Guru B. Nagesh conferred with Nadaprabhu Kempegowda Award

ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರ ಡಾ. ಸಿ. ಅಶ್ವಥ್ ಕಲಾ ಭವನದಲ್ಲಿ ನಡೆದ ಬಿಬಿಎಂಪಿ ವತಿಯಿಂದ 516ನೇ ಕೆಂಪೇಗೌಡ ದಿನಾಚರಣೆ ಸಮಾರಂಭದಲ್ಲಿ “ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್” ಸಂಸ್ಥೆಯ ಗುರು ಬಿ. ನಾಗೇಶ್ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈಸಮಾರಂಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಬಸವನಗುಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಲ್. ಎ. ರವಿಸುಬ್ರಮಣ್ಯ, ಎಐಸಿಸಿ ಕಾರ್ಯದರ್ಶಿಗಳು, ಎಂ.ಎಲ್.ಸಿ. ಯು ಬಿ ವೆಂಕಟೇಶ್ ರವರು ಬಿಬಿಎಂಪಿ ಸದಸ್ಯರುಗಳು , ಮಂಡಲದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ರವರು ಭಾಗವಹಿಸಿದ್ದರು.
ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್” ಸಂಸ್ಥೆಯ ಗುರು ಬಿ. ನಾಗೇಶ್ ಅವರು ಸುಮಾರು 18 ವರ್ಷಗಳಿಂದ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸುಮಾರು 600 ಕ್ಕೂ ಹೆಚ್ಚು ಭರತನಾಟ್ಯ ನೃತ್ಯಗಳನ್ನು ಪ್ರದರ್ಶಿಸಿ ಗುರು ಗೌರವ, ಗುರು ರತ್ನ, ನಾಟ್ಯ ಕುಸುಮ, ನಾಟ್ಯ ರತ್ನ, ನಾಟ್ಯ ಚೇತನ ಮುಂತಾದ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ.