BJP launches cleanliness drive on the occasion of 79th Independence Day: Manohar Gowda

ಗಂಗಾವತಿ : ವಿಶ್ವಕಂಡ ಧೀಮಂತ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಆದೇಶದಂತೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಅತಿ ಪುರಾತನವಾದ ಶ್ರೀ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಕಲ್ಯಾಣಿಯನ್ನು ಗ್ರಾಮೀಣ ಮಂಡಲ ಮತ್ತು ನಗರ ಮಂಡಲದ ಮಹಿಳಾ ಮೋರ್ಚಾ ಘಟಕಗಳ ಕಾರ್ಯಕರ್ತರು ಸ್ವಚ್ಛಗೊಳಿಸಿದರು ಎಂದು ಬಿಜಪಿ ಮುಖಂಡ ಮನೋಹರಗೌಡ ಹೇರೂರು ತಿಳಿಸಿದರು. ಅವರು ಇಲ್ಲಿನ ಪಂಪಾವಿರುಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಚಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೋದಿಜಿ ದೇಶದ ಪ್ರಧಾನಿಯಾದ ನಂತರ, ಸ್ವಚ್ಛತೆಯ ಪರಿಕಲ್ಪನೆ ದೇಶದ ಜನತೆಯಲಿ ತುಂಬಿದರು, ವಿಶ್ವದೆದುರು ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದರು, ಅವರ ಆದರ್ಶ ಎಲ್ಲರಿಗೂ ಮಾದರಿ, ಸೈನಿಕರನ್ನು ಕಡೆಗಣಿಸಿದ್ದ ವಿ ಪಕ್ಷಗಳಿಂದ ದೇಶದ ಸ್ವಾಭಿಮಾನಕ್ಕೆ ದಕ್ಕೆಯುಂಟಾಗಿತ್ತು, ಬಳಿಕ ಅಮೇರಿಕಾದಂತೆ ದೇಶಕ್ಕೆ ಸವಾಲು ಹಾಕುವ ರೀತಿಯಲ್ಲಿ ನಾವು ಬೆಳೆದಿದ್ದೇವೆ, ಅನೇಕರ ತ್ಯಾಗ ಬಲಿದಾನಗಳಿಂದ ನಮಗೆ ದೊರಕಿರುವ ಸ್ವಾಂತAತ್ರೊö್ಯÃತ್ಸವದ ಪ್ರಯುಕ್ತ ಜನೋಪಯೋಗಿ ಕಾರ್ಯ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ನಗರ ಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಡಿ ಕೆ ಆಗೋಲಿ,
ನಗರ ಮಂಡಲ ಅಧ್ಯಕ್ಷರಾದ ಚಂದ್ರು ಹಿರಿಯೂರು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಕೃಷ್ಣವೇಣಿ, ನಗರ ಮಂಡಲ ಮಹಿಳಾ ಅಧ್ಯಕ್ಷರಾದ ರೇಖಾ ರಾಯಭಾಗಿ, ಗ್ರಾಮೀಣ ಮಂಡಲದ ಮಹಿಳಾ ಅಧ್ಯಕ್ಷರಾದ ಹುಲಿಗೆಮ್ಮ ಹೊಸಳ್ಳಿ, ಮಹಿಳಾ ಮುಖಂಡರಾದ ಭಾರತಿ ಆಗಲೂರು ಇತರರಿದ್ದರು.