Municipal Commissioner’s refusal to provide information under Right to Information – Allegation

ಗಂಗಾವತಿ… ಮಾಹಿತಿ ಹಕ್ಕು ಅದಿ ನಿಯಮದ ಅಡಿಯಲ್ಲಿ ಹಲವಾರು ವರ್ಷಗಳಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯಸರ್ವೆ ನಂಬರ್ 46 /2 ಮತ್ತು 46/3 ಭೂಮಿಗೆ ಸಂಬಂಧಿಸಿದಂತೆ ಗೃಹ ನಿವೇಶನಕ್ಕಾಗಿ ಬಳಸಿಕೊಳ್ಳಲು ಅನು ಮೋದನೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿ ವಿನ್ಯಾಸ ಪ್ರತಿಗಳು ಮತ್ತು ಆದೇಶ ಪ್ರತಿ ಇನ್ನಿತರ ದೃಢೀಕೃತ ನಕ ಲು ಪ್ರತಿಗಳನ್ನು ನೀಡುವಂತೆ ನಗರಸಭೆಯ ಪೌರಾಯುಕ್ತರಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಮನವಿ ಪತ್ರ ಸಲ್ಲಿಸಿದರು ಸಹ ಇದುವರೆಗೂ ಯಾವುದೇ ಮಾಹಿತಿಯನ್ನು ನಗರಸಭೆಯ ಪೌರಾಯುಕ್ತರು ಹಾಗೂ ಅಧಿಕಾರಿ ವರ್ಗದವರು ಇದುವರೆಗೆ ನೀಡದೇ ಇರುವುದನ್ನು ಗಮನಿಸಿದರೆ ಪೌರಾಯುಕ್ತರು ಉದ್ಯಮಿಗಳೊಂದಿಗೆ ಕೈಜೋಡಿಸಿರುವುದು ಸ್ಪಷ್ಟವಾಗುತ್ತದೆ. ಎಂದು ರಮೇಶ್ ನಾಯಕ ಗಂಭೀರ ಆರೋಪ ಮಾಡುವುದರ ಜೊತೆಗೆ ಸದರಿ ಸರ್ವೆ ನಂಬರ್ ತಮ್ಮ ವ್ಯಕ್ತಿಗತವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡ ವರ್ಗಕ್ಕೆ ಸಂಬಂಧಿಸಿದ ನಾನು ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ಅವರು ಸಹ ಪೌರಾಯುಕ್ತರಿಗೆ ಮೌಖಿಕವಾಗಿ ಆದೇಶ ನೀಡಿ ಮಾಹಿತಿ ಹಕ್ಕಿನಲ್ಲಿ ಕೇಳಿದ ದಾಖಲಾತಿಗಳನ್ನು ನೀಡುವಂತೆ ಆದೇಶ ನೀಡಿದರು ಸಹ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ನಿರಂಕುಶ ಮಾದರಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ತಮ್ಮ ಅಳಲನ್ನು ಮಾಧ್ಯಮದವರ ಮುಂದೆ ತೋಡಿಕೊಂಡಿದ್ದಾರೆ.. ಹೀಗೆ ಇದು ಮುಂದುವರೆದರೆ ನಗರಸಭೆಯ ಆವರಣದ ಮುಂದೆ ತಾವು ಸೇರಿದಂತೆ ಕುಟುಂಬ ಸಮೇತವಾಗಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