Breaking News

  ಇಂದಿನ ಭ್ರಷ್ಟಾಚಾರಕ್ಕೆ ಸ್ವಲ್ಪಮಟ್ಟಿಗೆ ಮಹಿಳೆಯರು ಕಾರಣ ಎನ್ನುವುದನ್ನು ಸುಳ್ಳು ಮಾಡಬೇಕಿದೆ.

We need to refute the notion that women are partly responsible for today's corruption.

20250811 092751 Collage6279416524359843651 576x1024

ಗಂಗಾವತಿ:ಇಂದಿನ ಭ್ರಷ್ಟಾಚಾರಕ್ಕೆ ಸ್ವಲ್ಪಮಟ್ಟಿಗೆ ಮಹಿಳೆಯರು ಕಾರಣ ಎನ್ನುವುದನ್ನು ಸುಳ್ಳು ಮಾಡಬೇಕಿದೆ-ಎಂದು ಪ್ರಾಧ್ಯಾಪಕಿ ಪ್ರೋ.ವಿಜಯಲಕ್ಷ್ಮಿ ಗುರಿಕಾರ ಹೇಳಿದರು

ಜಾಹೀರಾತು
Screenshot 2025 08 11 08 43 18 22 6012fa4d4ddec268fc5c7112cbb265e75700250282633275982 1024x450

ಅವರು ರವಿವಾರ  ನಗರದ ನೀಲಕಂಠೇಶ್ವರ ಕ್ಯಾಂಪ್ ಶ್ರೀ ಪಾಂಡುರಂಗ ದೇವಾಲಯದಲ್ಲಿ ಬಸವಪರ ಸಂಘಟನೆಯಗಳು ಆಯೋಜಿಸಿದ್ದ 20ನೇ ಮನೆ ಮನೆಯಲ್ಲಿ ವಚನ ಶ್ರಾವಣ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದ ಕುರಿತು ಉಪನ್ಯಾಸ ಮಾತನಾಡುತ್ತ ಶರಣರ ವಚನಗಳು ವೈಜ್ಞಾನಿಕ, ವೈಚಾರಿಕವಾಗಿದ್ದು ಸಕಲರಿಗೆ ಲೇಸನ್ನು ಬಯಸುತ್ತವೆ  ಎಂದರು.

Screenshot 2025 08 11 09 24 31 87 6012fa4d4ddec268fc5c7112cbb265e71522329125045458810 1024x547


12 ಶತಮಾನದಲ್ಲಿ ಮಹಿಳೆಯರು ಸೇರಿ ಅಶಕ್ತರಿಗೆ ದಾರಿದೀಪವಾಗಿ ವಚನ ಸಾಹಿತ್ಯ ಕಾರ್ಯ ಮಾಡಿವೆ
ಶೋಷಣೆ ಮಾಡುವುದನ್ನು ತಪ್ಪಿಸಿ ಬದಲಾವಣೆ ಮಾಡುವ ಮೂಲಕ ಶರಣರ ಮಾರ್ಗದಲ್ಲಿ ನಡೆಯಬೇಕು. ಕೌಟುಂಬಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ ಸಮಸಮಾಜದ ನಿಟ್ಟಿನಲ್ಲಿ ಕಾರ್ಯ ಮಾಡಿದ ಶರಣರ ವಚನಗಳೊಂದಿಗೆ ಆತ್ಮ ಸ್ಥೈರ್ಯದಿಂದ ಬದುಕಬೇಕು. ಸಂಕವ್ವನಂತಹ ವ್ಯಕ್ತಿಯನ್ನು ಸಹ ಗರತಿಯನ್ನಾಗಿ ಮಾಡಿದ್ದು ಶರಣರ ಕಾಲವಾಗಿದೆ.
ಮಹಿಳೆಯರನ್ನು ದೇವರಿಗೆ, ದೇಶಕ್ಕೆ ಹೋಲಿಸುವುದಕ್ಕಿಂತ ಮಹಿಳೆಯರನ್ನು ಮನುಷ್ಯತ್ವದಿಂದ ಕಾಣುವುದು ಅವಶ್ಯ.
ಹೆಣ್ಣನ್ನು ಕಾಮುಕ ದೃಷ್ಟಿಯಿಂದ ನೋಡದೇ ಮನುಷ್ಯತ್ವದ ಕಾಣಬೇಕು.ಇಂದಿನ ಭ್ರಷ್ಟಾಚಾರಕ್ಕೆ ಸ್ವಲ್ಪಮಟ್ಟಿಗೆ ಮಹಿಳೆಯರು ಕಾರಣ ಎನ್ನುವುದನ್ನು ಸುಳ್ಳು ಮಾಡಬೇಕಿದೆ.ಮನುಷ್ಯನ ಪ್ರೀತಿಯನ್ನು ವಚನಗಳನ್ನು ಕಾಣಬಹುದಾಗಿದೆ. ನಿತ್ಯ ವಚನ ಸಾಹಿತ್ಯ

