Mahasabha to Save Waqf and Protect Constitution on August 11th:

ಗಂಗಾವತಿ: ಇದೇ ದಿನಾಂಕ 11 ರಂದು ಸೋಮವಾರ ಬೆಳಗ್ಗೆ 10:00ಕ್ಕೆ ನೆಡೆಯಲ್ಲಿರುವ ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಎಂಬ ಮಹಾಸಭೆಯ ಕಾರ್ಯಕ್ರಮವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಇವರಿಂದ ಕನಕಗಿರಿ ರಸ್ತೆಯ ಎಪಿಎಂಸಿ ಕ್ರೀಡಾಂಗಣದಲ್ಲಿ ನಡೆಯಲು ಉದ್ದೇಶಿಸಲಾಗಿದೆ ಎಂದು ಸಮಾಜ ಬಾಂಧವರು ಪತ್ರಿಕಾಗೋಷ್ಠಿ ನಡೆಸಿ ವಿಷಯ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೂಫಿ ಪ್ರವಚನಕಾರರಾದ ಸೈಯದ್ ಸರ್ವರ್ ಚಿಸ್ತಿ ವಹಿಸಿಕೊಳ್ಳಲಿದ್ದು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಉಪಸ್ಥಿತರಿರಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಬಿ.ಖಾದ್ರಿ ವಹಿಸಿಕೊಳ್ಳಲಿದ್ದಾರೆ, ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಸೈಯದ್ ತನ್ವೀರ್ ಆಶ್ಮಿ ಬಿಜಾಪುರ, ಅಬೂತ ಲಿಬ ಕಲ್ಕತ್ತಾ, ಮಕಸೂದ್ ಇಮ್ರಾನ್ ರಶಾದಿ ಬೆಂಗಳೂರು, ಶಿವಸುಂದರ್ ಬೆಂಗಳೂರು,
ಇಪ್ತಖಾರ್ ಅಹಮದ್ ಕಾಶ್ಮೀ, ಮಹಮ್ಮದ್ ಅಲಿ ಹೀಮಾಯತಿ ಕೊಪ್ಪಳ, ಶೇಕ್ ಫರಿದ್ ಉಮ್ರಿ ಮಾನ್ವಿ ಹಾಗೂ ಯುವ ಮುಖಂಡರಾದ ಅಬ್ದುಲ್ ಮಸೀದ್ ಮೈಸೂರ್ ಇವರು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಬಗ್ಗೆ ಸವಿಸ್ತಾರವಾಗಿ ಮಾತನಾಡಲಿದ್ದಾರೆ ಹಾಗಾಗಿ ಸಮಾಜ ಬಾಂಧವರು ಕೊಪ್ಪಳ, ರಾಯಚೂರು, ವಿಜಯನಗರ, ಗದಗ, ಬಳ್ಳಾರಿ ಜಿಲ್ಲೆಯ ಸಮಸ್ತ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ನಗರ ಸಭೆಯ ಹಿರಿಯ ಸದಸ್ಯರಾದ ಶಮಿದ್ ಮನಿಯಾರ್. ಮುಸ್ತಫಾ ಕಮಾಲ್. ತುಂಗಭದ್ರಾ ಹುಸೇನ್ ಸಾಬ್.ಆಸಿಫ್.ಆಯುಬ್ ಖಾನ್. ಅಬ್ಜಲ್ ಮೌಲಾನ ಸೇರಿದಂತೆ ಸಮಾಜದ ಮುಖಂಡರು.ಹಿರಿಯರು ಭಾಗವಹಿಸಿದ್ದರು.