯÃತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿತದನಂತರ ೯.೦೦ ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಸಂವಿಧಾನ ರಕ್ಷಿಸಿ – ಪ್ರಜಾಪ್ರಭುತ್ವ ಉಳಿಸಿ ಘೋಷಣೆ ಕೂಗಿದರು.
ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ಬಿಜೆಪಿ ಯವರು ಮತಗಳತನ ಮಾಡಿ ಅಡ್ಡ ದಾರಿಯಲ್ಲಿ ಅಧಿಕಾರವನ್ನು ಹಿಡಿದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟಿçÃಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಂIಅಅ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೋರಾಟಕ್ಕೆ ಬೆಂಬಲಿಸಿ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಅವರ ಬೆಂಬಲಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಾತನಾಡಿದರು. ಮುಖಂಡರಾದ ಎಸ್ಪಿ ಖಾದ್ರಿ, ಯಮನಪ್ಪ ವಿಠಲಾಪುರ, ಸಣ್ಣಕ್ಕಿ ನೀಲಪ್ಪ, ನಗರಸಭಾ ಸದಸ್ಯ ಖಾಸಿಮ್‌ಸಾಬ್ ಗದ್ವಾಲ್, ಮನೋಹರಸ್ವಾಮಿ ಹಿರೇಮಠ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ, ಹುಸೇನಪ್ಪ ಹಂಚಿನಾಲ್, ಎಫ್ ರಾಘವೇಂದ್ರ, ಹುಲಿಗೆಮ್ಮ ಕಿರಿಕಿರಿ, ಖಾಸೀಂ ಅಲಿ ಮುದ್ದಾಬಳ್ಳಿ, ಗ್ಯಾರಂಟಿ ಯೋಜನಾ ಸಮಿತಿ ಹಮೀದ್ ಮುಲ್ಲಾ, ದಾವಲ್, ಮಂಜುನಾಥ ಕಲಾಲ್, ಸಜ್ಜಾವಲಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹೊನ್ನೂರ ಅಲಿ ಸೇರಿದಂತೆ ಇತರರಿದ್ದರು.
Kalyanasiri Kannada News Live 24×7 | News Karnataka
