Breaking News

ತುಂಗಭದ್ರಾ ಜಲಾಷಯದ 33 ಕ್ರಸ್ಟ್ ಗೇಟ್ ಪೈಕಿ ಸದ್ಯ ಆರು ಗೇಟ್ ಗಳು ಚಾಲನೆಯಾಗುತ್ತಿಲ್ಕ. ಇದರಿಂದ ಯಾವುದೇ ತೊಂದರೆ ಇಲ್ಲ

Out of the 33 crest gates of the Tungabhadra reservoir, six gates are currently operational. This does not cause any problem.
Screenshot 2025 08 15 19 07 43 99 6012fa4d4ddec268fc5c7112cbb265e78586658535663987899 1024x732

ವಿಜಯನಗರ,ಆ.೧೫: ತುಂಗಭದ್ರಾ ಜಲಾಷಯದ ಏಳು ಕ್ರಸ್ಟ್ ಗೇಟ್‌ಗಳು ಬೆಂಡ್ ಆಗಿರುವುದರಿಂದ ಮೇಲೆ ಕೆಳಕ್ಕೆ ಚಾಲೆನೆ ಇಲ್ಲದೇ ಸ್ಥಬ್ಧಗೊಂಡಿವೆ. ಸುಮಾರು ಐದು ದಶಕಗಳಿಗಿಂತ ಹಳೆಯದಾದ ಮೂವತ್ಮೂರು ಗೇಟ್‌ಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು ಎಂಬ ತಂತ್ರಜ್ಞರ ಶಿಫಾರಸ್ಸುಗಳನ್ನು ಕಡೆಗಣಿಸಿದ ಕಾರಣಕ್ಕೆ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಜಲಾಷಯದ ಅಧಿಕಾರಿಗಳಿಗೆ ತೀವ್ರ ಆತಂಕ ಎದುರಾಗಿದೆ.

ಜಾಹೀರಾತು

ಕಳೆದ ಹಲವಾರು ಬಾರಿ ತುಂಗಭದ್ರಾ ಜಲಾಶಯದಲ್ಲಿ ಗಂಭೀರ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವುದು ಈಗ ಆತಂಕಕ್ಕೆ ಕಾರಣವಾಗಿದೆ. ಜಲಾಶಯದ ಒಟ್ಟು ೩೩ ಕ್ರಸ್ಟ್ ಗೇಟ್‌ಗಳಲ್ಲಿ ಕನಿಷ್ಠ ೭ ಗೇಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಗೇಟ್‌ಗಳು ಬೆಂಡ್ ಆಗಿರುವ ಕಾರಣ ಅವುಗಳನ್ನು ಮೇಲಕ್ಕೆ ಎತ್ತುವುದು ಹಾಗೂ ಇಳಿಸುವುದು ಕಷ್ಟಕರವಾಗಿದ್ದು, ಜಲಾಶಯದ ಸುರಕ್ಷತೆಗೆ ಇದು ದೊಡ್ಡ ಸವಾಲಾಗಿದೆ.