ಓದಬೇಕು.ಜೀವನದಲ್ಲಿ ಅನುಷ್ಠಾನ ಮಾಡಬೇಕು.
ಕಾರ್ಯಕ್ರಮದಲ್ಲಿ ಕೆ.ವರಲಕ್ಷ್ಮಿ, ಬಸವಪರ ಸಂಘಟನೆಯ ಬಸವ ಕೇಂದ್ರದ ಅಧ್ಯಕ್ಷ ಕೆ.ಬಸವರಾಜ,ಬಸವದಳದ ಅಧ್ಯಕ್ಷ ದಿಲೀಪಕುಮಾರ ವಂದಾಲ, ಬಸವದಳದ ಕಾರ್ಯದರ್ಶಿವಿರೇಶ ರೆಡ್ಡಿ, ಬಸವದಳದ ಉಪಾಧ್ಯಕ್ಷವೀರೇಶ ಕುಂಬಾರ,  ವಿನೈ ಕುಮಾರ ಜ್ಯೋತೆಮ್ಮ ಭಾವಿಕಟ್ಟಿ,ಚನ್ನಬಸಮ್ಮ  ಪ್ರಮುಖರಾದ ರಾಮಣ್ಣ ಕುರಿ,ಪ್ರೋ.ಕರಿಯಣ್ಣ,ತಿಪ್ಪೇಸ್ವಾಮಿ, ಹನುಮಂತಪ್ಪ ಹುಲಿಹೈದರ್, ಹಾಜಿ,ಕಾಜಹುಸೇನ ಮುಳ್ಳೂರು,ಮಲ್ಲಿಕಾರ್ಜುನ ಸಿದ್ದಾಪುರ, ರಮೇಶ ಐಲಿ,ವಿಜಯಲಕ್ಷ್ಮಿ, ಗೌಸಿಯಾ ಬೇಗಂ,ಶೋಭಾ ಕರಿಗೂಳಿ,ರಾಯಮ್ಮ,ದಶರಥ,ಛತ್ರಪ್ಪ ತಂಬೂರಿ,ಬಸವರಾಜ ಕಟ್ಟೆ,ಧೂಳ್ ವೆಂಕಟೇಶ, ಪರಶುರಾಮ ದೇವರಮನೆ,ಕನಕಪ್ಪ ಹೊಸಳ್ಳಿ, ತಿಮ್ಮಪ್ಪ ಹಿರಿಯ ಪತ್ರಕರ್ತರಾದ ಕೆ. ನಿಂಗಜ್ಜ ಸೇರಿದಂತೆ ಮುಂತಾದವರಿದ್ದರು.

Screenshot 2025 08 11 08 43 28 28 6012fa4d4ddec268fc5c7112cbb265e78751401265012776264 1024x415

About Mallikarjun

Check Also

screenshot 2025 10 07 20 38 18 90 a71c66a550bc09ef2792e9ddf4b16f7a.jpg

ನನ್ನ ಹಲವು ಡೀಪ್‌ಫೇಕ್ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ: ನಿರ್ಮಲಾ ಸೀತಾರಾಮನ್

Many of my deepfake videos are circulating everywhere: Nirmala Sitharaman ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.