Distribution of bags, books and pens to school children with the help of donors.

ವರದಿ : ಬಂಗಾರಪ್ಪ .ಸಿ .
ಹನೂರು:ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುವುದು ಶಿಕ್ಷಕರ ಕರ್ತವ್ಯವಾದರೆ , ಅದರ ಜೊತೆಯಲ್ಲಿ ಮಕ್ಕಳುಗಳ ಮತ್ತು ದಾನಿಗಳ ಸಹಾಯದಿಂದ ಇಂತಹ ಕೆಲಸ ಮಾಡುವುದರಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಅನುಕೂಲಕರವಾದ ವಾತಾವರಣ ನಿರ್ಮಿಸಲು ಅವಕಾಶ ನೀಡಿದಂತಾಗುತ್ತದೆ ಎಂದು ಧಾನಿಗಳಾದ ವಿನಯ್ ತಿಳಿಸಿದರು ,
ತಾಲ್ಲೂಕಿನ ಅಜ್ಜೀಪುರ ಮತ್ತು ಸೂಳೇರಿ ಪಾಳ್ಯ ಗ್ರಾಮ ಪಂಚಾಯಿತಿ ಸರಹಧ್ಧಿನ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳ ಕಲಿಕೆಗೆ ಪೂರಕವಾದ ಸಾಮಾಗ್ರಿಗಳನ್ನು ಬೆಂಗಳೂರಿನ ವಿನಯ್ ಸ್ನೇಹ ಬಳಗ ವತಿಯಿಂದ ವಿತರಿಸಲಾಯಿ
ಅಜ್ಜಿಪುರ , ಕುರುಬರದೊಡ್ಡಿ ದೊಮ್ಮನಗದ್ದೆ ವಡ್ಡರದೊಡ್ಡಿ ನಾಗಣ್ಣನಗರ ಬಸಪ್ಪನ ದೊಡ್ಡಿ ಕಾಂಚಳ್ಳಿ ಮಂಚಾಪುರ ಪಚ್ಚದೊಡ್ಡಿ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಮತ್ತು ಪ್ರಾಥಮಿಕ ಪೂರ್ವ ಶಿಕ್ಷಣ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬೆಂಗಳೂರಿನ ವಿನಯ್ ಸ್ನೇಹ ಬಳಗದ ಚಿರಾಗ್ ಮತ್ತು ಪಾವನ ರವರು ಎರಡು ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಒಂದು ಸಾವಿರ ಶಾಲಾ ಬ್ಯಾಂಗ್ ವಿತರಣೆ ಮಾಡಿದರು.
ಇದಲ್ಲದೆ ಬೆಂಗಳೂರಿನ ಮಹೇಂದ್ರ ಮೊಣತ್ ಜೈನ್ ಮಾರುತಿ ಮೆಡಿಕಲ್ ರವರ ವತಿಯಿಂದ ಪ್ರತಿ ಮಕ್ಕಳಿಗೆ ಐದು ಪುಸ್ತಕ ಒಂದು ಪೆನ್ ಒಂದು ಪೆನ್ಸಿಲ್ ಗಳಂತೆ ಒಂದು ಸಾವಿರ ಮಕ್ಕಳಿಗೆ ಸರ್ಕಾರಿ ಶಾಲೆ ಮಕ್ಕಳು ಮತ್ತು ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಿದರು.
ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ನಾರಾಯಣ್ ಮಾತಾಡಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರ ಮಕ್ಕಳು ಓದುತ್ತಿದ್ದು ಸರ್ಕಾರಿ ಶಾಲೆಗಳು ಉಳಿಯಬೇಕು. ಅಲ್ಲಿ ಓದುವ ಬಡವರ ಮಕ್ಕಳು ಕಲಿಕೆಯಲ್ಲಿ ಯಾವ ಖಾಸಗಿ ಶಾಲಾ ಮಕ್ಕಳಿಗೂ ಕಮ್ಮಿ ಇರಬಾರದು ಸರ್ಕಾರಿ ಶಾಲೆಗಳಲ್ಲಿ ಓದಿಗೆ ಪೂರಕ ವಾತಾವರಣ ಮತ್ತು ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರದ ಜೊತೆ ಕೈಜೋಡಿಸಿ ದಾನಿಗಳು ಸಹ ಕಲಿಕೆ ಸಾಮಗ್ರಿಗಳನ್ನು ಒದಗಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿರಲಿ ಎಂಬ ಉದ್ದೇಶದಿಂದ ಮಕ್ಕಳ ಕಲಿಕೆಗೆ ಅಗತ್ಯವಾದ ಪುಸ್ತಕ ಪೆನ್ ಪೆನ್ಸಿಲ್ ಬ್ಯಾಗ್ ಇನ್ನಿತರ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದು ಆಯಾ ಶಾಲಾ ಮುಖ್ಯ ಶಿಕ್ಷಕರು ಇದರ ಸದುಪಯೋಗವನ್ನು ಮಕ್ಕಳಿಗೆ ಓದಗಿಸುವ ಜೊತೆಗೆ ಇತರ ಮಕ್ಕಳು ಸರ್ಕಾರಿ ಶಾಲೆಗಳತ್ತ ಗಮನ ಹರಿಸುವಂತಾಗಬೇಕು. ಎಂದು ತಿಳಿಸಿದರು.
ಇದೇ ಸಮಯದಲ್ಲಿ ಬೆಂಗಳೂರಿನ ಚಿರಾಗ್ , ಪಾವನಾ, ಬಸಪ್ಪನ ದೊಡ್ಡಿ ಶಾಲೆ ಮುಖ್ಯ ಶಿಕ್ಷಕ ವೀರಪ್ಪ ,
ಹಿರಿಯ ಪತ್ರಕರ್ತರರಾದ ಪುಟ್ಟಸ್ವಾಮಿ ,
ರಾಜ್ಯ ಮಟ್ಟದ ಮಾದ್ಯಮ ಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ .ಸಿ. ಸಹ ಶಿಕ್ಷಕರಾದ ಸೋಮಣ್ಣ ದೊರೆಸ್ವಾಮಿ ಪುಟ್ಟರಾಮು ಸುಧಾಮಣಿ ಮುತ್ತಮ್ಮ ,ಪತ್ರಕರ್ತರುಗಳಾದ ಕಾಂಚಳ್ಳಿ ಬಸವರಾಜು ,ವಿಜಯ ಕುಮಾರ್ , ಮುಖಂಡ ಕಾಂಚಳ್ಳಿ ಜಡೇಸ್ವಾಮಿ ಶಾಲಾ ಮಕ್ಕಳು ಸೇರಿದಂತೆ ಇನ್ನಿತರರು ಹಾಜರಿದ್ದರು.