Breaking News

ಗಂಗಾವತಿ ನಗರದ ಕನ್ನಡ ಜಾಗೃತಿ ಭವನದಲ್ಲಿನೂಲಹುಣ್ಣಿಮೆ ಪ್ರಯುಕ್ತ ಶಿವಾನುಗೋಷ್ಠಿ ಕಾರ್ಯಕ್ರಮ

Shivanu Gosthi program on the occasion of Noola Full Moon at Kannada Jagruti Bhavan in Gangavathi City

ಜಾಹೀರಾತು
whatsapp image 2025 08 11 at 11.16.36 c52a389b

ಗಂಗಾವತಿ: ನಗರದ ಹೊಸಳ್ಳಿ ರಸ್ತೆಯ ಲಿಟಲ್ ಹಾರ್ಟ್ಸ್ ಶಾಲೆ ಹತ್ತಿರವಿರುವ ಕನ್ನಡ ಜಾಗೃತಿ ಸಮಿತಿ ಭವನದಲ್ಲಿ ಆಗಸ್ಟ್-೧೨ ಮಂಳವಾರ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ (ರಿ), ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ ಹಾಗೂ ಕನ್ನಡ ಜಾಗೃತಿ ಸಮಿತಿ ಗಂಗಾವತಿ ಇವರುಗಳ ಸಹಯೋಗದಲ್ಲಿ ನೂಲಹುಣ್ಣಿಮೆ ಪ್ರಯುಕ್ತ ೧೧ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದ ಉದ್ಘಾಟನೆಯ ದಿವ್ಯ ಸಾನಿಧ್ಯವನ್ನು ಗಂಗಾವತಿ ಕಲ್ಮಠದ ಮ.ನಿ.ಪ್ರ ಶ್ರೀ ಡಾ. ಕೊಟ್ಟೂರು ಮಹಾಸ್ವಾಮಿಗಳು, ಹೆಬ್ಬಾಳ ಬೃಹನ್ಮಠದ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಮಾನವಿಯ ಮುಕ್ತಾಗುಚ್ಛ ಬೃಹನ್ಮಠ ಕಲ್ಮಠದ ಶ್ರೀ ಷ.ಬ್ರ. ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಬಳಗಾನೂರು ಶ್ರೀ ಮರಿಶಿವಯೋಗಿಗಳ ಮಠದ ಶ್ರೀ ಮ.ನಿ.ಪ್ರ. ಸಿದ್ಧಬಸವ ಮಹಾಸ್ವಾಮಿಗಳು ವಹಿಸಲಿದ್ದರೆ.
ಈ ಗೋಷ್ಠಿಯಲ್ಲಿ ಉಪನ್ಯಾಸವನ್ನು ಇಟಗಿ ಚಿಕ್ಕಮ್ಯಾಗೇರಿ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ೧೦೮ ಡಾ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ನೀಡಲಿದ್ದಾರೆ.
ಈ ಕಾರ್ಯಕ್ರಮವು ಸುಳೇಕಲ್ ಬೃಹನ್ಮಠದ ಪ.ಪೂ ಶ್ರೀ ಭುವನೇಶ್ವರಯ್ಯ ತಾತನವರು, ಅರಳಹಳ್ಳಿ ಬೃಹನ್ಮಠದ ಪ.ಪೂ ಶ್ರೀ ಗವಿಸಿದ್ದಯ್ಯ ತಾತನವರು ಹಾಗೂ ಪ.ಪೂ ಶ್ರೀ ಶರಣಬಸವ ದೇವರು ನೇತೃತ್ವದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಗಾಲಿ ಜನಾರ್ಧನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಕಳಕನಗೌಡ ಪೊಲೀಸ್ ಪಾಟೀಲ್, ಗಂಗಾವತಿ ತಾಲೂಕ ಅಧ್ಯಕ್ಷ ಗಿರೇಗೌಡ ಹೊಸಕೇರಾ, ಬಿ.ಜೆ.ಪಿ ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಸಿದ್ರಾಮಯ್ಯಸ್ವಾಮಿ, ಸಂಗಮೇಶ ಸುಗ್ರೀವ, ಅಂತರಾಷ್ಟಿçÃಯ ಹಾಸ್ಯ ಕಲಾವಿದ ಬೀಚಿ ಗಂಗಾವತಿ ಪ್ರಾಣೇಶ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಭಾಗವಹಿಸಲಿದ್ದಾರೆ.
ಈ ಶಿವಾನುಭವ ಗೋಷ್ಠಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸಾಹಿತಿಗಳು, ಕವಿಗಳು, ಮಹಿಳೆಯರು ಭಾಗವಹಿಸಲು ಕೋರಲಾಗಿದೆ.

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.