Special puja program at Sri Trimbakeshwar Temple:

ಗಂಗಾವತಿ:11 ನಗರದಲ್ಲಿರುವ ಆನೆಗೊಂದಿ ರಸ್ತೆಯಲ್ಲಿ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ರುದ್ರ ಅಭಿಷೇಕ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಯಿತು. ಸನಾತನ ಹಿಂದೂ ಧರ್ಮದ ಪರಂಪರೆ ಮುಂದುವರೆಯುವುದಕ್ಕೆ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಮ್ಮ ಸಮಾಜ ಮತ್ತು ಪಂಚಪೀಠ ಮಠಾಧೀಶರು ನಡೆಸಿಕೊಡುವ ಹಾದಿಯಲ್ಲಿ ನಾವು ಇಂದು ಶ್ರಾವಣ ಮಾಸದ ಪ್ರಯುಕ್ತ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಸಮಾಜದ ವತಿಯಿಂದ ಸೇರಿ ಪರಮಾತ್ಮನ ಸೇವೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಶ್ರೀ ವೀರ ಮಹೇಶ್ವರ ಜಂಗಮ ಸಮಾಜದ ಹಿರಿಯ ಮುಖಂಡ ಎಸ್.ಬಿ. ಹಿರೇಮಠ, ಅಧ್ಯಕ್ಷರಾದ ಸಂಗಮೇಶ ಕಣ್ಣೂರುಮಠ, ಉಪಾಧ್ಯಕ್ಷ ಹುಚ್ಚಯ್ಯಸ್ವಾಮಿ ಹಾಲಿನ ಡೈರಿ, ಕಾರ್ಯದರ್ಶಿ ಶಿವಯ್ಯಸ್ವಾಮಿ ಹಿರೇಮಠ, ಸಮಾಜದ ಮುಖಂಡರಾದ ವೀರಯ್ಯ ಹುಲೇಗುಡ್ಡ, ಹೆಬ್ಬಾಳ ಮಲ್ಲಯ್ಯ ಸ್ವಾಮಿ, ಡಾ.ಶರಭಯ್ಯಸ್ವಾಮಿ ಹಿರೇಮಠ, ಗಂಗಾಧರ ಹಿರೇಮಠ, ಮಂಜುನಾಥ ಕೆಂಬಾವಿಮಠ, ಸಂಗಯ್ಯಸ್ವಾಮಿ ಸಂಶಿಮಠ, ಶೇಖರಯ್ಯಸ್ವಾಮಿ, ಆದಯ್ಯಸ್ವಾಮಿ ಹಿರೇಮಠ,ಶರಣಯ್ಯ ಸಾಲಿಮಠ, ಸೇರಿದಂತೆ ಇತರರು ಇದ್ದರು.