Public should maintain cleanliness in all parks: Dr. Shivakumar Malipatil

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ ಸಹಯೋಗದೊಂದಿಗೆ ಜುಲೈ-೮ ಶುಕ್ರವಾರ ನಗರದ ನೆಹರುಪಾರ್ಕ್ನಲ್ಲಿ ವನಮಹೋತ್ಸವ ಆಚರಿಸಲಾಯಿತು.
ಖ್ಯಾತ ವೈದ್ಯರಾದ ಲಯನ್ ಡಾ|| ದೇವರಾಜ ಅವರು ಗಿಡ ನೆಡುವುದರ ಮುಖಾಂತರ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್‌ರವರು ನಗರದ ಎಲ್ಲಾ ಗಾರ್ಡನ್‌ಗಳನ್ನು ಸಾರ್ವಜನಿಕರು ವಾಯುವಿಹಾರಕ್ಕೆ ಬಳಸಬೇಕು. ಸಾರ್ವಜನಿಕರು ಗಾರ್ಡನ್‌ಗಳ ಸ್ವಚ್ಛತೆ ಕಾಪಾಡಿ ಪರಿಸರ ಉಳಿಸಿಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಖಜಾಂಚಿಯಾದ ಲ. ಶಿವಪ್ಪ ಗಾಳಿ, ಲ. ನಾಗರಾಜ ಗುತ್ತೇದಾರ, ಲ. ಸುರೇಶ ಸಂಕನೂರು, ಲ. ಗುರುಪ್ರಸಾದ, ಬಸವರಾಜ ಮ್ಯಾಗಳಮನಿ, ಪ್ರಹ್ಲಾದ ಕುಲಕರ್ಣಿ, ಚಿದಾನಂದ ಕೀರ್ತಿ ಹಾಗೂ ಸಂಕಲ್ಪ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.