Is this internal reservation? Or is it an internal reservation? Suspicions are rife against the government. Injustice to the right-handed community: Markandeya

ಗoಗಾವತಿ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದ ಆಯೋಗ ಶಿಫಾರಸು ಮಾಡಿರುವ ಒಳ ಮೀಸಲಾತಿ ವರ್ಗೀಕರಣದಲ್ಲಿ ದಲಿತ ಸಮುದಾಯದಲ್ಲಿ ಬಲಗೈ ಛಲವಾದಿ ಬಣಗಳಿಗೆ ಅನ್ಯಾಯವಾಗಿದೆ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನಿಗದಿಮಾಡಿದ್ದ ಶೇ ೫.೫ ರ ಮೀಸಲಾತಿಯನ್ನೂ ಕಡಿತಗೊಳಿಸಿ ಶೇ ೫ಕ್ಕೆ ಇಳಿಸಿರುವುದನ್ನು ನಮ್ಮ ಸಮುದಾಯಕ್ಕೆ ತೀರ ಅನ್ಯಾಯ ಉಂಟಾಗಿದೆ ಎಂದು ಮಾರ್ಕಂಡೇಯ ಛಲವಾದಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಪತ್ರಿಕೆ ಹೇಳಿಕೆ ತಿಳಿಸಿ ಮಾತನಾಡಿ ನಿವೃತ್ತ ನ್ಯಾಯಮೂರ್ತಿಗಳು ಸಂವಿಧಾನದ ೩೪೧ನೇ ವಿಧಿಯಲ್ಲಿರುವ ಪರಿಶಿಷ್ಟ ಜಾತಿ ಪರಿಭಾಷೆಯನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸರ್ಕಾರ ನಿಗದಿ ಮಾಡಿರುವ ಕಾರ್ಯಸೂಚಿಯಂತೆ ಅವರು ವರದಿ ನೀಡಿದ್ದಾರೆ ಎಂದು ಹೇಳಿದರು. ನಮ್ಮ ಬಲಗೈ ಸಮುದಾಯಗಳಲ್ಲಿ ಹಲವಾರು ಉಪಜಾತಿಗಳು ಬರುತ್ತವೆ. ಅದನ್ನು ಕೂಡ ಅಂಕಿಅAಶ ಅನುಗುಣವಾಗಿ ಸಮೀಕ್ಷೆ ಮಾಡದೆ ಮತ್ತು ಬೆಂಗಳೂರು ನಗರದಲ್ಲಿ ಸುಮಾರು ೧೦ ಲಕ್ಷಕ್ಕೂ ಅಧಿಕ ಜನ ಸರ್ಕಾರ ನೌಕರರು ಮತ್ತು ಖಾಸಗಿ ಕಂಪನಿ ನೌಕರರು ವಾಸ ಮಾಡುತ್ತಿದ್ದು, ಆ ನಗರದಲ್ಲಿ ಕೂಡ ಸರಿಯಾಗಿ ಸಮೀಕ್ಷೆ ಆಗಿಲ್ಲ. ಕಾರಣ ಕೆಲವೊಬ್ಬರು ತಾವು ವಾಸ ಮಾಡುವಂತಹ ಮನೆಯು ಮೇಲ್ಜಾತಿ ಜನಾಂಗದವರಿಗೆ ಸೇರುತ್ತದೆ ಹಾಗಾಗಿ ನಾವು ಜಾತಿ ಹೇಳಿಕೊಂಡರೆ ನಮಗೆ ಮನೆ ಸಿಗುವುದಿಲ್ಲ ಎಂದು ಹಿಂಜರಿಕೆಯಿAದ ಅವರು ಜಾತಿಯನ್ನು ಸರಿಯಾಗಿ ನಮೂದಿಸುವುದಿಲ್ಲ ಮತ್ತು ಸರ್ವೆ ಮಾಡುವ ಅಧಿಕಾರಿಗಳು ಕೂಡ ಪ್ರತಿಯೊಂದು ಮನೆಮನೆಗೆ ಹೋಗಿ ಸರ್ವೆ ಸರಿಯಾಗಿ ಮಾಡಿರುವುದಿಲ್ಲ. ಹಾಗಾಗಿ ಆಧಿಕಾರಿಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸದೆ ನಿರ್ಲಕ್ಷ ಧೋರಣೆ ಮಾಡಿರುತ್ತಾರೆ. ಇದರಂತಹ ಅನೇಕ ಜಿಲ್ಲೆ ಸೇರಿದಂತೆ ಇತರೆ ದೊಡ್ಡ ನಗರಗಳಲ್ಲಿ ವಾಸ ಮಾಡುವಂತಹ ನೌಕರರಿಗೆ ಜಾತಿ ಎಂಬ ದೊಡ್ಡ ಕಂಟಕ ಎದ್ದುಕಾಡುತ್ತಿದೆ. ಹಾಗಾಗಿ ಈ ಜಾತಿ ಸಮೀಕ್ಷೆಯಲ್ಲಿ ಸರಿಯಾಗಿ ಸರ್ವೆಯಾಗದೆ ತಾರತಮ್ಯ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಹೇಳಿದರು. ಒಳಮೀಸಲಾತಿ ಜಾರಿಯಲ್ಲಿ ಕೂಡ ನಮ್ಮ ಸಮುದಾಯದ ಸಚಿವ ಸ್ಥಾನದಲ್ಲಿರುವ ಎಲ್ಲಾ ರಾಜಕೀಯ ನಾಯಕರು ಕೂಡ ಒಳ ಮೀಸಲಾತಿಯಲ್ಲಿ ಮೀನಾಮೇಷ ಮಾಡುತ್ತಿರುವುದು ನೋಡಿದರೆ ಅವರು ಕೂಡ ಸರ್ಕಾರ ಜೊತೆ ಕೈಜೋಡಿಸಿರುವರು ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಕಾರಣ ನಮ್ಮ ಬಲಗೈ ಸಮುದಾಯವು ದಲಿತ ಸಮುದಾಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವAತಹ ಸಮುದಾಯ ನಮ್ಮದಾಗಿದೆ. ಹೀಗಿರುವಾಗ ಅರೆಬರೆ, ತರಾತುರಿಯಲ್ಲಿ ಅವೈಜ್ಞಾನಿಕ ಸರ್ವೆ ಸಮೀಕ್ಷೆ ಮಾಡಿ ಒಳಮೀಸಲಾತಿ ಜಾರಿಗೊಳಿಸಲಿಕ್ಕೆ ಮುಂದಾಗುತ್ತಿರುವುದು ತುಂಬಾ ನಾಚಿಕೆಯ ಸಂಗತಿ ಇದಾಗಿದೆ ಎಂದರು. ಅವೈಜ್ಞಾನಿಕವಾಗಿ ಸಮೀಕ್ಷೆ ಮಾಡಿರುವ ಒಳ ಮೀಸಲಾತಿಯನ್ನು ಮುಂದಿನ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಯಾವುದೇ ಕಾರಣಕ್ಕೂ ಜಾರಿ ಮಾಡದೇ, ಅದನ್ನು ತಡೆಹಿಡಿದು ಮರುಸಮೀಕ್ಷೆ ಮಾಡಿ ಅಂಕಿ ಅಂಶವನ್ನು ಪರಿಶೀಲಿಸಿ ಎಲ್ಲಾ ಜನಾಂಗದ ಮುಖಂಡರನ್ನು ಸಭೆ ನಡೆಸಿ ಒಳಮೀಸಲಾತಿಯನ್ನು ಜಾರಿ ಮಾಡಬೇಕೆಂದು ಈ ಪತ್ರಿಕೆ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಹೇಳಿದರು. ಒಂದು ವೇಳೆ ಆ ರೀತಿ ಆಗದಿದ್ದರೆ ಮುಂದಿನ ದಿನಮಾನಗಳಲ್ಲಿ ನಮ್ಮ ಸಮುದಾಯದ ಎಲ್ಲಾ ಜನಾಂಗದವರು ಸೇರಿಕೊಂಡು ಇಡೀ ರಾಜ್ಯದಾದ್ಯಂತ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.