Massive protest condemning the murder of Gavisiddappa Nayaka, a young man from the Valmiki Nayaka community

ಕೊಪ್ಪಳ,11:ಇದೇ ಆಗಸ್ಟ್ 3 ರಂದು ಸಂಜೆ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಡುರಸ್ತೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕ ಅಮಾನುಷವಾಗಿ ಕೊಲೆಯಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯವಾಗಿದ್ದು, ಮನುಷ್ಯತ್ವದ ಹಾದಿಯಲ್ಲಿ ಮಹರ್ಷಿ ವಾಲ್ಮೀಕಿ, ಬುದ್ಧ-ಬಸವ-ಅಂಬೇಡ್ಕರ್ ಆದರ್ಶದಲ್ಲಿ ಬದುಕಬೇಕು ఎంబ ನಮ್ಮ ಆಶಯಕ್ಕೆ ವಿರುದ್ಧವಾದ ಸಮಾಜಘಾತುಕ ಶಕ್ತಿಗಳು ತಮ್ಮ ಲಾಭಕ್ಕಾಗಿ ಇಂತಹ ದುಷ್ಕೃತ್ಯಗಳಲ್ಲಿ
ಭಾಗಿಯಾಗಿವೆ, ಸರಕಾರಗಳು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗೆ ಸರಿಯಾದ ಶಿಕ್ಷೆ ಕೊಟ್ಟಾಗ ಮಾತ್ರವೇ ಇಂತಹ ಕುಕೃತ್ಯಗಳು ನಿಲ್ಲಲಿವೆ. ಈ ಪ್ರಕರಣದಲ್ಲಿ ಸರಕಾರ ಆರೋಪಿಗಳಿಗೆ ಶಿಕ್ಷೆಯಾಗುವ ರೀತಿಯಲ್ಲಿ ತತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೂಡಲೇ ಇದರ ತನಿಖೆಯಾಗಿ ಕೊಲೆಯಲ್ಲಿ ಬಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಹಕ್ಕ ಒತ್ತಾಯಿಸಿದರು.

ಈ ಪ್ರತಿ ಭಟನೆಯಲ್ಲಿ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ,ಮಾಜಿ ಶಾಸಕರಾದಶಿವನಗೌಡ ನಾಯಕ,
ರಾಜುಗೌಡ ನಾಯಕ,ಪರಣ್ಣ ಮುನವಳ್ಳಿ
ಬಸವರಾಜ ದಡೆಸೂಗೂರ,ಮತ್ತು ಸಮುದಾಯದ ಸಾವಿರಾರು ಮುಖಂಡರು ಭಾಗವಹಿಸಿದ್ದರು.