Breaking News

79 ರ ಸ್ವಾತಂತ್ರ್ಯೋತ್ಸವ.

Independence Day of 79.

screenshot 2025 08 14 20 50 37 52 e307a3f9df9f380ebaf106e1dc980bb6

ಲೇಖನ – 79 ರ ಸ್ವಾತಂತ್ರ್ಯೋತ್ಸವ.

ಜಾಹೀರಾತು

ಲೇಖಕರು – ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.

ನಮಗೆ ಸ್ವಾತಂತ್ರ್ಯ ದೊರೆತು ಇದೀಗ 79 ವರ್ಷಗಳು ತುಂಬುತ್ತೀವೆ. 79 ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ ಇಡೀ ದೇಶ. ಎಲ್ಲೆಡೆ ದೇಶ ಭಕ್ತಿ, ದೇಶಪ್ರೇಮ ವ್ಯಕ್ತವಾಗುತ್ತಿದೆ. ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ ಅಭೂತಪೂರ್ವ ದಿನ ಇದಾಗಿದೆ.ಹೀಗಾಗಿ

ಭಾರತದ ದೇಶ 79ರ ಸ್ವಾತಂತ್ರ್ಯ ದಿನಾಚರಣೆಯನ್ನು  ಆಚರಣೆ ಮಾಡಲು ದೇಶವಾಸಿಗಳು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಕುರಿತು ಕೆಲ ವಿಚಾರಗಳು ತಮ್ಮ ಮುಂದೆ ಹಂಚಿಕೊಳ್ಳುವ ಪ್ರಯತ್ನ ಈ ಮುಖಾಂತರ ಮಾಡುತ್ತಿದ್ದೇವೆ.

ಬ್ರಿಟೀಷರ ಆಡಳಿತದ ಕಪಿಮುಷ್ಟಿಯಿಂದ ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು ಎನ್ನುವುದು ತಮ್ಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಅದಕ್ಕಾಗಿ ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಅತ್ಯಂತ ಗೌರವ ಪೂರ್ವಕ ಭಕ್ತಿಯಿಂದ ನಾವೆಲ್ಲರೂ ಸಡಗರ,ಸಂಭ್ರಮ, ಸಂತೋಷದಿಂದ ಆಚರಣೆ ಮಾಡುತ್ತೇವೆ. ಹಾಗೂ ಈ 

ದಿನ ಇಡೀ ದೇಶದಲ್ಲೆಡೆ ರಾಷ್ಟ್ರೀಯ ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ. ದೇಶದ ನಾನಾ ಭಾಗದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ, ಸಿಹಿ ಹಂಚಿ,  ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತು, ಬಲಿದಾನ ಮಾಡಿದ ಪ್ರತಿಯೊಬ್ಬ ದೇಶಭಕ್ತರನ್ನು ನೆನಪಿಸಿಕೊಳ್ಳುತ್ತಾ,

ಅವರ ತ್ಯಾಗವನ್ನು ಸ್ಮರಣೆ ಮಾಡಿಕೊಳ್ಳುವ ಮೂಲಕ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುವಂತೆ ಸರ್ವರಿಗೂ ಈ ಸಂದರ್ಭದಲ್ಲಿ ಕರೆ ನೀಡಲಾಗುತ್ತದೆ. 

ಅಂದಹಾಗೆ ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೈಗೊಂಡ ಪ್ರಗತಿ ಯೋಜನೆಗಳನ್ನು ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಕೆಲಸಗಳ ಬಗೆ ವಿವರಿಸಿ, ಹೊಸ ಯೋಜನೆಗಳನ್ನು ಪ್ರಕಟಿಸುವುದು ವಾಡಿಕೆಯಾಗಿದೆ. ಇನ್ನು ದೇಶಾದ್ಯಂತ