11, 18, 20, 24, 27, 28ನೇ ಗೇಟ್‌ಗಳನ್ನು ಯಾವುದೇ ರೀತಿಯಿಂದಲೂ ಮೇಲಕ್ಕೆ ಎತ್ತಲು ಆಗುತ್ತಿಲ್ಲ. ಅದರ ಜೊತೆಗೆ ೪ನೇ ಗೇಟ್ ಕೇವಲ 2 ಫೀಟ್‌ವರೆಗೆ ಮಾತ್ರ ಎತ್ತಲು ಸಾಧ್ಯವಾಗುತ್ತದೆ, ಆ ಮಟ್ಟಕ್ಕಿಂತ ಹೆಚ್ಚು ಎತ್ತಿದರೆ ತಾಂತ್ರಿಕ ತೊಂದರೆ ಉಂಟಾಗುತ್ತಿದೆ. ಡ್ಯಾಂ ಸೇಫ್ಟಿ ರೀವ್ಯೂ ಕಮಿಟಿ ಇತ್ತೀಚೆಗೆ ಸಲ್ಲಿಸಿದ ವರದಿಯಲ್ಲಿ ಈ ಸಮಸ್ಯೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಜಲಾಶಯಕ್ಕೆ ೧ ಲಕ್ಷ ೫೦ ಸಾವಿರ ಕ್ಯೂಸೆಕ್ಸ್‌ಗಿಂತ ಹೆಚ್ಚು ಒಳಹರಿವು ಬಂದಲ್ಲಿ ತುರ್ತು ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಗೇಟ್‌ಗಳನ್ನು ಕೂಡಲೇ ಮೇಲಕ್ಕೆ ಎತ್ತಿ ನೀರು ಬಿಡುಗಡೆ ಮಾಡುವುದು ಅಗತ್ಯ, ಆದರೆ ಪ್ರಸ್ತುತ ಸ್ಥಿತಿಯಲ್ಲಿ ೪ನೇ ಗೇಟ್ ಸೇರಿ ಒಟ್ಟು 7 ಗೇಟ್‌ಗಳನ್ನು ಪೂರ್ಣವಾಗಿ ಎತ್ತುವುದು ಸಾಧ್ಯವಾಗುತ್ತಿಲ್ಲ. ಜಲಾಶಯಗಳ ತಜ್ಞ ಕನ್ನಯ್ಯ ನಾಯ್ಡು ಅವರು ಇದಕ್ಕೆ ಮುಂಚೆಯೇ ಎಚ್ಚರಿಕೆ ನೀಡಿದ್ದರೂ, ತುಂಗಭದ್ರಾ ಬೋರ್ಡ್ ಹಾಗೂ ರಾಜ್ಯ ಸರ್ಕಾರವು ಆ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ತುರ್ತು ನಿರ್ವಹಣೆ ಹಾಗೂ ಗೇಟ್‌ಗಳ ದುರಸ್ತಿಗಾಗಿ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿರುವುದು ಇದೀಗ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದೇ ರೀತಿಯಲ್ಲಿ ಮಳೆಯ ಹಂಗಾಮಿನಲ್ಲಿ ನೀರಿನ ಮಟ್ಟ ವೇಗವಾಗಿ ಏರಿದರೆ, ಗೇಟ್‌ಗಳನ್ನು ತೆರೆಯಲು ಆಗದಿರುವುದು ಜಲಾಶಯದ ಮೇಲ್ಮಟ್ಟಕ್ಕೆ ಒತ್ತಡವನ್ನು ಉಂಟುಮಾಡಿ, ಸುತ್ತಮುತ್ತಲಿನ ಪ್ರದೇಶಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆಗಳಿವೆ. ತಜ್ಞರು ಇದನ್ನು ಡ್ಯಾಂ ಸುರಕ್ಷತೆಗಾಗಿ ಕೆಂಪು ಎಚ್ಚರಿಕೆ (red alert) ಎಂದು ಪರಿಗಣಿಸುತ್ತಿದ್ದಾರೆ.

ಸ್ಥಳೀಯ ಜನತೆ ಮತ್ತು ರೈತ ಸಮುದಾಯ ಈಗ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ತಕ್ಷಣ ಗೇಟ್‌ಗಳ ದುರಸ್ತಿ ಹಾಗೂ ಯಂತ್ರೋಪಕರಣಗಳ ನವೀಕರಣಕ್ಕಾಗಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಇಲ್ಲದಿದ್ದರೆ ಮುಂಬರುವ ಮಳೆಯ ದಿನಗಳಲ್ಲಿ ತುಂಗಭದ್ರಾ ಜಲಾಶಯವು ಇನ್ನಷ್ಟು ದೊಡ್ಡ ಆಪತ್ತಿನ ಕೇಂದ್ರವಾಗಬಹುದು ಎಂಬ ಭೀತಿ ಹೆಚ್ಚುತ್ತಿದೆ.

ಕೆಲವು ಗೇಟ್ ಗಳು ಚಾಲನೆ ಇಲ್ಲ

ಆದರೂ ಯಾವುದೇ ತೊಂದರೆ ಇಲ್ಲ

ಜಲಾಷಯದ 33 ಕ್ರಸ್ಟ್ ಗೇಟ್ ಪೈಕಿ ಸದ್ಯ ಆರು ಗೇಟ್ ಗಳು ಚಾಲನೆಯಾಗುತ್ತಿಲ್ಕ. ಇದರಿಂದ ಯಾವುದೇ ತೊಂದರೆ ಇಲ್ಕ. 80 ಟಿಎಂಸ್ಇ ನೀರು ಸಂಗ್ರಹಿಸಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೆ ಹೊರಕ್ಕೆ ಹರಿಬಿಡಲಾಗುವುದು. ಚಾಲನೆ ಇಲ್ಲದ ಗೆಟ್ ಗಳು ಯತಾಸ್ಥಿತಿಯಲ್ಲಿವೆ

ರಾಘು, ಜಲಾಶಯದ ನಿವೃತ್ತ ಇಂಜೀನೀಯರ್

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.