Strong condemnation of attacks on media YouTubers: Demand for arrest of accused

ತಿಪಟೂರು.ಧರ್ಮಸ್ಥಳ ಹಾಗೂ ಉಜಿರೆ ವ್ಯಾಪ್ತಿಯಲ್ಲಿ ಎಸ್ಐಟಿ ಗೆನಡೆಸುತ್ತಿರುವ ತನಿಖೆ ಬಗ್ಗೆ ವರದಿ ಮಾಡಲು ತೆರಳಿದ್ದ ವಿವಿಧ ಯೂಟ್ಯೂಬ್ ಮಾಧ್ಯಮಗಳ ಪತ್ರಕರ್ತರ ಮೇಲೆ ಹಾಗೂ ಟಿವಿ ವಾಹಿನಿ ವರದಿಗಾರರ ಹಾಗೂ ಕ್ಯಾಮರಾ ಮ್ಯಾನ್ ಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ. ಈ ಗುಂಪು ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿರಿಯ ಪತ್ರಕರ್ತ ಡಾ.ಭಾಸ್ಕರ್ ಆಗ್ರಹಿಸಿದರು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಯಾವುದೇ ಆಕ್ಷೇಪ , ಅಭಿಪ್ರಾಯ ಸಲ್ಲಿಸಲು ಅಥವಾ ಪ್ರತಿಭಟನೆಗೆ ಕಾನೂನು ವ್ಯಾಪ್ತಿಯಲ್ಲಿ ಸಾಕಷ್ಟು ಅವಕಾಶಗಳು ಇರುವಾಗ, ಮಾಧ್ಯಮ ಪ್ರತಿನಿಧಿಗಳ ಮೇಲೆ ನೇರ ದೈಹಿಕ ಹಲ್ಲೆ ನಡೆಸುವುದು ಮಾಧ್ಯಮದ ಧ್ವನಿ ಹತ್ತಿಕ್ಕುವ ಪ್ರಜಾತಂತ್ರ ವಿರೋಧಿ ನಿಲುವು ಆಗಿರುತ್ತದೆ. ಈ ರೀತಿಯ ನಿಲುವನ್ನು ಪತ್ರಕರ್ತರ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಹಲ್ಲೆಗೊಳಗಾಗಿರುವ ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು
ಎಸ್ಐಟಿ ತನಿಖೆಯು ಸರ್ಕಾರದ ಆದೇಶ ಹಾಗೂ ಕಾನೂನು ಪರಿವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಪಾರದರ್ಶಕವಾಗಿ ವರದಿಗಾರಿಕೆ ಮಾಡುವುದರ ವಿರುದ್ಧ ತಡೆವೊಡ್ಡುವುದು ಕಾನೂನು ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿರುತ್ತದೆ ಇಂಥ ದುಷ್ಕರ್ಮಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗಿದೆ
ವರದಿ ಮಂಜು ಗುರುಗದಹಳ್ಳಿ
Kalyanasiri Kannada News Live 24×7 | News Karnataka