ಸರಕಾರಿ ಕಚೇರಿಗಳು ವಿದ್ಯುದ್ದೀಪಗಳಿಂದ ಬೆಳಗುತ್ತವೆ. ಎಲ್ಲಾ ಆಯಾ ರಾಜ್ಯಗಳ ರಾಜ್ಯ ರಾಜಧಾನಿಗಳಲ್ಲಿ ಮುಖ್ಯಮಂತ್ರಿಗಳೂ ಧ್ವಜಾರೋಹಣ ಮಾಡುತ್ತಾರೆ. ಮತ್ತು ಸಾಂಸ್ಕೃತಿಕ ಸಮಾರಂಭಗಳು ಜರುಗುತ್ತವೆ. ಅಲ್ಲದೆ ದೇಶದ ವಿವಿಧ ನಗರಗಳಲ್ಲಿ ಧ್ವಜಾರೋಹಣವನ್ನು ಆಯಾ ಕ್ಷೇತ್ರಗಳ ಮಹನೀಯರ ಸಮ್ಮುಖದಲ್ಲಿ ನಡೆಯುತ್ತದೆ . ಖಾಸಗಿ ಸಂಸ್ಥೆಗಳಲ್ಲಿ ಧ್ವಜಾರೋಹಣವನ್ನು ಆಯಾ ಸಂಸ್ಥೆಯ ಮುಖ್ಯಸ್ಥರು ಅಥವಾ ಹಿರಿಯ ಅಧಿಕಾರಿಗಳು ನೆರೆವೇರಿಸುತ್ತಾರೆ. ಇವುಗಳಲ್ಲದೆ ಶಾಲೆ ಕಾಲೇಜುಗಳು ಅವರ ಆವರಣದಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.ಇದೆ ಸಮಯದಲ್ಲಿ ಉಪನ್ಯಾಸಕರಿಂದ ದೇಶ ಭಕ್ತಿ,

ಸ್ವಾತಂತ್ರ್ಯ ಹೋರಾಟದ ಕುರಿತು ಭಾಷಣವನ್ನು ಮಾಡುತ್ತಾರೆ.ಹಾಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸದ ಮಕ್ಕಳಿಗೆ ಬಹುಮಾನ ವಿತರಣೆ ಸಹ ನಡೆಯುತ್ತದೆ.

ಹೀಗೆ ನಾವೆಲ್ಲರೂ ಸ್ವಾತಂತ್ರ್ಯ ಬಂದಾಗಿನಿಂದಲೂ ಅಂದರೆ

ಇಂದಿನವರೆಗೂ ಸ್ವಾತಂತ್ರ್ಯ 

ದಿನಾಚರಣೆ ಮಾಡಿಕೊಂಡು ಬಂದಿದ್ದೇವೆ/ಬರುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ದೇಶಕ್ಕಾಗಿ ಇನ್ನು ಮಾಡಬೇಕಾಗಿರುವ ಅಭಿವೃದ್ಧಿ ಕೆಲಸಗಳ ಕುರಿತು ಚಿಂತಿಸುವುದು ಅಗತ್ಯವಿದೆ.

ಸ್ವಾತಂತ್ರ್ಯ ನಂತರ ಭಾರತ:- 

78 ವರ್ಷಗಳ ಹಿಂದೆ ಆಗಸ್ಟ್ 15 ರಂದು ಪರಕೀಯರ ಆಡಳಿತದ ಅಂಧಕಾರದಿಂದ ಮುಕ್ತಿ ದೊರೆಯುವ ಮೂಲಕ, ಹೊಸ ಬೆಳಕಿಗೆ ಭಾರತ ತನ್ನನ್ನು ತಾ ತೆರೆದುಕೊಂಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಬ್ರಿಟಿಷ್ ಆಡಳಿತದ ಕಾಲದ ವಸಾಹತುಷಾಹಿ ಪ್ರಭುತ್ವಕ್ಕೆ ಇತಿಶ್ರೀ ಹಾಡಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳುತ್ತ ಸಾಗಿದ್ದೇವೆ. 

 ‘ಎಸೂರು ಕೊಟ್ಟರೂ ಈಸೂರು ಬಿಡೆವು’ ಎಂದು ಬ್ರಿಟಿಷರಿಗೆ ಸವಾಲು ಹಾಕಿ ಪ್ರಾಣತ್ಯಾಗ ಮಾಡಿದ ಈಸೂರಿನ ಸತ್ಯಾಗ್ರಹಿಗಳು ಸೇರಿದಂತೆ ಅಪಾರ ಪ್ರಮಾಣದ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿದೆ. ಹಾಗೆಯೇ ಭಾರತೀಯರ ಉಜ್ವಲ ಭವಿಷ್ಯಕ್ಕಾಗಿ ಅಂದು ಹೆಜ್ಜೆ ಹಾಕಿದ ಸಾವಿರ ಸಾವಿರ ಧೀರ ದೇಶ ಪ್ರೇಮಿಗಳಿಗೆ, ನಾವು ಈ ದಿನ ತಲೆಬಗ್ಗಿಸಿ ಗೌರವ ಸಲ್ಲಿಸಬೇಕು.ಅಂದಾಗಲೇ ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಲು ಸಾಧ್ಯ. 

