Prof. B. Krishnappa's 88th birthday celebration in Bellary: Parashuram Kerehalli

ಕೊಪ್ಪಳ : ಎರಡನೇ ಅಂಬೇಡ್ಕರ್ ಎಂದೇ ಹೆಸರು ವಾಸಿಯಾಗಿರುವ ಪ್ರೂ. ಬಿ ಕೃಷ್ಣಪ್ಪ ರವರ 88 ನೇ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಕರ್ತರ ರಾಜ್ಯ ಮಟ್ಟದ ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶ ನಾಳೆ ದಿನಾಂಕ 8 ರಂದು ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಬಿ ಕೃಷ್ಣಪ್ಪ ಬಣ)ದ ಜಿಲ್ಲಾಧ್ಯಕ್ಷ ಪರಶುರಾಮ್ ಕೆರಹಳ್ಳಿ ಹೇಳಿದರು.
ಅವರು ಬುಧವಾರ ಗೋಷ್ಠಿ ಉದ್ದೇಶಿಸಿ ಮಾತನಾಡಿ ಕರ್ನಾಟಕದಲ್ಲಿ 70ರ ದಶಕದಲ್ಲಿ ದಲಿತರ ಮೇಲೆ ಜಾತಿ ಬೇದ, ಲಿಂಗಭೇದ ದೌರ್ಜನ್ಯ ದಬ್ಬಾಳಿಕೆಗಳು ಉತ್ತುಂಗ ಸ್ಥಿತಿಯಲ್ಲಿದ್ದ ಸಂದರ್ಭ ದಲಿತರ ಭೂಬಳಕೆ ದಲಿತ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಸಾಮಾಜಿಕ ಅಸಮಾನತೆ ಸಜೀವ ದಹನ ನೋಡಿ ಸಹಿಸದ ಅಸ್ಪೃಶ್ಯತೆಯನ್ನ ಅನುಭವಿಸಿ, ಸಿಡಿದೆದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿ ಸಿದ್ದಿಪುರ ಬೂಹೋರಾಟ ಚಂದ್ರಗುತ್ತಿ ಬೆತ್ತಲೆ ಸೇವೆ ದೇವದಾಸಿ ಪದ್ಧತಿ, ಕುಂಬಾರ ಅನುಸೂಯಮ್ಮಳ ಅತ್ಯಾಚಾರ ವಿರೋಧಿಸಿದ ತಂದೆ ಶೇಷಗಿರಿಯಪ್ಪನ ಕೊಲೆ ಮಾಡಿ ಸಟ್ಟುಹಾಕ್ಕಿದ್ದನ್ನು ಖಂಡಿಸಿ ಹಲವಾರು ಹೋರಾಟಗಳನ್ನು ರೂಪಿಸಿ ನೊಂದ ದೌರ್ಜನ್ಯ ಕೊಳಗಾದ ವರಿಗೆ ದನಿಯಾಗಿ ಭೂ ಮಾಲೀಕರು ಬಂಡವಾಳ ಶಾಹಿಗಳಿಗೆ ಹಾಗೂ ಆಳುವ ಸರ್ಕಾರಗಳಿಗೆ ಸಿಂಹ ಸ್ವಪ್ನವಾಗಿ ಕಾಡಿ ದಲಿತಪರ ಕಾನೂನುಗಳು ಜಾರಿಯಾಗಲು ಕಾರಣಕರ್ತರಾದರು ಪ್ರೋ ಬಿ.ಕೃಷ್ಣಪ್ಪ ಎಂದು ಹೇಳಿದರು.
ನಂತರ ಮಾತನಾಡಿದ ರಾಜ್ಯ ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಮಾತನಾಡಿ ಈ ಸಮಾವೇಶದಲ್ಲಿ ವಿವಿಧ ಜಿಲ್ಲೆಗಳಿಂದ ಬಹಳಷ್ಟು ಜನ ಪಾಲ್ಗೊಳ್ಳುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ DSS ಜಿಲ್ಲಾಧ್ಯಕ್ಷ ಪರಶುರಾಮ್ ಕೆರೆಹಳ್ಳಿ,
ಮಾರ್ಕಂಡಪ್ಪ ಹಲಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಗವಿಸಿದ್ದಪ್ಪ ಕುಣಿಕೇರಿ, ಜಿಲ್ಲಾ ಸಂಘಟನಾ ಸಂಚಾಲಕರು, ಶರಣಪ್ಪ ಓಜನಹಳ್ಳಿ ಭೀಮ ಆರ್ಮಿ ಜಿಲ್ಲಾಧ್ಯಕ್ಷ, ಮಂಜುನಾಥ್ ನಡುಲಮನೆ ಸಂಘಟನಾ ಸಂಚಾಲಕರು, ಅಂದಪ್ಪ ಹಡಪದ್ ಇರ್ಕಲ್ಗಡ ಹೋಬಳಿ ಘಟಕದ ಅಧ್ಯಕ್ಷರು, ಹಡಪದ ಸಮಾಜದ ತಾಲೂಕ ಅಧ್ಯಕ್ಷರು, ಸಂಜಯ್ ದಾಸರ್ ಅಲೆಮಾರಿ ಸಮಾಜದ ಅಧ್ಯಕ್ಷರು, ರಾಮಲಿಂಗಯ್ಯ ಶಾಸ್ತ್ರಿ, ಸಿದ್ದು ದದೆಗಲ್, ಮಂಜು ಸಂಗಾಪುರ್, ಲಲಿತಾ ಜಿ, ಬಸ್ಸಮ್ಮ ಸಂಗನಾಲ್, ಗಿಣಿಗೇರಿ,ರಮೇಶ್ ಕೆರೆಹಳ್ಳಿ ಯುವ ವಕೀಲರು, ನಾಗರಾಜ್ ವಕೀಲರು, ನಾಗರಾಜ್ ಹೊನ್ನಕೇರಿ, ಮಂಜು ದೊಡ್ಮನಿ,
ಶಿವು ಬೇಳೂರು, ಕನಕಪ್ಪ ವನಬಳ್ಳಾರಿ, ಮರಿಸ್ವಾಮಿ ಓಜನಹಳ್ಳಿ, ಹನುಮಂತ ಕೆರೆಹಳ್ಳಿ ವಿದ್ಯಾರ್ಥಿ ಘಟಕದ ಅಧ್ಯಕ್ಷ,


