All Karnataka YouTube Journalists Association inaugurated on Independence Day.

ತಿಪಟೂರು. ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಸಭಾಂಗಣದಲ್ಲಿ ಯೂಟ್ಯೂಬ್ ಪತ್ರಕರ್ತರ ಸಂಘದ ಉದ್ಘಾಟನೆಯನ್ನು ಗಿಡಕ್ಕೆ ನೀರು ಎರೆಯುವ ಮುಖಾಂತರ ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಅವರು ನೆರವೇರಿಸಿ ಮಾತನಾಡಿದ ಅವರು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು, ವಿಶೇಷವಾಗಿ ಯೂಟ್ಯೂಬ್, ಪತ್ರಿಕೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಅಖಿಲ ಕರ್ನಾಟಕ ಯೂಟ್ಯೂಬ್ ಪತ್ರಕರ್ತರ ಸಂಘದ ಸ್ಥಾಪನೆಯು ಮಾಧ್ಯಮ ಕ್ಷೇತ್ರದಲ್ಲಿ ಒಂದು ಹೊಸ ಬೆಳವಣಿಗೆಯಾಗಿದೆ. ಇದು ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿರುವ ಪತ್ರಕರ್ತರಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ ಮತ್ತು ಅವರ ಕೆಲಸವನ್ನು ಬೆಂಬಲಿಸುತ್ತದೆ. ಇಂತಹ ಸಂಘಟನೆಗಳು ಪತ್ರಕರ್ತರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ವೃತ್ತಿಪರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಎಂದರು
ಸಂಸ್ಥಾಪಕ ಅಧ್ಯಕ್ಷರಾದ ಡಾ. ಭಾಸ್ಕರ್ ಮಾತನಾಡಿ. ಸರ್ಕಾರ ಯೂಟ್ಯೂಬ್ ಪತ್ರಕರ್ತರಿಗೆ ಸವಲತ್ತು ರಕ್ಷಣೆ ಒಳ್ಳೆ ವೇದಿಕೆ ಕಲ್ಪಿಸಿಕೊಡಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ. ಕಾಂಗ್ರೆಸ್ ಸೇನಾದಳ ಅಧ್ಯಕ್ಷರಾದ ಉಮೇಶ್ ಬಿಜೆಪಿ ಮುಖಂಡರಾದ ಬಸವರಾಜ್ ತಾಲೂಕು ಸಂಚಾಲಕ ಹರಚನಹಳ್ಳಿ ಮಂಜುನಾಥ್. ಮಹಿಳಾ ಘಟಕ ಅಧ್ಯಕ್ಷ ನಂದಿನಿ ಕಾರ್ಮಿಕ ಘಟಕ ಅಧ್ಯಕ್ಷ ಚಂದ್ರಶೇಖರ್. ಅಧ್ಯಕ್ಷರಾದ ಗುರುಗದಹಳ್ಳಿ ಮಂಜು. ಉಪಾಧ್ಯಕ್ಷರಾದ ಮಂಜುನಾಥ್ ಡಿ. ಪ್ರಧಾನ ಕಾರ್ಯದರ್ಶಿ ರಘು ತಿಪಟೂರು. ಪತ್ರಕರ್ತರಾದ ಶುಭ ವಿಶ್ವಕರ್ಮ. ಸುನಿಲ್. ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.
ವರದಿ ಮಂಜು ಗುರುಗದಹಳ್ಳಿ