Parents' meeting at Christ the King High School held successfully, more emphasis on children's education: Father Roshan Babu.

ವರದಿ:ಬಂಗಾರಪ್ಪ .ಸಿ.
ಹನೂರು:ಇಂದಿನ ವಾಸ್ತವದಲ್ಲಿ ಶ್ರೀ ಗಳಾದ ಶ್ರೀ ನಿಜಗುಣನಂದಾ ಸ್ವಾಮಿಗಳು ಹೇಳಿದಂತೆ ಯಾರ ಹತ್ತಿರ ಮೊಬೈಲ್ ಇಲ್ಲವೊ ಅವರ ಹತ್ತಿರ ಯಾವುದೇ ಕಾಯಿಲೆ ಸುಳಿಯುವುದಿಲ್ಲ, ನಮ್ಮಲ್ಲಿ ಎಲ್ಲಾ ಮಕ್ಕಳಿಗೆ ಒಂದೇ ರೀತಿಯಲ್ಲಿ ಪಾಠ ಹೇಳಿ ಕೊಡುತ್ತೇವೆ ಆದರೆ ಅವರ ಕಲಿಕೆಯಲ್ಲಿ ಪೋಷಕರ ಪಾತ್ರ ಬಹಳ ದೊಡ್ಡದಿದೆ ಎಂದು ಶಾಲಾ ವ್ಯವಸ್ಥಾಪಕರಾದ ಫಾದರ್ ರೋಷನ್ ಬಾಬು ತಿಳಿಸಿದರು
ಹನೂರು ಪಟ್ಟಣದ ಕ್ರಿಸ್ತರಾಜ ಸಂಸ್ಥೆಯ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಶಾಲೆಯು ಬಹಳ ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದೆ ನನ್ನ ಅವಧಿಯಲ್ಲಿ ಶಾಲೆಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದೇನೆ , ರಾಜ್ಯದಲ್ಲೆಡೆ
ಪರೀಕ್ಷೆಗಳು ನಡೆಯುವಾಗ ವಿದ್ಯಾರ್ಥಿಗಳ ಮೇಲೆ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಿಗವಹಿಸುವಂತೆ ನಡೆಯುತ್ತದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಶಾಲೆಯಲ್ಲಿ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ , ಒಬ್ಬ ವಿದ್ಯಾರ್ಥಿ ಅತಿ ಹೆಚ್ಚು ಅಂಕ ಪಡೆಯಲು ಬಹಳ ಶ್ರಮದ ಅವಶ್ಯಕತೆಯಿದೆ, ಕಳೆದ ಬಾರಿಯಲ್ಲಿ ನಮ್ಮ ಶಾಲೆಯಲ್ಲಿನ ಹನ್ನೊಂದು ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಕೀರ್ತಿತಂದಿದ್ದಾರೆ , ಈಗಾಗಲೇ ಮಕ್ಕಳಿಗೆ ಪ್ರಶ್ನಾವಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಾಗುತ್ತಿದೆ ,ಕಳೆದ ವರ್ಷದಲ್ಲಿ ನಡೆದಂತೆ ಈ ವರ್ಷವು ಉತ್ತಮ ಪರಿಣಿತ ಶಿಕ್ಷಕರನ್ನು ಜೋಡಿಸಲಾಗುತ್ತಿದೆ , ಶಾಲೆಯಲ್ಲಿ ಸಿಇಟಿ ಸೇರಿದಂತೆ ಮುಂದಿನ ತರಗತಿಗಳ ತರಬೇತಿಯನ್ನು ನೀಡುವ ಮೂಲಕ ಪ್ರಯತ್ನಿಸಲಾಗುವುದು .
ಶನಿವಾರ ಮತ್ತು ಭಾನುವಾರ ಶಾಲೆಯಲ್ಲಿ ವಿಶೇಷ ತರಗತಿ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ . ನಮ್ಮ ಸಂಸ್ಥೆಗೆ ಮಕ್ಕಳ ಭವಿಷ್ಯ ಮುಖ್ಯವಾಗಿರುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಸಮಯದಲ್ಲಿ ಮೊಬೈಲ್ಗಳನ್ನು ನೀಡಬಾರದು , ನಿಮ್ಮ ಮನೆಗಳಲ್ಲಿ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ನಿರಂತರವಾಗಿರುತ್ತಾರೆ ಅದನ್ನು ಕಡಿಮೆ ಮಾಡಿ .ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ರವರು ಹೇಳಿದ ಹಾಗೆ ಈಗಾಗಲೇ ಮಕ್ಕಳು ಒಂಬತ್ತು ವರ್ಷಗಳ ಕಾಲ ಮೆಟ್ಟಿಲುಗಳನ್ನು ದಾಟಿ ಮುಂದೆ ಹೋಗುವಾಗ ಜೀವನದ ತಿರುವಿನಲ್ಲಿದ್ದಾರೆ ಅವರಿಗೆ ಉತ್ತಮ ಮಾರ್ಗದರ್ಶನದಲ್ಲಿ ಸಾಗುವಂತೆ ಮಾಡಬೇಕು . ಹಾಗೂ ಮಕ್ಕಳಿಗೆ ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ಯಾವುದೇ ವಾಹನಗಳನ್ನು ನೀಡಬಾರದು ಎಂದರು .
ಪೋಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಚಾಮುಲ್ ನಿರ್ದೇಶಕರಾದ ಸಾಧಿಕ್ ರವರು
ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮ್ಮ ಶ್ರಮಗಳ ಹೆಚ್ಚಿದೆ ಹಾಗೆಯೇ ಶುಚಿತ್ವಕ್ಕೆ ಹೆಚ್ಚು ಹೊತ್ತು ನೀಡಬೇಕು ಎಂದು ತಿಳಿಸಿದರು .
ಶಿಕ್ಷಕರು ಮಾತನಾಡಿ
ಪೋಷಕರು ಸಭೆಯಲ್ಲಿ ಭಾಗವಹಿಸಿ ಅವರ ಸಹಿ ಮಾಡಬೇಕು ಮತ್ತು ಮಗು ವಿಶೇಷ ತರಗತಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕೆಂದರು. ಕಳೆದ ವರ್ಷದ ಫಲಿತಾಂಶಕ್ಕೆ ಕಾರಣದರದವರು ನಮ್ಮ ಶಿಕ್ಷಕರು ಉತ್ತಮ ಫಲಿತಾಂಶಗಳು ಬರಲು ಸಹಕಾರಿಯಾದರು ಎಂದರು .
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಸುಬ್ರಮಣ್ಯ, ಪೋಷಕರುಗಳಾದ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಂಗಾರಪ್ಪ .ಸಿ ,ಲಿಂಗರಾಜು , ಗೋವಿಂದರಾಜು, ಸುರೇಶ್ , ರಾಮು ,ಸೋಮ , ಶಿಕ್ಷಕರುಗಳಾದ ಸಂತೋಷ , ರಾಜು ,ನಾಗರಾಜು ,ಯಶೋದಬಾಯಿ ,ಚಂದ್ರಮ್ಮ ,ಸಂತೋಷ್ , ಉಷಾ ,ರಾಘವೇಂದ್ರಕುಮಾರ್,ರೂಪ ಶ್ರೀ ,ಡೇವಿಡ್,ಮನೋಜ್ ಕುಮಾರ್ ,ಪ್ರಮೀಳ ಮೆಸ್ಕೆರೆ , ಜೂಲಿಯೇಟ್,ಸೇರಿದಂತೆ ಇನ್ನಿತರರು ಹಾಜರಿದ್ದರು.