Farmers angry against Bellary AE for his negligent attitude
KIADB AE A. Govinda Nayak should be transferred: Yamanurabhat

ಗಂಗಾವತಿ: ಕಾರ್ಖಾನೆಗೆ ಭೂಮಿ ಕಳೆದುಕೊಂಡ ರೈತರ ಜಮೀನುಗಳಲ್ಲಿನ ಮನೆಮಟ್ಟುಗಳ ಮೌಲ್ಯಮಾಪನ ಮಾಡಬೇಕಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಳ್ಳಾರಿ ವಲಯ ಕೇಚೇರಿಯ ಸಹಾಯಕ ಇಂಜೀನಿಯರ್ ಎ.ಗೋವಿಂದ ನಾಯಕ ನಿರ್ಲಕ್ಷö್ಯ ಧೋರಣೆ ತಾಳುತ್ತಿದ್ದು, ರೈತರ ಅಕ್ರೊಶಕ್ಕೆ ಕಾರಣವಾಗಿದ್ದು, ಕೂಡಲೆ ವರ್ಗಾಯಿಸಿ ಅಗತ್ಯ ದಕ್ಷ ಸಿಬ್ಬಂದಿಯನ್ನು ನೇಮಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಅಧ್ಯಕ್ಷ ಯಮನೂರ್ ಭಟ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರಕಾರದ ಇಚ್ಛಾಸಕ್ತಿಯಿಂದ ಕಾರ್ಖಾನೆಗಳು ನಮ್ಮ ಭಾಗಗಳಲಿ ತಲೆ ಎತ್ತುತ್ತಿದ್ದು, ಜಮೀನು ಕೂಡಾ ವಶವಾಗುತ್ತಿದೆ, ಆದರೆ ಸಿಬ್ಬಂದಿಗಳ ತಾತ್ಸಾರ ಭಾವನೆಯಿಂದಾಗಿ ರೈತರಿಗೆ ಸಕಾಲಕ್ಕೆ ಪರಿಹಾರ ದೊರೆಯದೆ ದಿನವು ಕಚೇರಿಗಳಿಗೆ ಎಡತಾಕುವಂತಾಗಿದೆ, ಕೊಪ್ಪಳ ಜಿಲ್ಲೆ ಸೇರಿದಂತೆ ವಡ್ಡು ನಾಗಲಾಪುರ, ಗರಗ, ಢಣಾಪುರ, ಢಣನಾಯಕನ ಕರೆ ಬಸಾಪುರ ಇತರೆ ಭಾಗಗಳ ರೈತರು ಅಧಿಕಾರಿಗಳ ಸೋಮಾರಿತನಕ್ಕೆ ಬೇಸತ್ತಿದ್ದು ಬಳ್ಳಾರಿ ಕೆಐಎಡಿಬಿ ಕಚೇರಿಗೆ ಕರವೆಯೊಂದಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ ಎಂದು ಅಕ್ರೊಶ ವ್ಯಕ್ತಪಡಿಸಿದ್ದಾರೆ.
ಭೂಮಿ ಕಳೆದುಕೊಂಡ ರೈತರ ಜಮೀನಿನಲ್ಲಿನ ಮನೆ, ಶೆಡ್ಡು, ಪಂಪ್ ಸೆಟ್, ಕೊಳವೆ ಬಾವಿ, ಪೈಪ್ ಲೈನ್ ಸೇರಿದಂತೆ ಇತರೆ ಪರಿಹಾರದ ಮೌಲ್ಯಮಾಪನ ಬೇಗ ಮಾಡಿದರೆ, ರೈತರಿಗೆ ಸಕಾಲಕ್ಕೆ ಪರಿಹಾರ ದೊರೆಕಿ, ಬೇರೆ ಕೃಷಿ ಭೂಮಿಗೆ ಬಂಡವಾಳ ಹೂಡಲು ಅನುಕೂಲವಾಗುತ್ತದೆ, ಆದರೆ ಎಇ ಎ. ಗೋವಿಂದ ನಾಯಕ ಮಾತೆತ್ತಿದರೆ ಒಬ್ಬ ಸಿಬ್ಬಂದಿ ಎಂದು ಸಬೂಬು ಹೇಳುತ್ತಾ ಕಾಲ ದೂಡುತ್ತಿದ್ದಾನೆ. ಒಂದು ವರ್ಷದಿಂದಲೂ ಪರಿಹಾರ ಮಾಪನವಾಗದ ರೈತರು ಅಲೆದು ಬೇಸತ್ತು ಹೋಗಿದ್ದಾರೆ. ಹೊದಾಗಿ ಕಚೇರಿಗೆ ಆಗಮಿಸಿರುವ ಅಭಿವೃದ್ಧಿ ಅಧಿಕಾರಿ ಜನಾರ್ದನ ನಾಯಕ ಅವರು, ಕೂಡಲೆ ಚುರುಕಿನಿಂದ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಸಂಬAಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ನೇಮಿಸಿಕೊಳ್ಳಬೇಕಿದ್ದು, ನೆನೆಗುದಿಗೆ ಬಿದ್ದಿರುವ ರೈತರ ಕೆಲಸಗಳನ್ನು ಪೂರ್ಣಗೊಳಿಸಬೇಕು ಇಲ್ಲದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕೈಗಾರಿ ಸಚಿವರು, ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಲ್ಲದೆ ಬಳ್ಳಾರಿ ಕೆಐಎಡಿಬಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ಕೂಡಲಾಗುವುದು ಎಂದು ಯಮನೂರ್ ಭಟ್ ಎಚ್ಚರಿಕೆ ನೀಡಿದ್ದಾರೆ.