It is ironic that BJP is now waking up to the atrocities being committed against women in Dharmasthala: Bharadwaj

ಗಂಗಾವತಿ: ಧರ್ಮಸ್ಥಳದಲ್ಲಿ ಸುಮಾರು ೩೦ ವರ್ಷಗಳಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮೌನವಹಿಸಿದ್ದ ಬಿಜೆಪಿ, ಈಗ ಎಚ್ಚೆತ್ತುಕೊಂಡು ಪತ್ರಿಕಾಗೋಷ್ಠಿ ನಡೆಸುತ್ತಿರುವುದು ವಿಪರ್ಯಾಸವಾಗಿದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಹಾಸ್ಯಾಸ್ಪದ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿ ಮಹಿಳೆಯರ ಅದರಲ್ಲೂ ಯುವತಿಯರ ಮೇಲೆ ಅನೇಕ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆಯುತ್ತಾ ಬಂದಿದ್ದು, ಈ ಗಂಭೀರ ಪ್ರಕರಣಗಳ ಬಗ್ಗೆ ಬಿಜೆಪಿ ಯಾವುದೇ ಚಕಾರ ಎತ್ತದೆ ಮೌನವಹಿಸಿದ್ದು, ಆದರೆ ಈಗ ಒಮ್ಮಿಂದೊಮ್ಮೆಲೆ ಧರ್ಮಸ್ಥಳದಲ್ಲಿನ ಪ್ರಕರಣಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿರುವುದು ಆಶ್ಚರ್ಯವೆನಿಸುತ್ತದೆ ಎಂದು ಭಾರಧ್ವಾಜ್ ಟೀಕಿಸಿದ್ದಾರೆ.