Breaking News

ಎಚ್ ಎನ್ ನಾಗಮೋಹನ್ ದಾಸ್ ಅವರ ಸಮೀಕ್ಷಾ ವರದಿಯಿಂದ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯ – ಕೃಷ್ಣಪ್ಪ ಇಟ್ಟಂಗಿ.

HN Nagamohan Das's survey report is an injustice to the Scheduled Caste right-handed community - Krishnappa Ittangi.




ಕೊಪ್ಪಳ , ಆ-14:ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗವೂ ಆಗಸ್ಟ್ 4 ರಂದು ರಾಜ್ಯ ಸರಕಾರಕ್ಕೆ ನೀಡಿದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆ ವರದಿಯಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದ್ದು, ಈ ವರದಿಯಿಂದ ಬಲಗೈ ಸಮುದಾಯಕ್ಕೆ ತುಂಬಾ ಅನ್ಯಾಯವಾಗಿರುತ್ತದೆ. ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರಯ ಮತ್ತು ಪರೈಯನ್ ಜಾತಿಗಳನ್ನು ಬಲಗೈಗೆ ಸೇರಿಸದೇ ಬಲಗೈ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಲು ಜಾತಿಯೇ ಅಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಮತ್ತು ಆದಿ ಆಂಧ್ರ ಸಮೂಹಕ್ಕೆ ಶೇ 1 ರಷ್ಟು ಮೀಸಲಾತಿ ನೀಡಿರುವುದನ್ನು ರದ್ದುಪಡಿಸಬೇಕು. ಮೀಸಲಾತಿ ಸಮೀಕ್ಷೆಯ ವರದಿ ಹಂಚಿಕೆ ಮಾಡಲು ಸಚಿವ ಸಂಪುಟದ ಉಪಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳುಬೇಕು ಎಂದು ಕೃಷ್ಣ ಇಟ್ಟಂಗಿ (ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಸದಸ್ಯರು)ಆಗ್ರಹಿಸಿದರು.

ಜಾಹೀರಾತು

1909 ರ ಏಳು ವಾಲ್ಯೂಮ್ ಗಳಲ್ಲಿ ಪ್ರಕಟಣೆ ನೀಡಿದ್ದ , ಎಡ್ಗರ್ ಥರ್ಸ್ಟನ್ ಮತ್ತು ಕೆ.ರಂಗಾಚಾರಿ ಅವರ ” caste and Tribes of Southern India” ಸಂಶೋಧನೆಯ ಪುಸ್ತಕದಲ್ಲಿ ಮತ್ತು ಮೈಕ್ರೋಸಾಫ್ಟ್ ಕಂಪನಿಯು ಡಿಜಿಟಲೈಶೇಷನ್ ಮಾಡಿ University of Los Angeless ನಲ್ಲಿ ಪ್ರಕಟಿಸಿತ್ತು. ಸದರಿ ಪುಸ್ತಕವು ಅಮೆಜಾನ್ ನಲ್ಲಿ ಲಭ್ಯವಿದ್ದು, ಸದರಿ ಪುಸ್ತಕದಲ್ಲಿ ದಕ್ಷಿಣ ಭಾರತದಲ್ಲಿರುವ ಎಲ್ಲಾ ಜಾತಿಗಳ, ಉಪಜಾತಿಗಳ ಮತ್ತು ಸಮಾಂತರ ಜಾತಿಗಳ ಬಗ್ಗೆ ಜನಾಂಗ ಶಾಸ್ತ್ರದ ಗುಣಲಕ್ಷಣಗಳನ್ನು ವಿವರಿಸಲಾಗಿರುತ್ತದೆ. ಈ ಸಂಶೋಧನೆಯ ವರದಿಯನ್ನು ಆಧಾರಿಸಿ ಸಮೀಕ್ಷೆ ಕಾರ್ಯ ಆರಂಭಿಸಬೇಕಿತ್ತು ಆದರೆ ಆತುರಾತುರದಲ್ಲಿ ವರದಿ ನೀಡಿ ಗೊಂದಲ ಸೃಷ್ಟಿ ಮಾಡಲಾಗಿದೆ.

ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಅಂದರೆ 1.ಉತ್ತರ ಕನ್ನಡದಲ್ಲಿ ಹಲ್ಲೇರೈ, ಹಲ್ಸರ್, ಹಲಸರ, ಹುಲಸವರ್, ಹಸ್ಲಾ ಮತ್ತು ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಮುಕ್ರಿ,ಮಾಸ್ತಿ ಎಂದು,
2.ದಕ್ಷಿಣ ಕನ್ನಡದಲ್ಲಿ ಕೋಟೆಗಾರ್ ಎಂದು,
3.ಕೊಡಗು ಜಿಲ್ಲೆಯಲ್ಲಿ “ಮುಂಡಾಲ” ಎಂದು,
4.ಪರೈಯ್ಯ, ಪರವನ್, ಬ್ಯಾಗರ/ಬೇಗಾರ್ ಎಂದು ಬಲಗೈ ನ ಚಲುವಾದಿ ಸಮುದಾಯವನ್ನು ಕರೆಯುತ್ತಾರೆ.
ನಮ್ಮ ಬಲಗೈನ ಸಮುದಾಯದ 49 ಮೂಲ ಉಪಜಾತಿಗಳು ಪರಿಶಿಷ್ಟ ಜಾತಿಯ ಛಲವಾದಿ/ಹೊಲೆಯ ಸಂಬಂಧಿತ ಜಾತಿಗಳು ಆಗಿರುವುದರಿಂದ ಅವುಗಳನ್ನು ಒಂದೇ ಗುಂಪಿಗೆ ಸೇರ್ಪಡೆಗೊಳಿಸಿ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಸಿದ್ದ ಪಡಿಸಬೇಕಿತ್ತು ಆದರೆ ಇದನ್ನು ದಾರಿ ತಪ್ಪಿಸುವ ಕೆಲಸ ಆಗಿದೆ ಎಂದು ಮುತ್ತುರಾಜ್ ತಿಳಿಸಿದರು.

ಪರಿಶಿಷ್ಟ ಜಾತಿಯ ಸಮೀಕ್ಷೆಯ ವರದಿಯಲ್ಲಿ ಹತ್ತು ಹಲವಾರು ದಾರಿ ತಪ್ಪಿಸುವ ಕೆಲಸ ನಡೆಸಲಾಗಿದೆ ಅವುಗಳಲ್ಲಿ

ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ಪ್ರಸ್ತುತ ಬಲಗೈ ಸಮುದಾಯದ ಯಾವುದೇ ಸಂಘಟನೆಯ ಮನವಿಗಳನ್ನು ಪುರಷ್ಕರಿಸದೇ ಉದ್ದೇಶಪೂರ್ವಕವಾಗಿ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡುವ ದುರುದ್ದೇಶದಿಂದ ಆಕ್ಷೇಪಣೆಗೆ ಅವಕಾಶ ಕಲ್ಪಿಸದೇ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಅಕ್ಷಮ್ಯ ಅನ್ಯಾಯ ಮತ್ತು ಕಾನೂನು ಬಾಹಿರ ಕ್ರಮವಾಗಿರುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಪ್ರಸ್ತುತ ಸಲ್ಲಿಸಿರುವ ಈ ಜಾತಿ ಸಮೀಕ್ಷೆಯ ವರದಿಯನ್ನು ಪರಿಗಣಿಸದೇ ಇನ್ನೊಮ್ಮೆ ಪರಿಶೀಲಿಸಿ ಅನ್ಯಾಯವಾಗಿರುವಂತಹ ಬಲಗೈ ಸಮುದಾಯಕ್ಕೆ ನ್ಯಾಯವನ್ನು ಒದಗಿಸಬೇಕು ಮತ್ತು ಮರು ಸಮೀಕ್ಷೆ ಮಾಡಬೇಕೆಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ಕೊಪ್ಪಳ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಯವರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಗಿರುತ್ತದೆ.

ಇದೇ ಸಂಧರ್ಭದಲ್ಲಿ ಸದಸ್ಯರಾದ ಸಿದ್ದು ಮ್ಯಾಗೇರಿ,ನಾಗರಾಜ್ ನಂದಾಪುರ ಗಂಗಾವತಿ, ಸವಿತಾ ಅಶೋಕ ಛಲವಾದಿ, ಶಾಂತಕುಮಾರ್ ಸೂಮುಪುರು, ಮುತ್ತುರಾಜ್ ಕುಷ್ಟಗಿ, ಹುಸೇನಪ್ಪ ಹಂಚಿನಾಳ,ಛತ್ರಪ್ಪ ಮುದೋಳ, ಕಾಶಪ್ಪ ಚಲವಾದಿ, ಮಾಕ೯ಂಡೆಪ್ಪ ಬೆಲ್ಲದ್, ಮಂಜುನಾಥ್ ಆರತಿ, ಮಾಕ೯ಂಡೆಯ ಸೋಮನಾಳ,ವೀರೇಶ ಈಳಿಗನೂರು ವಕೀಲರು,ಶಿವಾನಂದ ಹೊಸಮನಿ ವಕೀಲರು, ಜಗದೀಶ್ ಗಂಗಾವತಿ, ರಾಮಚಂದ್ರಪ್ಪ ಕುಷ್ಟಗಿ, ದುರ್ಗೇಶ್ ಕುಷ್ಟಗಿ, ಹುಲಿರಾಜ್ ಕಾರಟಗಿ, ರಾಘು ಬೆಲ್ಲದ್, ದೇವಪ್ಪ ಈಳಿಗನೂರು, ಶರಣಪ್ಪ ಈಳಿಗನೂರು ಹಾಗೂ ಇನ್ನೂ ಅನೇಕ ಛಲವಾದಿ ಮುಖಂಡರು ಭಾಗವಹಿಸಿದ್ದರು.

  1. .
  2. .

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.