Breaking News

ರಾಜಣ್ಣ ವಜಾ ಬಿಜೆಪಿ ಅವರು ಅಳುವ ಅಗತ್ಯವಿಲ್ಲ – ಗೊಂಡಬಾಳ

BJP doesn’t need to cry over Rajanna’s dismissal – Gondabala

ಜಾಹೀರಾತು
manju gondbal pp new

ಕೊಪ್ಪಳ: ಸಹಕಾರ ಸಚಿವರಾಗಿದ್ದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವದಕ್ಕೆ ಈಗ ಬಿಜೆಪಿ ಅವರು ಅಳುತ್ತಿರುವದರ ಹಿಂದೆ ಯಾವ ಸದುದ್ದೇಶವೂ ಇಲ್ಲ, ಆದ್ದರಿಂದ ಅವರು ತಮ್ಮ ಕೆಲಸ ನೋಡಿಕೊಳ್ಳಲಿ ಎಂದು ಕೊಪ್ಪಳ ಜಿಲ್ಲಾ ಗ್ಯಾರಂಟಿ ಅನುಷ್ಠನ ಸಮಿತಿ ಉಪಾಧ್ಯಕ್ಷ, ವಾಲ್ಮೀಕಿ ಸಮುದಾಯದ ಮುಖಂಡ ಮಂಜುನಾಥ ಜಿ. ಗೊಂಡಬಾಳ ಅವರು ಹೇಳಿಕೆ ನೀಡಿದ್ದಾರೆ.
ಪತ್ರಿಕೆಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎನ್. ರಾಜಣ್ಣ ಅವರಿಗೆ ೭೪ ವರ್ಷ ವಯಸ್ಸಾಗಿದೆ, ಅವರಿಗೆ ಓಡಾಡಲು ಸಹ ಕಷ್ಟ ಇರುವದರಿಂದ ಅವರು ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷ ಸಂಘಟನೆ ಎರಡರಿಂದಲೂ ದೂರವಿದ್ದು, ಕೇವಲ ಕಾಂಟ್ರವರ್ಸಿ ಹೇಳಿಕೆಗಳಿಂದ ಜನರಿಗೆ ನೆನಪಿದ್ದಾರೆ.
ಇಡೀ ದೇಶವೇ ಬಿಜೆಪಿಯ ಬಾನಗೇಡಿ ಕೆಲಸಗಳನ್ನು ಗಮವಿಸುತ್ತಿದ್ದು, ಮತದಾರರ ಪಟ್ಟಿಯ ಕಳ್ಳತನವನ್ನು ಅತ್ಯಂತ ಜಾಣ್ಮೆಯಿಂದ ವಿವರಿಸಿ ಜನರ ಮುಂದೆ ಬಿಜೆಪಿಯ ಕಳ್ಳಾಟ ಬಯಲು ಮಾಡಿದ ಕೇಂದ್ರ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನೇ ತಪ್ಪಿತಸ್ಥರಂತೆ ಬಿಂಬಿಸುವ ಮತ್ತು ಜ್ಞಾನವೇ ಇಲ್ಲದವರಂತೆ ಮಾತನಾಡಿದ ರಾಜಣ್ಣ ಈ ಹಿಂದೆ ಹತ್ತಾರು ಬಾರಿ ಕೇವಲ ಸಮಸ್ಯಾತಮ್ಕ ಹೇಳಿಕೆ ಮೂಲಕ ಪಕ್ಷ ಸರಕಾರಕ್ಕೆ ಮುಜುಗರ ಮಾಡುತ್ತಿದ್ದಾರೆ, ಪಕ್ಷ ಮತ್ತು ಸಮುದಾಯಕ್ಕೆ ಪ್ರಯೋಜನ ಇಲ್ಲದವರಿಂದ ಯಾರಿಗೂ ಹಿತವಿಲ್ಲ, ಅವರನ್ನು ಸಂಪುಟದಿAದ ಕೈಬಿಟ್ಟಿರುವದರಿಂದ ಪಕ್ಷಕ್ಕೆ ಸಮಾಜಕ್ಕೆ ಯಾವುದೇ ಹಾನಿಯಿಲ್ಲ ಆದ್ದರಿಂದ ಅವರ ಚರ್ಚೆ ಬಿಟ್ಟು ವಾಲ್ಮೀಕಿ ಸಮುದಾಯದ ೧೪ ಜನ ಶಾಸಕರು ಕಾಂಗ್ರೆಸ್‌ನಲ್ಲಿದ್ದು, ಸಂಡೂರು ಮತಕ್ಷೇತ್ರದ ಅನ್ನಪೂರ್ಣ ತುಕಾರಾಂ ಅವರನ್ನು ಎಸ್.ಟಿ. ಮಹಿಳಾ ಕೋಟಾ ಮತ್ತು ಟಿ. ರಘುಮೂರ್ತಿ ಅವರನ್ನು ಎಸ್.ಟಿ. ಮಧ್ಯ ಕರ್ನಾಟಕದಿಂದ ಸಚಿವರನ್ನಾಗಿ ಮಾಡುವದರಿಂದ ಸಮಾಜವನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸಲು ಅನುಕೂಲವಾಗುತ್ತದೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಪಕ್ಷದ ಹೈಕಮಾಂಡ್ ಈ ಕುರಿತು ಗಂಭೀರವಾಗಿ ಪರಿಶೀಲಿಸುವಂತೆ ಎಂದು ಸಹ ಗೊಂಡಬಾಳ ಮನವಿ ಮಾಡಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.