ಅದಕ್ಕಾಗಿಯೇ 

ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವ ರಾಷ್ಟ್ರವಾಗಿ ಭಾರತ ದೇಶ ಹೊರಹೊಮ್ಮಿದೆ. 

ಇಲ್ಲಿಯವರೆಗೆ ದೇಶ ಹಾಗೂ ರಾಜ್ಯಗಳನ್ನು ಆಳಿದ ಎಲ್ಲಾ ಸರ್ಕಾರಗಳು ಈ ಸಾಧನೆಗೆ ಕೊಡುಗೆ ನೀಡಿರುವುದನ್ನು  ಸ್ಮರಣೆ ಮಾಡುತ್ತಾ, ನೆನಪು ಮಾಡಿಕೊಂಡು ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.ಅದೇ ರೀತಿ ಈ ದೇಶದಲ್ಲಿ ಇರುವ ಪ್ರಜೆಗಳು ಪರಸ್ಪರ ಪ್ರೀತಿ, ಸಹಕಾರ ಮತ್ತು ಸೌಹಾರ್ದತೆಯ ಮೂಲಕ ಅಭಿವೃದ್ಧಿ ಪಥದತ್ತ ಸಾಗಬೇಕಾಗಿದೆ ಮತ್ತು ಕೊಂಡೊಯ್ಯಬೇಕಾಗಿದೆ. ದ್ವೇಷಾಸೂಯೆಗಳಿಗೆ ಕಿವಿಗೊಡದೇ ಮುಂದಡೆ ಸಾಗಿ, ಸಮೃದ್ಧ ಮತ್ತು ಸುಭದ್ರ ಭಾರತ ನಿರ್ಮಾಣಕ್ಕಾಗಿ ದುಡಿಯಬೇಕಾಗಿದೆ.ಅದಕ್ಕಾಗಿ ನಾವು ವಿಶಾಲ ದೃಷ್ಟಿಕೋನ 

ಬೆಳೆಸಿಕೊಂಡು ಸಾಗುವುದು ನಮಗೆಲ್ಲ ಅನಿವಾರ್ಯತೆ ಇದೆ. ವೈಜ್ಞಾನಿಕವಾಗಿ ಯೋಚನೆ ಮಾಡುವುದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಾಗಿದೆ. ಆದರೆ ಸ್ವಾತಂತ್ರ್ಯ ನಂತರ ಭಾರತ 

ದೇಶದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಕೆಲವು ಅಮಾನವೀಯ ಘಟನೆಗಳು  ಒಳ್ಳೆಯ ವಿಚಾರಗಳಿಗೆ ಆಸ್ಪದ ನೀಡದೇ,

ಕೊಡಲಿ ಪೆಟ್ಟು ಹಾಕುವ ಕೆಟ್ಟ ಚಾಳಿ ಜರುಗುತ್ತಿರುವುದು ಇಂದಿನ ನಾಗರಿಕ ಸಮಾಜ ತಲೆತಗ್ಗಿಸುವಂತಹ ಆಗಿದೆ

.ಬಡವರು ಮತ್ತು ಮಹಿಳೆಯರು ಸಮಾಜದಲ್ಲಿ ಸಮಾನತೆಯಿಂದ ಹಾಗೂ ಸುರಕ್ಷಿತವಾಗಿ ಬಾಳುವ ಸ್ಥಿತಿಯಲ್ಲಿ ಇಲ್ಲವೇ ಇಲ್ಲ ಎನ್ನುವ  

