Shivsharan Nulia Chandaya, who upheld the value of Kayaka – K Kotresh

ಕೊಟ್ಟೂರು : ಪಟ್ಟಣ ಪಂಚಾಯಿತಿ ಕಾರ್ಯಾಲಯ ಶ್ರೀ ಗುರುಕೊಟ್ಟೂರೇಶ್ವರ ಸಭಾಂಗಣದಲ್ಲಿ ನಡೆದ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಶನಿವಾರ ಆಚರಿಸಲಾಗಿದ್ದು,
ಶಿವಶರಣ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅಖಿಲ ಕರ್ನಾಟಕ ಕುಳವ ಮಹಾಸಂಘದ ರಾಜ್ಯ ಉಪಕಾರ್ಯದರ್ಶಿಯಾದ ಕೆ ಕೊಟ್ರೇಶ್
ಇವರು 12ನೇ ಶತಮಾನದಲ್ಲಿ ಬಸವಾದಿ ಶರಣರು ಸತ್ಯ ಶುದ್ಧ ಕಾಯದ ಮೂಲಕ ದುಡಿಯುವುದನ್ನು, ದುಡಿದದ್ದರಲ್ಲಿ ಹೆಚ್ಚಿನದನ್ನು ಸಮಾಜಕ್ಕೆ ದಾಸೋಹದ ಮೂಲಕ ಹಂಚುವುದನ್ನು ಸಮಾಜಕ್ಕೆ ಕಲಿಸಿದರು. ನುಲಿಯ ಚಂದಯ್ಯನು ರಚಿಸಿದ ವಚನಗಳಲ್ಲಿ ಲಭ್ಯವಿರುವ 48 ವಚನಗಳಲ್ಲಿ ಕಾಯಕ ಮೌಲ್ಯವನ್ನು ಎತ್ತಿಹಿಡಿದಿರುವುದು ಕಂಡುಬರುತ್ತದೆ. ಗುರು, ಲಿಂಗ, ಜಂಗಮ ರೆಲ್ಲರಿಗೂ ಕಾಯಕ ಕಡ್ಡಾಯ ಎಂಬ ಸಂಗತಿ ಗೊತ್ತಾಗುತ್ತದೆ ಮತ್ತು ನಾವು ಬರೀ ಪೂಜೆಗೆ ಸೀಮಿತರಾಗದೇ ಅವರ ಆದರ್ಶಗಳನ್ನು ಪಾಲಿಸಿ, ಅವರ ಸಂದೇಶಗಳನ್ನು ಜನತೆ ತಲುಪಿಸಿದಲ್ಲಿ ಮಾತ್ರ ಸಾರ್ಥಕವಾಗುತ್ತದೆ ಎಂದರು
ಜಿಲ್ಲಾ ಡಿಎಸ್ಎಸ್ ಮುಖಂಡರಾದ ಬದ್ಧಿ ಮರಿಸ್ವಾಮಿ ಇವರು ಮಾತನಾಡಿ ನುಲಿಯ ಚಂದಯ್ಯ ನೂಲಿನಲ್ಲಿ ಹಗ್ಗಗಳನ್ನು ತಯಾರಿಸಿ ಮಾರುವ ಕಾಯದಲ್ಲಿ ತೊಡಗಿದ್ದು, ಹಗ್ಗತಯಾರಿಸಲು ಕೊಳದಲ್ಲಿ ಹುಲ್ಲನ್ನು ಕೊಯ್ಯುವಾಗ ಅಕಸ್ಮಿಕವಾಗಿ ಲಿಂಗ ನೀರಿನಲ್ಲಿ ಬಿದ್ದು ಹೋಗುತ್ತದೆ. ಆದರೆ ಲಿಂಗ ಕಳೆಯಿತೆಂದು ಚಿಂತಿಸದೇ ತಮ್ಮ ಕಾಯಕಕ್ಕೆ ಹೋಗುತ್ತಾರೆ. ಚಂದಯ್ಯನೇ ನಾನು ಬರುತ್ತೇನೆ ಕರೆದುಕೊ ಎಂದು ಲಿಂಗಯ್ಯನು ಬೆನ್ನುಬಿದ್ದರೂ ಒಪ್ಪುವುದಿಲ್ಲ. ಮಡಿವಾಳ ಮಾಚಿದೇವರ ಮಧ್ಯಸ್ಥಿಕೆ ವಹಿಸಿ ಅನುಭವ ಮಂಟಪದಲ್ಲಿ ಬಸವಣ್ಣನವರ ಎದುರು ಪಂಚಾಯಿತಿ ಮಾಡಿ ಕೊನೆಗೆ ಲಿಂಗವನ್ನು ಮರಳಿ ಧರಿಸಲು ಒಪ್ಪಿಸುತ್ತಾರೆ. ಈ ರೀತಿಯಾಗಿ ಅವರು ಪೂಜೆಯನ್ನು ಕಾಯಕವೆನ್ನದೇ, ಕಾಯಕವನ್ನೇ ಪೂಜೆಯಾಗಿ ಕಂಡಿರುವುದು ವ್ಯಕ್ತವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಅಧಿಕಾರಿಗಳು ಅಗಡಿ ಮಂಜುನಾಥ್, ಮುತ್ತುರಾಜ್ ಹಾಗೂ ಕೊರಚ ಕೊರಮ ಕೊರವ ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು