Doubts about whether the chariot festival of Chiribi Mugabasaveshwara Swamy will take place or not ?

ಕೊಟ್ಟೂರು :ಹದಿನೇಳು ವರ್ಷಗಳ ನಂತರ ಚಿರಿಬಿ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯುವುದೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಜಾತ್ರೆಯ ಪ್ರಯುಕ್ತ ಚಿರಿಬಿ ಗ್ರಾಮಸ್ಥರ ಸಭೆಯನ್ನು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಈ ಸಭೆಯಲ್ಲಿ ಚಿರಿಬಿ ಗ್ರಾಮಸ್ಥರು ಹಾಜರಾಗಿ, ಮೂಗಬಸವೇಶ್ವರ ದೇವಸ್ಥಾನವು ಚಿರಿಬಿ ಗ್ರಾಮಕ್ಕೆ ಸೇರಿದ್ದೆಂದು ಇತಿಹಾಸದ ದಾಖಲೆಗಳನ್ನು ಮತ್ತು ಜರ್ಮಲಿಯ ಪಾಳೆಗಾರರಾದ ಇಮ್ಮಡಿ ಸಿದ್ದಪ್ಪನಾಯಕ ಈ ದೇವಸ್ಥಾನಕ್ಕೆ ಭೂ ದಾನ ನೀಡಿ, ಮೂಗಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕಾರಣಕರ್ತರಾಗಿದ್ದಾರೆ.
ಆಗ ಕಂದಾಯ ಜಮೀನು ರಾಂಪುರ ಎಂದು ಇದ್ದುದ್ದಕ್ಕೆ ಅದನ್ನು ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ, ರಾಂಪುರ ಎಂದು ಕರೆಯುತ್ತಿರುವುದಕ್ಕೆ ನಮ್ಮ ತಕರಾರಿದೆ. ಅಲ್ಲದೆ ರಥೋತ್ಸವದ ಬ್ಯಾನರ್‌ಗಳಲ್ಲಿಯೂ ಸಹ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ, ರಾಂಪುರ ಎಂದು ಹಾಕಿರುವುದಕ್ಕಷ್ಟೇ ನಮ್ಮ ತಕರಾರು ಎಂದರು. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಿಚಾರಿಸಿದರೆ, ಡಿ.ಸಿ.ಯವರನ್ನು ಕೇಳಿ, ಎ.ಸಿ.ಯವರನ್ನು ಕೇಳಿ ಎಂಬ ಉಡಾಫೆಯ ಮಾತುಗಳನ್ನು ಚಿರಿಬಿ ಗ್ರಾಮದ ಮುಖಂಡರಿಗೆ ಹೇಳಿದ್ದು,
ಈ ಸಭೆ ನಡೆಯಲು ಕಾರಣಕರ್ತರಾಗಿದ್ದಾರೆ ಎಂದರು. ಎರಡು ಗ್ರಾಮಗಳ ಈ ಗೊಂದಲಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಇ.ಒ. ಹನುಮಂತಪ್ಪರವರೇ ಕಾರಣ ಎಂದರು. ಇದು ಭಕ್ತಾದಿಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿ ಗ್ರಾಮಕ್ಕೆ ಸೇರಿದ್ದೇ ವಿನಃ ರಾಂಪುರಕ್ಕೆ ಸೇರಿದ್ದಲ್ಲ, ಯಾವುದೇ ಕಾರಣಕ್ಕೂ ಬ್ಯಾನರ್‌ಗಳಲ್ಲಿಯಾಗಲೀ, ಧಾರ್ಮಿಕ ದತ್ತಿ ಇಲಾಖೆಯ ದಾಖಲೆಗಳಲ್ಲಾಗಲೀ ರಾಂಪುರ ಗ್ರಾಮದ ಹೆಸರು ಬರದಂತೆ ಎಚ್ಚರ ವಹಿಸಬೇಕು ಎಂದರು. ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಎಂದೇ ಟ್ರಸ್ಟ್ ಸ್ಥಾಪಿತವಾಗಿದೆ ಎಂದರು. ಇದಕ್ಕೆ ಸಂಪೂರ್ಣ ದಾಖಲೆಗಳಿವೆ.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತರಾದ ಚಿದಾನಂದ ಸ್ವಾಮಿ ಮಾತನಾಡಿ, ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ, ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ, ಅವರ ನಿರ್ದೇಶನದಂತೆ, ರಥೋತ್ಸವವನ್ನು ಸಾಂಗವಾಗಿ ನೆರವೇರಿಸಲಾಗುವುದು ಎಂದರು. ಸಭೆಯಲ್ಲಿ ಹಾಜರಿದ್ದ ಡಿ.ವೈ.ಎಸ್.ಪಿ. ಮಲ್ಲೇಶ್ ದೊಡ್ಡಮನಿ ನಾವು ನಿಮ್ಮಗಳ ಬೇಡಿಕೆಯನ್ನು ಕೇಳಲು ಬಂದಿದ್ದೇವೆ. ನಿಮ್ಮ ಬೇಡಿಕೆಗಳನ್ನು ನಮಗೆ ತಿಳಿಸಿದರೆ, ನಾವು ಮೇಲಾಧಿಕಾರಿಗಳಿಗೆ ಸದರಿ ವಿಚಾರವನ್ನು ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಯಾರೂ ಸಹ ಊಹಾಪೋಹದ ಸುದ್ದಿಗಳಿಗೆ ಕಿವಿಗೊಡದೇ ಏನೇ ಸಮಸ್ಯೆ ಬಂದರೂ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕು, ಸುಳ್ಳು ಸುದ್ದಿಗಳನ್ನು ಕೇಳಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದನ್ನು ಯಾರೂ ಮಾಡಕೂಡದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಹಾಜರಾಗಿದ್ದ ಗ್ರಾಮಸ್ಥರಾದ ಸಿ.ಎಂ. ವೀರಯ್ಯ, ಮಂಜುನಾಥ ಎ.ಬಿ., ಪಿ.ನಾಗರಾಜ್, ತಿಪ್ಪೇಶ್ ಹೊಸಮನಿ ಎಂ.ಮೂಗಣ್ಣ, ಒಂಟಿ ಸುರೇಶ, ಬೆಂಕಿ ರಮೇಶ್, ಇವರು ತಮ್ಮ ಅಹವಾಲುಗಳನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ತಹಶೀಲ್ದಾರ ಅಮರೇಶ್, ಇ.ಒ. ಹನುಮಂತಪ್ಪ, ಕೊಟ್ಟೂರು ಸಿಪಿಐ ಮತ್ತು ಪಿಎಸ್‌ಐ ಗೀತಾಂಜಲಿ ಶಿಂಧೆ, ಪಿ.ಡಿ.ಓ. ಮಾಧವಿ, ಕಂದಾಯ ನಿರೀಕ್ಷಕರು ಸಭೆಯಲ್ಲಿ ಹಾಜರಿದ್ದರು.
ಚಿರಿಬಿ ಮೂಗಬಸವೇಶ್ವರ ದೇವಸ್ಥಾನಕ್ಕೆ ನಮ್ಮ ತಂದೆಯವರ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು, ನಾವು ಇಪ್ಪತ್ತೈದು ವರ್ಷಗಳಿಂದ ನಡೆದುಕೊಳ್ಳುತ್ತಿದ್ದು, ಈ ದೇವಸ್ಥಾನ ಚಿರಿಬಿ ಮೂಗಣ್ಣ ದೇವಸ್ಥಾನ ಎಂತಲೇ, ರಾಂಪುರ ಎಂದು ಈಗ ಹೊಸದಾಗಿ ಕೇಳುತ್ತಿದ್ದೇವೆ ನಾವು ಪ್ರತೀ ಅಮಾವಾಸ್ಯೆಗೂ ಬಂದು ದೇವರ ದರ್ಶನ ಮಾಡುತ್ತೇವೆ.
ಜುಂಜಪ್ಪ ಭಕ್ತರು ಹೇಳಿಕೆ
ಧಾರ್ಮಿಕ ದತ್ತೆ ಇಲಾಖೆ ಇಓ ಹನುಮಂತಪ್ಪ ಅವರು ಹೋದ ಕಡೆಯಲ್ಲಲ್ಲಲ್ಲ ಎಸಿ ಡಿಸಿ ಸಾಹೇಬನ್ನು ಕೇಳಿ ಎನ್ನುವ ಅಧಿಕಾರಿ ಇವರು ಮತ್ತೆ ಯಾವ ಕೆಲಸ ಕಾರ್ಯನಿರ್ವಹಿಸಲು ಬರುತ್ತದೆ ಎಂಬುವುದು ಏಕ್ಷಪ್ರಶ್ನೆ ಆಗಿದೆ…. ಎಂದು ಚಿರಿಬಿ ನಾಗರಾಜ್