Breaking News

ಹನೂರು ಪಟ್ಟಣದಲ್ಲಿ ತಾಲ್ಲೂಕು ರಾ ಹ ಆಚರಣೆ ಸಮಿತಿಯಿಂದ ಅದ್ದೂರಿಯಾಗಿ ನಡೆದ ಸ್ವಾತಂತ್ರ್ಯೊವದ ದಿನಾಚರಣೆ

Independence Day celebrations were held in a grand manner by the Taluk Raha Rithala Samiti in Hanur town.


Screenshot 2025 08 15 18 13 31 53 6012fa4d4ddec268fc5c7112cbb265e72198625644262386826 1024x543

ವರದಿ : ಬಂಗಾರಪ್ಪ .ಸಿ.
ನಮ್ಮ ಹಿರಿಯರು ನಡೆಸಿದ ಸ್ವಾತಂತ್ರ್ಯ ಹೋರಾಟದಲ್ಲಿ ಪರಕಿಯರ ದಬ್ಬಾಳಿಕೆಯ ವಿರುದ್ದ ಸೆಣಿಸಿ ನಮ್ಮೇಲ್ಲ ಇಂದು ಸುಖಕರವಾಗಿ ಜೀವಿಸಲು ಅನುವು ಮಾಡಿಕೊಟ್ಟ ಸ್ವಾತಂತ್ರ್ಯ ಹೊರಟಗಾರ ನಾಯಕರುಗಳಿಗೆ ನನ್ನನಮನಗಳು ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು .
ಹನೂರು ತಾಲ್ಲೂಕು ಕೇಂದ್ರದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ ಎಪ್ಪತ್ತೋಂಬತ್ತನೆ ಸ್ವಾತಂತ್ರ್ಯೊತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರುವ ಇಂದಿನ ಯುವ ಜನತೆಯು ದೇಶದ ಸಂಪತ್ತು , ಬಿ ಆರ್ ಅಂಬೇಡ್ಕರ್ ರವರ ಆಶಯದಂತೆ ಶಿಕ್ಷಣವು ಯುವಜನರ ಆಸ್ತಿಯಾಗಿದೆ , ಪ್ರಪಂಚದಲ್ಲಿ ಮಾಹಿತಿ ತಂತ್ರಜ್ಞಾನವು ಬಹು ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ನಮ್ಮ ಭಾರತವು ಮುಂದಿದೆ . ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿನ ಸರ್ವಾಂಗೀಣ ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ ಅಭಿವೃದ್ಧಿ ಮಾಡಲು ಪಣತೊಡೋಣ, ಮುಖ್ಯವಾಗಿ ನೀರು, ರಸ್ತೆ, ವಿದ್ಯುತ್, ಪೂರೈಕೆ ನನ್ನ ಮೊದಲ ಧ್ಯೇಯೆಯಾಗಿದೆ , ಹನೂರು ಮ ಬೆಟ್ಟ , ಬಂಡಳ್ಳಿ , ಮಾರ್ಟಳ್ಳಿ , ಚಿಕ್ಕಲ್ಲೂರು ಸೇರಿದಂತೆ ವಿವಿಧ ಊರುಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ವೇಗ ನೀಡಿ ಅಂದಾಜು ಇನ್ನೂರ ಇಪ್ಪತ್ತು ಕೋಟಿ ಹಣ ಬಿಡುಗಡೆ ಮಾಡಲಾಗಿದೆ ,ಕ್ಷೇತ್ರದ ಹೆಚ್ಚಿನ ಜವಬ್ದಾರಿ ನನ್ನ ಮೇಲೆ ಇದೇ ಮಳೆಯ ಪ್ರಮಾಣ ಕಡಿಮೆಯಾದ. ಸನ್ನಿವೇಶದಲ್ಲಿ ಎಂಟರಿಂದ ಹತ್ತು ಟಿ ಮ್ ಸಿ ನೀರು ಹರಿದು ನದಿ ಸೇರುತ್ತಿತ್ತು ಇದನ್ನು ತಡೆಯಲು ಕಾಮಗಾರಿ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ ,ಕಾಮಗಾರಿಗೆ ಹತ್ತೊಂಬತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಅನುದಾನ ತರಲಾಗುವುದು , ಕಬಿನಿ ನೀರನ್ನು ನಮ್ಮ ಭಾಗದಲ್ಲಿ ಹರಿದು ಹೋಗುತ್ತಿದ್ದು ಅದನ್ನು ನಮ್ಮ ಭಾಗಕ್ಕೆ ಹರಿದು ಬರುವಂತೆ ಮಾಡತ್ತೇವೆ , ಮುಂದಿನ ದಿನಗಳಲ್ಲಿ ವಿದ್ಯುತ್ ಇಲಾಖೆಯಲ್ಲಿನ ಪವರ್ ಸ್ಟೇಷನ್ ಮಾಡಲು ತಿರ್ಮಾನಿಸಲಾಗಿದೆ , ಸೋಲಾರ್ ವಿದ್ಯುತ್ ಪೂರೈಕೆ ಮಾಡಲು ಹೆಚ್ಚಿನ ನಿಗವಹಿಸಿ ಹಗಲಿನಲ್ಲಿ ವಿದ್ಯುತ್ ಇರುವಂತೆ ಮಾಡಲು ಕುಸುಮ ಯೋಜನೆಯ ಕಾರ್ಯವನ್ನು ಜಾರಿಗೆ ಮಾಡಲಾಗುವುದು. ,ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿ ಬರುವಂತೆ ಮಾಡಲು ಕರೆನೀಡಿದರು. ಅಂಕದ ಜೊತೆಯಲ್ಲಿ ಎಲ್ಲಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು , ಗೋಪೀನಾಥ, ಪಿಜಿ ಪಾಳ್ಯ, ಸೇರಿದಂತೆ ಅನೇಕ ಸ್ಥಳಗಳಲ್ಲಿ ಪಿ ಹೆಚ್ ಸಿ ಕೇಂದ್ರಗಳನ್ನು ತೆರಯಲಾಗಿದೆ ,ಹಾಗೆಯೆ ಪಟ್ಟಣದ ಮಹದೇಶ್ವರ ಕ್ರೀಡಾಂಗಣವನ್ನು ಸರ್ಕಾರದಿಂದ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಹನೂರು ಕ್ಷೇತ್ರವು ಮತ್ತಷ್ಟು ಪ್ರಗತಿ ಸಾಧಿಸಲು ಪ್ರಯತ್ನಿಸೋಣ ಎಂದರು.‌
ಕಾರ್ಯಕ್ರಮದಲ್ಲಿ
ಅತಿ ಹೆಚ್ಚು ಅಂಕ ಪಡೆದ ಎಲ್ಲೆಮಾಳ ಶಾಲೆಯ ವಿದ್ಯಾರ್ಥಿ ಅಂಜಲಿ , ಮಾರಳ್ಳಿ , ವಿ . ಸುಸೈನ ಅಬ್ಜಾ ,ಚನ್ನಲಿಂಗನಹಳ್ಳಿ ಸರ್ಕಾರಿ ಪ್ರೃ ಡಶಾಲೆ ಪ್ರಿಯ ದರ್ಸಿನಿ ಎಂ, ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು .
ಪೌರಕಾರ್ಮಿಕರಾದ ರಾಮಿಯವರಿಗೆ ಸನ್ಮಾನಿಸಲಾಯಿತು.
ಪೆರಿಯ ನಾಯಗಮ್ ಅಗ್ನಿಶಾಮಕ ಸೇವೆಯನ್ನು ಪರಿಗಣಿಸಿ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ವಿಕಲಚೆತನ ವಿದ್ಯಾರ್ಥಿಗಳಿಗೆ
ಸರ್ಕಾರದಿಂದ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉಚಿತವಾಗಿ
ವೀಲ್ ಚೇರ್ ವಿತರಣೆಯನ್ನು ಹದಿಮೂರು ಮಕ್ಕಳಿಗೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಹನೂರು ತಾಲ್ಲೂಕು
ತಹಶಿಲ್ದಾರರ ಶ್ರೀ ಮತಿ ಚೈತ್ರ ಕೆ ಎನ್ ರವರು ನಮ್ಮ ದೇಶವು ವಿವಿಧತೆಯಲ್ಲಿ ಏಕತೆಯನ್ನು ಕಂಡಿದೆ ನಮ್ಮ ದೇಶದ ಉನ್ನತಿಗೆ ಶ್ರಮಿಸಿದವರನ್ನು ಸ್ಮರಿಸಬೇಕು ಹಿರಿಯರ ಕೊಡುಗೆ ಬಹಳಷ್ಟಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷರಾದ ರಾಚಪ್ಪ ಪಾಳ್ಯ , ಗುರುಲಿಂಗಯ್ಯ ಎನ್ , ಶ್ರೀ ಆನಂದಮೂರ್ತಿ ಆರಕ್ಷಕ ನಿರೀಕ್ಷಕರು ಹನೂರು ಪೋಲಿಸ್ ಠಾಣೆ , ಉಮೇಶ್ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಉಪಾಧ್ಯಕ್ಷರು ರಾಹ ಆ ಸ ಹನೂರು ‌ ಕ್ಷೇತ್ರ ಶಿಕ್ಷಣ ಅಧಿಕಾರಿ ಹಾಗೊ ಕಾರ್ಯದರ್ಶಿಗಳು ರಾ ಹ ಆಚರಣ ಸಮಿತಿ ,ಪ ಪ ಅಧ್ಯಕ್ಷೆಯಾದ ಮುತ್ತಾಜ್ ಬಾನು, ಪ ಪ. ಉಪಾಧ್ಯಕ್ಷರಾದ ಆನಂದ್ ಕುಮಾರ್ ,ಆರ್ , ಸದಸ್ಯರುಗಳಾದ ಸಂಪತ್ ಕುಮಾರ್ , ಮಾದೇಶ್ ,ಮಹೆ ಕುಮಾರ್ , ರೂಪ , ಎನ್ ಎಸ್ ಪವಿತ್ರ ಪ್ರಸನ್ನಕುಮಾರ್ ,ಮಹೆಶ್ ನಾಯ್ಕ ,ಲತಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು ‌.

ಜಾಹೀರಾತು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.