Memorial Festival of Sharan Sri Nuliyya Chandayya

ಕಾಯಕ : ನುಲಿಯ ಕಾಯಕ / ಹಗ್ಗ ಹೊಸೆದು ಮಾರುವುದು
ಸ್ಥಳ : ಶಿವಣಗಿ, ವಿಜಯಪುರ ಜಿಲ್ಲೆ
ಜಯಂತಿ : ನೂಲ ಹುಣ್ಣಿಮೆಯಂದು
ಲಭ್ಯ ವಚನಗಳ ಸಂಖ್ಯೆ : ೪೮
ಅಂಕಿತ : ಚಂದೇಶ್ವರ ಲಿಂಗ
ಶರಣ ನುಲಿಯ ಚಂದಯ್ಯನವರು ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನಿರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು, ಹಗ್ಗ ಹೊಸೆದು, ಮಾರಿ, ಬಂದ ಹಣದಿಂದ ಗುರು-ಜಂಗಮರ ಸೇವೆ ಸಲ್ಲಿಸಿಕೊಂಡಿರುತ್ತಾರೆ.
ಶೂನ್ಯಸಂಪಾದನೆ ಮತ್ತು ಪುರಾಣಗಳಲ್ಲಿ ಇವರ ಕಾಯಕನಿಷ್ಠೆಯ ಕಥೆ ವರ್ಣಿತವಾಗಿದೆ. ಶರಣ ಹೆಂಡದ ಮಾರಯ್ಯನವರು ತನ್ನೊಂದು ವಚನದಲ್ಲಿ ಇವರ ಘನವ್ಯಕ್ತಿತ್ವವನ್ನು ನಿರೂಪಿಸಿದ್ದಾರೆ.
ಕಾಯಕಯೋಗಿ:
ಇಷ್ಟಲಿಂಗದ ಕೈಯಿಂದಲೇ ಹಗ್ಗ ಮಾರುವ ಕಾಯಕ ಮಾಡಿಸಿದವರು. ಒಂದು ದಿವಸಾ ಕೆರೆಯದಡದಲ್ಲಿ ಬೆಳೆದಿದ್ದಾ ಹುಲ್ಲನ್ನು ಕೊಯ್ದ ಹೊರೆಕಟ್ಟುವಾಗ ಕೊರಳಲ್ಲಿದ್ದ ಲಿಂಗಯ್ಯ ಜಾರಿ ಕೆರೆಯ ನೀರಿನಲ್ಲಿ ಅಡಗಿ ಕುಳಿತದ್ದು ಅವರ ಗಮನಕ್ಕೆ ಬರುವುದಿಲ್ಲಾ ಗುರು, ಜಂಗಮರು ದಾಸೊಹದಲ್ಲಿಯೆ ಲಿಂಗಪೂಜೆಯ ಸಾರ್ಥಕ್ಯ ಕಂಡುಕೊಳ್ಳುವ ಚಂದಯ್ಯನವರನ್ನು ಬಿಟ್ಟು ಇರುವ ಮನಸ್ಸು ಲಿಂಗಯ್ಯನಿಗು ಇರಲಿಲ್ಲಾ, ಆದರೆ ಶರಣ ತಂದೆ ನುಲಿಯ ಚಂದಯ್ಯನವರ ಭಕ್ತಿಯನ್ನು ಮೆಚ್ಚಿ ಸ್ವತಃ ಲಿಂಗದೇವರೆ ನುಲಿಯ ಚಂದಯ್ಯನವರಿಗೆ ಸೇವೆ ಮಾಡಬೇಕಂದು ಉದ್ದೇಶ ಪೂರ್ವಕವಾಗಿಯೆ ನಿರಿಗೆ ಜಾರಿ ಬಿದ್ದರು ಅನ್ನುವುದು ಶೂನ್ಯ ಸಂಪಾದನೆಯಲ್ಲಿ ತಿಳಿಸಿರುವುದು ಕಾಣುತ್ತೇವೆ. ಲಿಂಗಯ್ಯ ಚಂದಯ್ಯನವರ ಮನೆಯ ಮಗನಾಗಿ, ಚಂದಯ್ಯನವರು ಹೊಸೆದ ಕಣ್ಣಿಗಳನ್ನ ಲಿಂಗಯ್ಯನವರಿಗೆ ಮಾರಿಕೊಂಡು ಬರಲು ಹೇಳುತ್ತಾರೆ, ಆವಾಗ ಲಿಂಗಯ್ಯ ಅಪ್ಪ ಬಸವಣ್ಣನವರ ಮನೆಗೆ ಹೋಗಿ ಕಣ್ಣಿಗಳನ್ನ ಮಾರಾಟ ಮಾಡಿ ಅದರ ಬೆಲೆಗಿಂತ ಜಾಸ್ತಿ ದುಡ್ಡು ತಂದಿರುತ್ತಾರೆ ಅದನ್ನ ನೋಡಿದ ಚಂದಯ್ಯನವರು ಕೋಪಗೊಂಡು, ಒಂದು ಕಣ್ಣಿ(ಹಗ್ಗ)ಕ್ಕೆ ಯಾರೊ ಸಾವಿರ ಹೊನ್ನು ಕೊಟ್ಟರೆಂದು ಅದನ್ನ ಹೊತ್ತು ತರಲು ನಿನಗೆ ಬುದ್ದಿ ಕೆಟ್ಟಿದೆಯೆ ಲಿಂಗಯ್ಯ ಅಂತ, ಕಾಯಕಕ್ಕೆ ಸಮನಾದ ಕೂಲಿಯನ್ನು ಕೊಳ್ಳಬೇಕಲ್ಲದೆ ದುರಾಶೆ ಪಡಬಾರದು ಅಂತ ಕಾಯಕ ನಿಷ್ಠೆಯನ್ನ ಮೆರೆಯುತ್ತಾರೆ.
ಕಲ್ಯಾಣ ಕ್ರಾಂತಿಯ ನಂತರ ಚಂದಯ್ಯನವರು (ಈಗಿನ ನುಲೆನೂರು) ಪದ್ಮಾವತಿ ಎಂಬ ಊರಿಗೆ ಬರುತ್ತಾರೆ ದುಮ್ಮಿರಾಯನ ಹೆಂಡತಿಯಾದ ಪದ್ಮಾವತಿ ಚಂದಯ್ಯನವರಿಂದ ಧರ್ಮೊಪದೆಶವನ್ನ ಪಡೆದು ಅವರ ಅಪ್ಪಣೆಯ ಪ್ರಕಾರ ಒಂದು ಕೆರೆಯನ್ನು ಕಟ್ಡಿಸುತ್ತಾರೆ ಆ ಕೆರೆಗೆ ಇಂದಿಗೂ ಪದ್ಮಾವತಿ ಅಂತಾನೆ ಸರಕಾರಿ ದಾಖಲೆಗಳುಂಟು. ಕೆರೆ ಸಿದ್ಧವಾದ ಮೇಲೆ ಕೆರೆಯ ಏರಿಯ ಮೇಲೊಂದು ಚಂದಯ್ಯನವರಿಗೊಸ್ಕರ ಮೂರಂಕಣದ ಮಠವೊಂದನ್ನ ಕಟ್ಟಿಸಿಕೊಡುತ್ತಾರೆ, ಆ ಮಠದಲ್ಲಿ ಚಂದಯ್ಯ ಶರಣರು ಕೊನೆಯವರೆಗೂ ಅನುಭಾವ ಗೋಷ್ಠಿ ನಡೆಸುತಿದ್ದರು ಅನ್ನುವುದು ತಿಳಿದು ಬರುತ್ತದೆ, ಕೆಲವು ವರ್ಷಗಳ ನಂತರ ಚಂದಯ್ಯನವರು ಲಿಂಗೈಕ್ಯರಾಗಲು ಅವರ ಕ್ರಿಯಾ ಸಮಾಧಿಯನ್ನು ಅವರ ಮಠದಲ್ಲೆ ಮಾಡಲಾಗಿತ್ತು ಅಂತ ತಿಳಿದು ಬರುತ್ತದೆ. ಇವರ ಲಿಂಗೈಕ್ಯದ ನಂತರ ಪದ್ಮಾವತಿಯನ್ನುವ ಊರು ಚಂದಯ್ಯನವರ ಕಾಯಕ ಸುಚಿಸುವ ನುಲೆನೂರು ಎಂದಾಗಿ ಕರೆಸಿಕೊಳ್ಳುತ್ತಿದೆ.
ಅಲ್ಲದೆ, ಬನವಾಸಿಯ ಮದುಕೇಶ್ವರ ದೇವಾಲಯದಲ್ಲಿ ಕಲ್ಲು ಮಂಟಪ ಇದೆ ಅದರಲ್ಲಿ ನುಲಿಯ ಚಂದಯ್ಯನವರ, ಅಗ್ಗವಣಿಯ ಹೊನ್ನಯ್ಯ ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣಾ ಜೇಡರ ದಾಸಿಮಯ್ಯ, ಆಯ್ದಕಿ ಮಾರಯ್ಯಯ, ಹಾಳಿನ ಹಂಪಣ್ಣ, ಬ್ರಹ್ಮಯಗಳ ಮೂರ್ತಿಗಳನ್ನ ಅವರವರ ಅಂಕಿತ ನಾಮದೊಡನೆ ಕೆತ್ತಿದ್ದಾರೆ.
ಇವರ ವಚನಗಳೆಲ್ಲವೂ ಕಾಯಕ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ. ಗುರು, ಲಿಂಗ, ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ. ಭಾವ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ. “ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಮಾತ್ರ ಲಿಂಗಾರ್ಪಿತವಾಗುತ್ತದೆ” ಎಂಬಂಥ ಮಾತುಗಳಲ್ಲಿ ಇವರ ಕಾಯಕದ ಪರಿಕಲ್ಪನೆ ಸ್ಪಷ್ಟವಾಗಿದೆ.
ಇವರದೊಂದು ವಚನ:
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ..
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು..
ಗುರುವಾದಡೂ ಚರಸೇವೆಯ ಮಾಡಬೇಕು..
ಲಿಂಗವಾದಡೂ ಚರಸೇವೆಯ ಮಾಡಬೇಕು..
ಜಂಗಮವಾದಡೂ ಚರಸೇವೆಯ ಮಾಡಬೇಕು ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು…