Mugabasaveshwara Chariot Festival as per the directions of the district administration

- ಚಿರಿಬಿ, ರಾಂಪುರ ಎರಡು ಗ್ರಾಮಗಳ ಹೆಸರು,ಧಾರ್ಮಿಕ ಪೂಜಾ ಕೈಕಾರ್ಯಗಳಲ್ಲಿ ಹಾಗೂ ಆಯಾಗಾರರ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ನಡುವೆ ರಥೋತ್ಸವಕ್ಕೆ ಬಿಕ್ಕಟ್ಟು..*
” ಮೂಗಬಸವೇಶ್ವರಸ್ವಾಮಿ ರಥೋತ್ಸವ ಜರುಗಿಸುವ ಬಗ್ಗೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ ಹೇಳಿದರು.”
ಕೊಟ್ಟೂರು : ತಾಲ್ಲೂಕಿನ ಚಿರಬಿ ಗ್ರಾಮದ ಮೂಗಬಸವೇಶ್ವರಸ್ವಾಮಿ ರಥೋತ್ಸವ ಜರುಗಿಸುವ ಬಗ್ಗೆ ಎರಡು ಗ್ರಾಮಗಳ ಸೋಮವಾರ ರಾಂಪುರದಲ್ಲಿ ನಡೆದ ಭಕ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಸಂಪ್ರದಾಯದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಲು ಅಡ್ಡಿಯಿಲ್ಲ ಆದರೆ ರಥೋತ್ಸವ ಜರುಗಿಸುವ ಬಗ್ಗೆ ಎರಡು ಗ್ರಾಮಸ್ಥರು ಮಂಡಿಸಿದ ಬೇಡಿಕೆ ಬಗ್ಗೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ನಂತರ ಜಿಲ್ಲಾಡಳಿತದ ನಿರ್ದೇಶನದಂತೆ ಭಕ್ತರು ಮುನ್ನಡೆಯಬೇಕು ಎಂದರು.
ರಾಂಪುರ ಗ್ರಾಮಸ್ಥರ ಪರವಾಗಿ ಪೂಜಾರ ಚಂದ್ರಶೇಖರಯ್ಯ ಅವರು ಮಾತನಾಡಿ, ಮೂಗಬಸವೇಶ್ವರ ರಥೋತ್ಸವದ ಪೂಜಾ ಕಾರ್ಯಕ್ರಮಗಳನ್ನು ತಾವು ಮತ್ತು ತಮ್ಮ ಸಹೋದರ ವಾಮದೇವಯ್ಯ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವುದಾಗಿ ತಿಳಿಸಿದರು. ರಥೋತ್ಸವದ ಸಮಯದಲ್ಲಿ ಲಿಂಗಾಯತರು ಪಲ್ಲಕ್ಕಿ ಹೊರುತ್ತಿದ್ದರು ಎಂದು ತಿಳಿಸಿದರು.
ಬಸವರಾಜ್ ಅವರು ಮಾತನಾಡಿ, ದೇವಸ್ಥಾನದ ಮೂರ್ತಿಯು ತಮ್ಮ ಗ್ರಾಮದಲ್ಲಿದೆ. ರಥೋತ್ಸವಕ್ಕೆ ಮೆರವಣಿಗೆ ಮೂಲಕ ಮೂರ್ತಿಯನ್ನು ಇಲ್ಲಿಂದಲೇ ತೆಗೆದುಕೊಂಡು ಹೋಗಲಾಗುತ್ತದೆ. ದಲಿತ ಮಹಿಳೆಯೊಬ್ಬರು ಕೊಟ್ಟೂರೇಶ್ವರ ಸ್ವಾಮಿಗೆ ಆರತಿ ಬೆಳಗುವಂತೆ, ಇಲ್ಲಿಯೂ ದಲಿತ ಮಹಿಳೆ ರಥೋತ್ಸವ ಮೂರ್ತಿಗೆ ಆರತಿ ಬೆಳಗಿದ ನಂತರವೇ ಪ್ರಾರಂಭವಾಗುತ್ತದೆ. ಹಾಗಾಗಿ, ಈ ಎಲ್ಲಾ ಕಾರ್ಯಕ್ರಮಗಳು ರಾಂಪುರ ಗ್ರಾಮಕ್ಕೆ ಸೇರಿವೆ ಎಂದು ಹೇಳಿದರು.
ಮೂಗಪ್ಪ ಅವರು ಮಾತನಾಡಿ, ರಥದ ಎರಡು ಚಕ್ರಗಳನ್ನು ವಾಲ್ಮೀಕಿ ಸಮುದಾಯದವರು, ಇನ್ನುಳಿದ ಎರಡು ಚಕ್ರಗಳನ್ನು ಹರಿಜನ ಸಮುದಾಯದವರು ತೆಗೆದುಕೊಂಡು ಹೋಗುತ್ತಿದ್ದರು. ರಥೋತ್ಸವದ ಸಮಯದಲ್ಲಿ ಒಡೆಯುವ ತೆಂಗಿನಕಾಯಿಗಳನ್ನು ಹರಿಜನ ಸಮುದಾಯದವರು ತೆಗೆದುಕೊಳ್ಳುತ್ತಿದ್ದರು.
ಈ ಎಲ್ಲಾ ಸಂಪ್ರದಾಯಗಳು ಇರುವುದರಿಂದ ದೇವಾಲಯದ ಕಾರ್ಯಕ್ರಮಗಳು ತಮ್ಮ ಗ್ರಾಮಕ್ಕೆ ಸಂಬಂಧಿಸಿದ್ದು ಎಂದು ವಿವರಿಸಿದರು. ಮತ್ತು
ರಾಂಪುರ ಗ್ರಾಮಸ್ಥರು. ಆಯಾಗಾರ ಕಾರ್ಯಕ್ರಮಗಳನ್ನು ತಮಗೂ ನೀಡಬೇಕೆಂದು ಮನವಿ ಮಾಡಿದರು
ಉಭಯ ಎರಡು ಗ್ರಾಮಸ್ಥರ ಅಭಿಪ್ರಾಯಗಳನ್ನು ಆಲಿಸಿದ ಡಿವೈಎಸ್‌ಪಿ ಮತ್ತು ಎಸಿ ಅವರು, ಎಲ್ಲಾ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು. ಅಲ್ಲದೆ, ರಥೋತ್ಸವದ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ, ಅದನ್ನು ಪೊಲೀಸರ ಮೂಲಕ ತಿಳಿದುಕೊಳ್ಳುವಂತೆ ತಿಳಿಸಿದರು. ವದಂತಿಗಳಿಗೆ ಕಿವಿಗೊಡದೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಅವರು ಗ್ರಾಮಸ್ಥರಿಗೆ ಮನವಿ ಮಾಡಿದರು.
ಸಮಿತಿ ಚಿರಿಬಿ ಮತ್ತು ಮಧ್ಯಾಹ್ನದ ನಂತರ ರಾಂಪುರ ಗ್ರಾಮಗಳಿಗೆ ಭೇಟಿ ನೀಡಿದಾಗ ಎರಡೂ ಕಡೆ ನೂರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು.
ತಹಶೀಲ್ದಾರ್ ಜಿ.ಕೆ.ಅಮರೀಶ್, ಸಿಪಿಐ ನಾರಾಯಣ, ಪಿಎಸ್ಐ ಗೀತಾಂಜಲಿ ಶಿಂಧೆ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಕಂದಾಯ ನಿರೀಕ್ಷಕ ಹರೀಶ್ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.