Mallanna Temple: Yajna Mahotsava from 14th

ಬೀದರ್: ಶ್ರಾವಣ ನಿಮಿತ್ತ ಭಾಲ್ಕಿ ತಾಲ್ಲೂಕಿನ ಖಾನಾಪುರದ ಮಲ್ಲಣ್ಣ ದೇವಸ್ಥಾನದಲ್ಲಿ ಆಗಸ್ಟ್ 14 ರಿಂದ 20 ರ ವರೆಗೆ ರುದ್ರ ಸ್ವಹಕಾರ ಯಜ್ಞ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಪ್ರತಿ ದಿನ ಬೆಳಿಗ್ಗೆ 4ಕ್ಕೆ ಮಲ್ಲಣ್ಣ ದೇವರಿಗೆ ಕಾಕಡ ಆರತಿ, ಬೆಳಿಗ್ಗೆ 5ಕ್ಕೆ ಸತತ ರುದ್ರಾಭಿಷೇಕ, ಮಧ್ಯಾಹ್ನ 12 ಹಾಗೂ ರಾತ್ರಿ 8ಕ್ಕೆ ನೈವೇದ್ಯ ಮಂಗಳಾರತಿ ನಡೆಯಲಿದೆ.
ಏಳೂ ದಿನ ಬೆಳಿಗ್ಗೆ 9 ರಿಂದ 11.30 ರ ವರೆಗೆ ಘೃತಮಾರಿ(ಗುರತ ಮಲ್ಲಮ್ಮ) ದೇವಿಗೆ ತುಪ್ಪದ ರುದ್ರಾಭಿಷೇಕ ಹಾಗೂ ಮೂಳಲಿಂಗ(ಜ್ಯೋತಿಲಿರ್ಂಗ)ಕ್ಕೆ ಕ್ಷೀರ ರುದ್ರಾಭಿಷೇಕ ಜರುಗಲಿದೆ.
ಆಗಸ್ಟ್ 21 ರಂದು ಬೆಳಿಗ್ಗೆ 9ಕ್ಕೆ ರುದ್ರ ಸ್ವಹಕಾರ ಯಜ್ಞ, ಮಧ್ಯಾಹ್ನ 3.10ಕ್ಕೆ ಯಜ್ಞ ಪೂರ್ಣಾಹುತಿ, ಸಂಜೆ 4ಕ್ಕೆ ತೀರ್ಥ ಮಹಾ ಪ್ರಸಾದ, ರಾತ್ರಿ 9ಕ್ಕೆ ಭಜನೆ ನಡೆಯಲಿದೆ.
ವೇದ ಪಂಡಿತರಿಂದ ಸತತ ಧಾರ ರುದ್ರಾಭಿಷೇಕ ಪೂಜೆ ಜರುಗಲಿದೆ. ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಮೇತ್ರೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ.