Breaking News

ಭಕ್ತಿ ಮಾರ್ಗಕ್ಕೆ ಭಜನೆ ಅತ್ಯಂತ ಪೂರಕ- ನರಸಿಂಹ ದರೋಜಿ

Bhajans are the most complementary to the path of devotion - Narasimha Daroji
Screenshot 2025 08 13 14 03 59 91 6012fa4d4ddec268fc5c7112cbb265e73370822728582083067 1024x453


ಗಂಗಾವತಿ.. ದೇವರನ್ನು ಪೂಜಿಸುವ ಆರಾಧಿಸುವ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಭಕ್ತಿ ಮಾರ್ಗವನ್ನು ಅಳವಡಿಸಿಕೊಳ್ಳಲು ಭಜನೆ ಅತ್ಯಂತ ಪೂರಕವಾಗಿದೆ ಎಂದು ನವ. ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷ ನರಸಿಂಹ ದರೋಜಿ ಹೇಳಿದರು.. ಅವರು ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಧ್ಯರಾದನೆ ರಥೋತ್ಸವದ ಪ್ರಯುಕ್ತ ರಾತ್ರಿ ಜರುಗಿದ ಬಜನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಿಶೇಷವಾಗಿ ದಾಸ ಸಾಹಿತ್ಯದ ಕನಕದಾಸರು ಪುರಂದರ ದಾಸರು. ವಿಜಯ ವಿಠಲದಾಸರು ಸೇರಿದಂತೆ ಮತ್ತಿತರ ದಾಸವರ್ಯಾರು ತಮ್ಮ ಭಜನೆ ಹಾಡುಗಳ ಮೂಲಕ ದೈವತ್ವ ಸಾಕ್ಷಾತ್ಕಾರ ಪಡೆದುಕೊಂಡ ನಿರ್ದೇಶನಗಳು ಸಾಕಷ್ಟು ಇದೆ ಎಂದು ತಿಳಿಸಿದರು.
ದೇವಸ್ಥಾನದ ವ್ಯವಸ್ಥಾಪಕ ವೇದಮೂರ್ತಿ ವಾದಿರಾಜ ಆಚಾರ್, ಕಲ್ಮಂಗಿ ಮಾತನಾಡಿ ಕಳೆದ ಐದು ಆರು ವರ್ಷಗಳಿಂದ ಹಿರೇ ಜಂತಕಲ್ ವಿರುಪಾಪುರ ಆರ್ಯ ವೈಶ್ಯ ಸಮಾಜದ ನವ ಬೃಂದಾವನ ಭಜನಾ ಮಂಡಳಿಯ ನರಸಿಂಹ ದರೋಜಿ ಹಾಗೂ ಸದಸ್ಯರು ಶ್ರೀ ರಾಘವೇಂದ್ರ ಸ್ವಾಮಿಗಳವರ ರಥೋತ್ಸವದ ಶುಭದಿನದಂದು ಭಜನೆ ಸೇವೆ ಸಲ್ಲಿಸುವುದರ ಮೂಲಕ ಶ್ರೀ ರಾಯರ ಅನುಗ್ರಹಕ್ಕೆ ಪಾತ್ರ ರಾಗಿದ್ದು ಅವರಲ್ಲಿನ ಭಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಒಟ್ಟಾರೆ ವೈವಿಧ್ಯಮಯ ಭಜನೆಯನ್ನು ಮಾಡುವುದರ ಮೂಲಕ ಸಂಗೀತದ ಕಂಪನ್ನು ಪಸರಿಸಿದರು. ಈ ಸಂದರ್ಭದಲ್ಲಿ ವಿಪ್ರ ಸಮಾಜ ಸೇರಿದಂತೆ ವಿವಿಧ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

ಜಾಹೀರಾತು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.