ಸ್ಥಿತಿ ಸಧ್ಯ

ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು. ದಿನನಿತ್ಯ ಇವರುಗಳ ಮೇಲೆ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ನಮ್ಮ ದೇಶ ಹಾಗೂ ಸಮಾಜಕ್ಕೆ ಅಂಟಿದ ಕಳಂಕ ಮತ್ತು ದುರಂತ ಎಂದರೆ ಅಶೋಕ್ಕ್ತಿಯಲ್ಲ. ಇಂತಹ ಅಮಾನವೀಯ ನಡವಳಿಕೆಗಳ ವಿರುದ್ಧದ ಹೋರಾಟ ಮಾಡಬೇಕಾಗಿದೆ. ಅಂದರೆ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿಯೇ ಈ  ಹೋರಾಟವೂ ನಡೆಸಬೇಕಾಗಿದ್ದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ ಮತ್ತು ಮಹತ್ವವನ್ನು ಪಡೆದುಕೊಂಡಿದೆ. ಜೊತೆಗೆ ಬಡತನ, ಅನಕ್ಷರತೆ, ಮೂಢ ನಂಬಿಕೆ, ಕಂಧಾಚಾರ, ಬೃಷ್ಟಾಚಾರಿಗಳ ವಿರುದ್ಧವು ಸಹ ಹೋರಾಟ ಮಾಡುವುದು ಸಧ್ಯ ಅಗತ್ಯವಾಗಿದೆ. ಕಾರಣ ಇವುಗಳೆಲ್ಲ ಮೆಟ್ಟಿ ನಿಲ್ಲಲು ಅಂದರೆ ಸತ್ಯದ ಪರವಾಗಿ ನಿರಂತರವಾಗಿ ಹೋರಾಟ ಮಾಡಲು ಸರಕಾರ ಸೇರಿದಂತೆ ವಿವಿಧ ಸೇವಾ ಸಂಸ್ಥೆಗಳು ಮುಂದಾಗಬೇಕಾಗಿದೆ.

ಅದೇ ರೀತಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ

ನಿಟ್ಟಿನಲ್ಲಿ ಸಂಬಂಧ ಪಟ್ಟ ಸರ್ಕಾರಗಳು ಯೋಚನೆ ಮಾಡಲಿ. ಈ ನಿಟ್ಟಿನಲ್ಲಿ 

ಜನರಿಗೆ ಕುಡಿಯುವ ನೀರು ಮತ್ತು ಉದ್ಯೋಗ, ಜಾನುವಾರುಗಳಿಗೆ ಗೋಶಾಲೆ, ಮೇವು ಮತ್ತು ಔಷಧಿ ಒದಗಿಸುವ ಪರಿಹಾರ ಕಾರ್ಯ ಸುಸೂತ್ರವಾಗಿ  ನಡೆಸಬೇಕಾಗಿದೆ. ಹಾಗೂ 

ರೈತಪರ ಸರ್ಕಾರ ಎನ್ನುವುದು ಕೇವಲ ಘೋಷಣೆಗೆ

ಸೀಮಿತವಾಗಿರದೇ ಹಾಗೂ  ಕಣ್ವರಿಸುವ ತಂತ್ರವಾಗದೆ,  ನುಡಿದಂತೆ ನಡೆಯುವ ರೀತಿಯಲ್ಲಿ ಕೆಲಸಗಳು ಸಾಗಬೇಕು. ಸರಿಯಾದ ಸಮಯಕ್ಕೆ ಜನರ ವಿಶ್ವಾಸವೂ ಉಳಿಸಿಕೊಂಡು ಕಾರ್ಯ ಚಟುವಟಿಕೆಗಳು ಮಾಡುವ ಮೂಲಕ ಜನಸಮುದಾಯದ ಆಶ್ವಾಸನೆಗಳನ್ನು ಈಡೇರಿಸಿವ ಕಾರ್ಯಗಳು ನಿರಂತರವಾಗಿ ಸಾಗಬೇಕು. ಅದೇ ರೀತಿ ವಿಶಾಲ 

ಮುಕ್ತಮನಸ್ಸಿನಿಂದ ಪ್ರಗತಿ ಪಥದ ಅಭಿವೃದ್ಧಿ ಕಡೆಗೆ

ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಯ

ಪ್ರವತೃರಾಗಿ ಹೆಜ್ಜೆ ಹಾಕಬೇಕಾಗಿದೆ. 

ಶುಭಕಾಮನೆಗಳು:-

ದೇಶ ಸಧ್ಯ 79 ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಸಜ್ಜಾಗಿದೆ. ಈ ಹೊತ್ತಿನಲ್ಲಿ ಭಾರತದ ಎಲ್ಲಾ ಸೋದರ-ಸೋದರಿಯರಿಗೆ ತುಂಬು ಹೃದಯದ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಸಲ್ಲಿಸುತ್ತೇವೆ.

*********

ಸಂಗಮೇಶ ಎನ್ ಜವಾದಿ.

ಬರಹಗಾರರು, ಪತ್ರಕರ್ತರು,

ಸಮಾಜಿಕ ಸೇವಕರು, ಪರಿಸರ ಸಂರಕ್ಷಕರು. ಬೀದರ ಜಿಲ್ಲೆ.

9663809340.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.