Breaking News

ಏಷಿಯನ್ ಟೇಕ್ವಾಂಡೋ ಕಂಚಿನ  ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ

Asian Taekwondo bronze medalist Lakshmi gets a grand welcome

ಬಲಗೈಯ ಇಲ್ಲದೆ ಹುಟ್ಟಿದ ಮಗುವನ್ನು ನೋಡಿದ ತಂದೆ ತಾಯಿ ಅಂದು ಕಣ್ಣೀರು ಹಾಕ್ಕಿದರು

ಜಾಹೀರಾತು

ಇಂದು ನಾಡವೇ ಮೆಚ್ಚುಗೆ ಹಾಗೆ ಸಾಧನೆ ಮಾಡಿರುವ ಲಕ್ಷ್ಮೀ ರಡರಟ್ಟಿ

Screenshot 2025 08 10 19 51 47 38 6012fa4d4ddec268fc5c7112cbb265e74653756634958597244 1024x550

ಮೂಡಲಗಿ : ಏಷಿಯನ್ ಟೇಕ್ವಾಂಡೋ ಕಂಚಿನ

ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ

ಮಲೇಶಿಯಾದಲ್ಲಿ ಇತ್ತಿಚೆಗೆ ಜರುಗಿದ ಎಷೀಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮೀ ರಡರಟ್ಟಿ ಅವರನ್ನು ಗುರುವಾರ ಮೂಡಲಗಿ ಯಲ್ಲಿ ತೆರೆದ ವಾಹನದಲ್ಲಿ ಮೇರವಣಿಗೆ ಮೂಲಕ ಸ್ವಾಗತಿಸಲಾಯಿತು.

ಮಲೇಶಿಯಾದಲ್ಲಿ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಭಾರತಕ್ಕೆ ಕೀರ್ತಿ ತಂದಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪಾ ರಡರಟ್ಟಿ ಗುರುವಾರ ಸಂಜೆ ತವರೂರಿಗೆ ಆಗಮಿಸಿದಾಗ ಅಭೂತಪೂರ್ವ ಸ್ವಾಗತ , ಸನ್ಮಾನಗಳು ಜರುಗಿದವು.

Screenshot 2025 08 10 19 51 32 84 6012fa4d4ddec268fc5c7112cbb265e72700999677336032125

ಮೂಡಲಗಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪಟ್ಟಣದ ಗಣ್ಯರು, ಮುಖಂಡರು, ಜನಪ್ರತಿನಿಧಿಗಳು ಹಾಗೂ ಸನ್ಮಾನಿಸಿ ಪೂರಕ್ಕೆ ಬರಮಾಡಿಕೊಂಡರು .
ಸಂಸ್ಥೆಯಿಂದ ತೆರೆದ ಜೀಪನಲ್ಲಿ ಮೇರವಣಿಗೆ ಜರುಗಿತು.

ಝಾಂಜ ಪಥಕ್, ವಿವಿಧ ವಾಧ್ಯ ಮೇಳದೊಂದಿಗೆ ಮಂಜುನಾಥ ಸೈನಿಕ ತರಬೇತಿ ಪ್ರಶಿಕ್ಷಣಾರ್ಥಿಗಳ ಉದ್ದನೆಯ ಸಾಲು , ನೂರಾರು ಸಂಖ್ಯೆಯ ಮಹಿಳೆಯರು, ದಾರಿಯುದ್ದಕ್ಕೂ ಪಟಾಕಿ, ಬಾನ್ ಬೀರುಸುಗಳು ಮೇರವಣಿಗೆಗೆ ಮೇರಗು ನೀಡಿದವು . ದಾರಿಯುದ್ದಕ್ಕೂ ಲಕ್ಷ್ಮೀ ಸಾಧನೆಗೆ ಜೈಕಾರ ಹಾಕಿದರು.

ವರದಿ : ಈಶ್ವರ ಢವಳೇಶ್ವರ ಮೂಡಲಗಿ

About Mallikarjun

Check Also

screenshot 2025 10 09 09 44 42 09 40deb401b9ffe8e1df2f1cc5ba480b12.jpg

ಭೀಮಣ್ಣ ಖಂಡ್ರೆಯವರು ಶರಣ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಅನರ್ಹ -ಸದ್ಗುರು ಬಸವಪ್ರಭು ಸ್ವಾಮೀಜಿ 

Bhimanna Khandre is not eligible for the Sharan Samaj Seva Ratna award - Sadhguru Basavaprabhu …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.